ಮಗಳ ಬಾಯ್​ಫ್ರೆಂಡ್​ ನಮ್ಮ ಮನೆಯಲ್ಲೇ ಇದ್ದ- ಮಗಳ ಡೇಟಿಂಗ್​ ವಿಷ್ಯ ಬಿಚ್ಚಿಟ್ಟ ಒಬಾಮಾ:

obama
Published on

ವಾಷಿಂಗ್ಟನ್​: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ ತಮ್ಮ ಮಗಳ ರಹಸ್ಯವೊಂದನ್ನು ಇದೀಗ ಬಹಿರಂಗಪಡಿಸಿದ್ದಾರೆ. ಮಗಳು ಮಾಲಿಯಾಗೆ ಬ್ರಿಟಿಷ್​ ಗೆಳೆಯನಿರುವ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಮಾತ್ರವಲ್ಲದೇ ಲಾಕ್​ಡೌನ್​ ಸಮಯದಲ್ಲಿ ಕ್ವಾರಂಟೈನ್​ಗೆಂದು ಆತ ತಮ್ಮ ಮನೆಯಲ್ಲಿಯೇ ನೆಲೆಸಿದ್ದ ಎಂದೂ ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ತಮ್ಮ 22 ವರ್ಷದ ಮಗಳು ಬ್ರಿಟಿಷ್​ ಯುವಕನ ಜತೆ ಡೇಟಿಂಗ್​ ಮಾಡುತ್ತಿರುವ ಕುರಿತು ಅವರು ತಿಳಿಸಿದ್ದಾರೆ. ಇವರಿಗೆ ಇನ್ನೊಬ್ಬ ಮಗಳಿದ್ದು ಆಕೆ 19 ವರ್ಷದ ಸಾಶಾ.

ಲಾಕ್​ಡೌನ್​ ಸಮಯದಲ್ಲಿ ಮನೆಯಲ್ಲಿಯೇ ಇರಬೇಕಾದ ಸಂದರ್ಭದಲ್ಲಿ ನಿಮ್ಮ ಜೀವನ ಹೇಗಿತ್ತು ಎಂದು ಮಾಧ್ಯಮಗಳು ಪ್ರಶ್ನೆ ಕೇಳಿದಂಥ ಸಮಯದಲ್ಲಿ ಒಬಾಮಾ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಲಾಕ್​ಡೌನ್​ ಸಮಯದಲ್ಲಿ ನಾವು ತುಂಬಾ ಆನಂದವಾಗಿದ್ದೆವು. ನನ್ನ ಇಬ್ಬರು ಮಕ್ಕಳು ಹಾಗೂ ಪತ್ನಿಯ ಜತೆ ಸಂತಸದ ಕ್ಷಣಗಳನ್ನು ಕಳೆದೆ. ಅನೇಕ ರೀತಿಯ ಆಟಗಳನ್ನು ಆಡಿದೆವು ಎಂದು ಹೇಳುವಾಗ ಒಬಾಮಾ ಅವರು, ತಮ್ಮ ಪತ್ನಿ ಮತ್ತು ಮಕ್ಕಳ ಹೊರತಾಗಿ ನಮ್ಮ ಮನೆಯಲ್ಲಿ ಮಗಳ ಗೆಳೆಯ ಕೂಡ ಕ್ವಾರಂಟೈನ್​ ನಿಮಿತ್ತ ಮನೆಯಲ್ಲಿಯೇ ಇದ್ದ ವಿಷಯ ತಿಳಿಸಿದರು.

ಆಟವಾಡುವ ಹದಿಹರೆಯದ ದಿನಗಳು ಕಳೆದುಹೋಗಿದ್ದವು. ಆದರೆ ಲಾಕ್​ಡೌನ್​ನಿಂದಾಗಿ ಮತ್ತು ಆ ದಿನಗಳು ನೆನಪಾದರು. ಮಗಳ ಬ್ರಿಟಿಷ್​ ಗೆಳೆಯ ಕೂಡ ನಮ್ಮ ಜತೆ ಇದದ್ದು ತುಂಬಾ ಸಂತಸ ತಂದಿತು. ಆತ ತುಂಬಾ ಒಳ್ಳೆಯ ಹುಡುಗ. ನಮ್ಮ ಜತೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಾನೆ ಎಂದರು ಒಬಾಮಾ.

ವೀಸಾ ವಿಚಾರವಾಗಿ ಆತ ಅಮೆರಿಕಕ್ಕೆ ಬಂದಿದ್ದ. ಆದರೆ ಲಾಕ್​ಡೌನ್​ ಆದ ಹಿನ್ನೆಲೆಯಲ್ಲಿ ಇಲ್ಲಿಯೇ ಉಳಿದುಕೊಳ್ಳಬೇಕಾಯಿತು. ನಾನೇ ಅವನನ್ನು ಮನೆಗೆ ಕರೆತಂದೆ. ಆತ ತುಂಬಾ ಅದ್ಭುತ ಯುವಕ ಎಂದು ಹೇಳಿದ ಒಬಾಮಾ, ಹುಡುಗನ ಹೆಸರನ್ನು ಮಾತ್ರ ಬಹಿರಂಗಗೊಳಿಸಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net