More

    ಕಸ ಹೆಕ್ಕುವ ರೋಬೋಟ್​ ಬಗ್ಗೆ ಕೇಳಿದ್ದೀರಾ? ಇದು ಗೂಗಲ್​ನ ಕರಾಮತ್ತು!

    ನವದೆಹಲಿ: ಹಲವಾರು ವಿಚಾರಗಳಲ್ಲಿ ಮಾನವರಿಗೆ ಸಹಾಯ ಮಾಡುವಲ್ಲಿ ರೋಬೋಟ್​ಗಳು ಪ್ರಮುಖ ಪಾತ್ರ ವಹಿಸುವ ಭವಿಷ್ಯದ ಬಗ್ಗೆ ಜನರು ಅನೇಕ ವರ್ಷಗಳಿಂದ ಕನಸು ಕಂಡಿದ್ದಾರೆ. ಈಗ, ಗೂಗಲ್ ರೊಬೊಟಿಕ್ಸ್ ಟ್ರಾನ್ಸ್ ಫಾರ್ಮರ್2, ಅಥವಾ RT -2ಅನ್ನು ಪರಿಚಯಿಸಿದ್ದು ಜನರ ಕನಸಿನ ಭವಿಷ್ಯ ಎಂದಿಗಿಂತಲೂ ಹತ್ತಿರದಲ್ಲಿದೆ. ಕಸವನ್ನು ಎಸೆಯುವಂತಹ ನಿಜ ಜಗತ್ತಿನ ಕೆಲಸಗಳನ್ನು ನಿರ್ವಹಿಸಲು ರೋಬೋಟ್​ಗಳಿಗೆ ತರಬೇತಿ ನೀಡಲು ವಿನ್ಯಾಸಗೊಳಿಸಲಾದ ಕೃತಕ ಬುದ್ಧಿಮತ್ತೆಯ ಮಾದರಿಯೊಂದನ್ನು ಗೂಗಲ್ ಅಭಿವೃದ್ಧಿ ಪಡಿಸಿದೆ. ಈ ನವೀನ ಮಾದರಿಯು ಸಹಾಯಕ ಮತ್ತು ಹೊಂದಿಕೊಳ್ಳಬಲ್ಲ ರೋಬೋಟ್​ಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಲಿವೆ ಎನ್ನಲಾಗುತ್ತಿದೆ.

    ಇದನ್ನೂ ಓದಿ: ‘ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿ ಮಾನ ತೆಗೆಯಬಲ್ಲೆ’ ಎಂದು ವಿದ್ಯಾರ್ಥಿಗೆ ಬೆದರಿಸಿದ ಕೃತಕ ಬುದ್ಧಿಮತ್ತೆ!

    ನಮಗೆ ಪರಿಚಿತವಾಗಿರುವ ಚಾಟ್​ಬಾಟ್​ಗಳಂತಲ್ಲದೆ, ರೋಬೋಟ್​ಗಳಿಗೆ ನೈಜ ಪ್ರಪಂಚದ ಬಗ್ಗೆ ಆಳವಾದ ತಿಳುವಳಿಕೆ ಮತ್ತು ಸಂಕೀರ್ಣ ಮತ್ತು ಪರಿಚಯವಿಲ್ಲದ ಸಂದರ್ಭಗಳನ್ನು ನಿಭಾಯಿಸುವ ಸಾಮರ್ಥ್ಯದ ಅಗತ್ಯವಿರುತ್ತದೆ. ಸಾಮಾನ್ಯ ಕಾರ್ಯಗಳನ್ನು ನಿರ್ವಹಿಸಲು ರೋಬೋಟ್​ಗಳಿಗೆ ಕಲಿಸುವುದು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು ಇದು ದುಬಾರಿ ಪ್ರಕ್ರಿಯೆಯಾಗಿದೆ ಎಂದು ಗೂಗಲ್ ಹೇಳುತ್ತದೆ. ಇದರಲ್ಲಿ ಅಸಂಖ್ಯಾತ ವಸ್ತುಗಳು, ಪರಿಸರಗಳು ಮತ್ತು ಸನ್ನಿವೇಶಗಳಲ್ಲಿನ ಅಪಾರ ಪ್ರಮಾಣದ ಡೇಟಾ ಪಾಯಿಂಟ್​ಗಳ ಬಗ್ಗೆ ವ್ಯಾಪಕ ತರಬೇತಿ ನೀಡಲಾಗುತ್ತದೆ.

    ಇದನ್ನೂ ಓದಿ: ಕೃತಕ ಬುದ್ಧಿಮತ್ತೆ ಮಹತ್ವದ ಪಾತ್ರ ನಿರ್ವಹಿಸಲಿದೆ

    RT-2ಅನ್ನು ಪ್ರಾರಂಭಿಸುವುದರೊಂದಿಗೆ, ಈ ಸವಾಲುಗಳನ್ನು ಎದುರಿಸಲು ಗೂಗಲ್ ಹೊಸ ವಿಧಾನವನ್ನು ಕಂಡುಹಿಡಿದಿದೆ. RT-2 ಎನ್ನುವುದು ಟ್ರಾನ್ಸ್ ಫಾರ್ಮರ್ ಆರ್ಕಿಟೆಕ್ಚರ್ ಆಧಾರಿತ ದೃಷ್ಟಿ-ಭಾಷೆ-ಕ್ರಿಯೆ ವಿಎಲ್ಎ ಮಾದರಿಯಾಗಿದೆ, ಇದು ವೆಬ್​ನಿಂದ ಪಠ್ಯ ಮತ್ತು ಚಿತ್ರಗಳನ್ನು ಅರ್ಥಮಾಡಿಕೊಳ್ಳಬಕೊಂಡು ನೈಜ ಜಗತ್ತಿನ ಬಗ್ಗೆ ಕಲಿಯಲಿದೆ. ಜಗತ್ತಿನಲ್ಲಿರುವ ವಿಚಾರ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಭಾಷಾ ಮಾದರಿಗಳು ವೆಬ್ ಡೇಟಾದಿಂದ ಕಲಿಯುವಂತೆಯೇ, ನಿರ್ದಿಷ್ಟ ಕ್ರಿಯೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ರೋಬೋಟ್​ಗಳಿಗೆ ಸೂಚಿಸಲು RT-2 ಈ ಜ್ಞಾನವನ್ನು ವರ್ಗಾಯಿಸಲಿದೆ.

    RT-2 ರ ಪ್ರಮುಖ ಶಕ್ತಿ “ರೋಬೋಟ್​ಗೆ ಅರ್ಥವಾಗುವಂತೆ ಮಾತನಾಡುವ ಸಾಮರ್ಥ್ಯ”. ಇದು ರೋಬೋಟ್​ಗಳಿಗೆ ತರ್ಕ ಮಾಡುವುದನ್ನು ಕಲಿಸಿ ಟ್ರೇನಿಂಗ್​ ನೀಡಿದ ದತ್ತಾಂಶದ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಮೂಲಕ ವಸ್ತುಗಳನ್ನು ಗುರುತಿಸಲು ಮತ್ತು ಅವರೊಂದಿಗೆ ಹೇಗೆ ಸಂವಹನ ನಡೆಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ, RT-2 ಆ ನಿರ್ದಿಷ್ಟ ಕಾರ್ಯದ ಬಗ್ಗೆ ವ್ಯಾಪಕವಾದ ತರಬೇತಿಯಿಲ್ಲದೆ ಕಸವನ್ನು ಗುರುತಿಸಿ ಎತ್ತಿಕೊಳ್ಳಲಿದೆ. ಇದು ಕಸದ ಅಮೂರ್ತ ಸ್ವರೂಪವನ್ನು ಅರ್ಥಮಾಡಿಕೊಳ್ಳುತ್ತದೆ. ಒಂದು ಕಾಲದಲ್ಲಿ ಚಿಪ್ಸ್ ಪ್ಯಾಕ್​ ಅಥವಾ ಬಾಳೆಹಣ್ಣಿನ ಸಿಪ್ಪೆ, ಬಳಕೆಯ ನಂತರ ಕಸವಾಗುತ್ತದೆ ಎಂದು ಗುರುತಿಸುತ್ತದೆ.

    ಇದನ್ನೂ ಓದಿ: ಕೃತಕ ಬುದ್ಧಿಮತ್ತೆ ಉದ್ಯೋಗಕ್ಕೆ ಕುತ್ತೇ?: ಉತ್ತಮ ವೃತ್ತಿ ಬದುಕಿಗೆ ಕಾಲರ್ ಬದಲಿಸಿ

    ಹಿಂದಿನ ರೊಬೊಟಿಕ್ ವ್ಯವಸ್ಥೆಗಳಿಗೆ ಸಂಕೀರ್ಣ ಸ್ಟಾಕ್ ವ್ಯವಸ್ಥೆಗಳು ಬೇಕಾಗುತ್ತಿದ್ದವು. ಅಲ್ಲಿ ಉನ್ನತ ಮಟ್ಟದ ತಾರ್ಕಿಕತೆ ಮತ್ತು ಕೆಳಮಟ್ಟದ ಕುಶಲತೆಯು ರೋಬೋಟ್​ನ ಕ್ರಿಯೆಗಳನ್ನು ನಿಯಂತ್ರಿಸಲು ಸಂವಹನ ಮಾಡಬೇಕಾಗಿತ್ತು. RT-2ನ ಕಾರ್ಯಗಳನ್ನು ಒಂದೇ ಮಾದರಿಯಲ್ಲಿ ಕ್ರೋಢೀಕರಿಸುವ ಮೂಲಕ ಈ ಸಂಕೀರ್ಣತೆಯನ್ನು ಗೂಗಲ್​ ತೆಗೆದುಹಾಕುತ್ತದೆ. ಇದರ ಪರಿಣಾಮವಾಗಿ, RT2 ಮಾದರಿಯು ಸಂಕೀರ್ಣ ತರ್ಕಗಳನ್ನು ಮಾಡಬಹುದಾಗಿದ್ದು ರೋಬೋಟ್ ಕ್ರಿಯೆಗಳನ್ನು ನೇರವಾಗಿ ಔಟ್​ಪುಟ್ ಮಾಡಬಹುದಾಗಿದೆ. ಈ ಮೂಲಕ ರೋಬೋಟ್​ನ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

    ಈ ಟೆಕ್ನಾಲಜಿ ಸಂಪೂರ್ಣವಾಗಿ ಅಸ್ತಿತ್ವಕ್ಕೆ ಬಂದಲ್ಲಿ, ಕಸ ಹೆಕ್ಕುವವರ ಕೆಲಸವೂ ನಿಲ್ಲಲಿದೆ ಎಂದೇ ಹೇಳಬಹುದಾಗಿದೆ. ದಿನನಿತ್ಯದ ಶ್ರಮ ಬೇಡುವ ಕೆಲಸಗಳೂ ಮಾನವನಿಗೆ ಇಲ್ಲವಾದಲ್ಲಿ ಜನರು ಹಣ ಸಂಪಾದನೆ ಹೇಗೆ ಮಾಡುವುದು, ಹಾಗೂ ಜೀವನ ಹೇಗೆ ನಡೆಸುವುದು ಎನ್ನುವ ಮೂಲ ಭೂತ ಪ್ರಶ್ನೆಯಂತೂ ಏಳುವುದು ಸಹಜ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts