

ನವದೆಹಲಿ: ಎಲಾನ್ ಮಸ್ಕ್ ಟ್ವಿಟರ್ನ ಐಕಾನಿಕ್ ಬ್ಲೂ ಬರ್ಡ್ ಲೋಗೋವನ್ನು ಕೈಬಿಟ್ಟು ಅದನ್ನು 'ಎಕ್ಸ್' ಎಂದು ಬದಲಾಯಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನ ಮಹತ್ವದ ರೂಪಾಂತರಕ್ಕಾಗಿ ಇದು ಅನೇಕ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ ಎನ್ನಲಾಗಿದೆ.
ಈ ನಿರ್ಧಾರವನ್ನು ಮಸ್ಕ್ ತೆಗೆದುಕೊಂಡಾಗಿನಿಂದ, ಜಗತ್ತಿನಾದ್ಯಂತ ಸಾಕಷ್ಟು ಸುದ್ದಿಯಾಗಿದ್ದಾರೆ. ಈಗ, ವೈರಲ್ ಆಗುತ್ತಿರುವ ವೀಡಿಯೊವೊಂದರಲ್ಲಿ ಟ್ವಿಟರ್ನ ಪ್ರಧಾನ ಕಚೇರಿಯ ಪಕ್ಕದಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಹೇಗೆ ಪ್ರತೀ ದಿನವೂ ನಿದ್ದೆ ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದ್ದಾರೆ. ಟ್ವಿಟ್ಟರ್ ಬಳಕೆದಾರ 'ಕೈಲ್' ಮೈಕ್ರೋ ಟ್ವಿಟರ್ನಲ್ಲೇ ಈ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ.
ವೀಡಿಯೊದಲ್ಲಿ ನೀವು ಪ್ರಧಾನ ಕಛೇರಿಯ ಕಟ್ಟಡದ ಮೇಲೆಬೀಮ್ ಲೈಟ್‌ನೊಂದಿಗೆ 'X' ಲೋಗೋ ಫ್ಲ್ಯಾಷ್ ಆಗುತ್ತಿರುವುದನ್ನು ನೋಡಬಹುದು. ಇದು ತೀರಾ ಪ್ರಕಾಶಮಾನವಾಗಿದ್ದು ಬೀದಿಯ ತುಂಬ ಬೆಳಕನ್ನು ಸೂಸುತ್ತದೆ. "ನಾನು ಫ** ಸಿಟ್ಟಾಗಿದ್ದೇನೆ ಮಾಡುತ್ತೇನೆ. ನಿಮ್ಮ ಮಲಗುವ ಕೋಣೆಗೆ ಅಡ್ಡಲಾಗಿ ಈ ಫ** ಎಕ್ಸ್ ಚಿಹ್ನೆಯನ್ನು ಕಲ್ಪಿಸಿಕೊಳ್ಳಿ”ಎಂದು ಟ್ವಿಟರ್ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ವೀಡಿಯೋ, ಅಪ್‌ಲೋಡ್ ಮಾಡಿದ ನಂತರ, 22 ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಇದಕ್ಕೆ ನಾನಾ ರೀತಿಯ ಕಾಮೆಂಟ್ಗಳು ಪ್ರತಿಕ್ರಿಯೆಯಾಗಿ ಬಂದಿದ್ದು ಅನೇಕರು ಮಸ್ಕ್ ವಿರುದ್ಧ ಬೇರೆ ಬೇರೆ ರೀತಿಗಳಲ್ಲಿ ಕಿಡಿಕಾರಿದ್ದಾರೆ. ಒಬ್ಬ ಟ್ವಿಟರ್ ಬಳಕೆದಾರರಂತೂ, "ಎಲಾನ್ ಮಸ್ಕ್ ಮೂಲತಃ ವಿಶ್ವದ ಅತ್ಯಂತ ಕೂಲ್ ವ್ಯಕ್ತಿ. ಇವರು ಕೂಲ್ ಆಗಿರಲು ತೀವ್ರವಾಗಿ ಪ್ರಯತ್ನಿಸುತ್ತಿದ್ದು ಪ್ರತಿ ಹಂತದಲ್ಲೂ ವಿಫಲರಾಗುತ್ತಾರೆ" ಎಂದು ಬರೆದಿದ್ದಾರೆ. ಮತ್ತೊಬ್ಬ ವ್ಯಕ್ತಿ ಇದೇ ವಿಡಿಯೋವನ್ನು ಶೇರ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ, ಮರುಬ್ರಾಂಡಿಂಗ್‌ನ ಆತುರದ ಪ್ರಕ್ರಿಯೆಯ ಮಧ್ಯೆ, ಸ್ಯಾನ್ ಫ್ರಾನ್ಸಿಸ್ಕೋದ ಫೋಟೋಗ್ರಾಫರ್ ಆಗಿರುವ ಜೀನ್ ಎಕ್ಸ್ ಹ್ವಾಂಗ್ ಅವರ ಖಾತೆಯನ್ನು ಮಸ್ಕ್ ವಶಕ್ಕೆ ಪಡೆದುಕೊಂಡರು. ಯುಕೆ ಡೈಲಿ ಟೆಲಿಗ್ರಾಫ್‌ನೊಂದಿಗೆ ಮಾತನಾಡುವಾಗ, ಟ್ವಿಟರ್ ಹ್ಯಾಂಡಲ್ @X ಕಳೆದ 16 ವರ್ಷಗಳಿಂದ ತನಗೆ ಸೇರಿದೆ ಎಂದು ಹ್ವಾಂಗ್ ಬಹಿರಂಗಪಡಿಸಿದರು. ಆದರೆ ಟ್ವಿಟರ್ ಅವರಿಗೆ ಮೇಲ್ ಕಳುಹಿಸಿದ್ದು, ಅದು ಈಗ ಟ್ವಿಟರ್ನ ಆಸ್ತಿಯಾಗಿದೆ" ಎಂದು ಅವರು ಹ್ವಾಂಗ್‌ಗೆ ತಿಳಿಸಿದರು. ತನ್ನ ಖಾತೆಯನ್ನು ಸ್ವಾಧೀನಪಡಿಸಿಕೊಳ್ಳಲು ಟ್ವಿಟರ್ ತನಗೆ ಹಣ ನೀಡಲಿಲ್ಲ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)