More

    ಎಲ್ಲರಂಥಲ್ಲ ಈ ವೈದ್ಯೆ: 10 ರೂಪಾಯಿ ಕೊಟ್ಟರೆ ಸಾಕು, ಕಾಯಿಲೆಗಳೆಲ್ಲವೂ ವಾಸಿ!

    ಹೈದರಾಬಾದ್: ವೈದ್ಯರು ಎಂದರೆ ಅದರಲ್ಲಿಯೂ ಖಾಸಗಿ ಆಸ್ಪತ್ರೆ ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರ ಕಣ್ಣ ಮುಂದೆ ಬರುವುದು ಒಂದೇ, ಲಕ್ಷ ಲಕ್ಷ ರೂಪಾಯಿ ಕೊಟ್ಟರಷ್ಟೇ ಚಿಕಿತ್ಸೆ ಸಿಗುವುದು ಎಂಬುದು. ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಸುಲಿಗೆ ಮಾಡುತ್ತಿರುವ ಕಾರಣ, ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಭಾರಿ ಮೊತ್ತದ ಬಿಲ್​ ಹಾಕುವ ಕಾರಣ, ಇಂಥದ್ದೊಂದು ಅನಿಸಿಕೆ ಬಹುತೇಕ ಎಲ್ಲರಲ್ಲಿಯೂ ಇದ್ದೇ ಇದೆ.
    ಆದರೆ ಎಲ್ಲಾ ವಿಚಾರಗಳಿಗೂ ಒಂದು ಅಪವಾದ ಇದ್ದೇ ಇರುತ್ತದೆ. ಯಾವುದೇ ಕ್ಷೇತ್ರದಲ್ಲಿಯಾಗಲೀ, ಎಲ್ಲರೂ ಎಲ್ಲರಂತೆ ಇರುವುದಿಲ್ಲ. ಅಪರೂಪದಲ್ಲಿ ಅಪರೂಪ ಎನ್ನುವಂಥ ಜನರೂ ಕಾಣಸಿಗುತ್ತಾರೆ.

    ಅಂಥವರಲ್ಲಿ ಒಬ್ಬರು ಹೈದರಾಬಾದ್​ನ ಈ ವೈದ್ಯೆ. ಶಿವಮೊಗ್ಗ ಹಾಗೂ ಚೆನ್ನೈನಲ್ಲಿ ಇದಾಗಲೇ 10 ರೂಪಾಯಿ ಫೀಸ್​ ಪಡೆದು ಅಸಂಖ್ಯ ರೋಗಗಳನ್ನು ವಾಸಿ ಮಾಡುವ ಅಪರೂಪದ ವೈದ್ಯರ ಬಗ್ಗೆ ಇದಾಗಲೇ ನೀವು ಕೇಳಿರಬಹುದು. ಅಂಥದ್ದೇ ಇನ್ನೋರ್ವ ವೈದ್ಯೆ ಡಾ.ನೂರಿ ಪರ್ವೀನ್.

    ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಖಾಸಗಿ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಕೋರ್ಸ್ ಮುಗಿಸಿರುವ ಡಾ.ನೂರಿ ಪರ್ವೀನ್, ಆರ್ಥಿಕವಾಗಿ ದುರ್ಬಲ ಕುಟುಂಬಗಳು ವೈದ್ಯಕೀಯ ಸಹಾಯದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಪ್ರತಿ ರೋಗಿಗೆ ಕೇವಲ 10 ರೂ. ಶುಲ್ಕ ಪಡೆಯುತ್ತಿದ್ದಾರೆ.

    ಆಂಧ್ರಪ್ರದೇಶದ ವಿಜಯವಾಡದ ಮಧ್ಯಮ ವರ್ಗದ ಕುಟುಂಬವೊಂದರವರಾದ ಡಾ. ಪರ್ವೀನ್ ಅವರು ಯಾವುದೇ ಮೀಸಲಾತಿ ಇಲ್ಲದೇ ಮೆರಿಟ್​ ಆಧಾರದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ವೈದ್ಯಕೀಯ ಪದವಿ ಮುಗಿಸಿದ್ದಾರೆ. ಉತ್ತಮ ಅಂಕ ಗಳಿಸಿ ವೈದ್ಯಕೀಯ ಕಾಲೇಜಿನಿಂದ ಹೊರುವಾಗ ಪ್ರತಿಯೊಬ್ಬ ಭಾವಿ ವೈದ್ಯರು ಪ್ರಮಾಣ ಮಾಡುವುದು ಸಮಾಜ ಸೇವೆ ಮಾಡುತ್ತೇನೆ, ಬಡವರಿಗೆ ನೆರವಾಗುತ್ತೇನೆ ಎಂದು. ಆದರೆ ಅದರ ಸತ್ಯಾಸತ್ಯತೆ ಖಾಸಗಿ ಆಸ್ಪತ್ರೆಗಳಿಗೆ ಹೋದವರಿಗೇ ಗೊತ್ತು. ಆದರೆ ತಾವು ಮಾಡಿರುವ ಪ್ರಮಾಣವನ್ನು ಚಾಚೂತಪ್ಪದೆ ಪಾಲಿಸುತ್ತಿದ್ದಾರೆ ಡಾ.ನೂರಿ.

    ದುಬಾರಿ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗದ ಜನರಿಗೆ ಉಪಯೋಗವಾಗಲು ನಾನು ಕಡಪಾದ ಅತ್ಯಂತ ಕಡುಬಡವರು ವಾಸಿಸುವ ಪ್ರದೇಶದಲ್ಲಿ ಉದ್ದೇಶಪೂರ್ವಕವಾಗಿ ನನ್ನ ಕ್ಲಿನಿಕ್ ತೆರೆದಿದ್ದೇನೆ ಎನ್ನುತ್ತಾರೆ ಇವರು. ಬಡವರಿಗೆ ಈ ಸೇವೆ ಒದಗಿಸುವ ಕುರಿತು ಮೊದಲು ನಾನು ಕುಟುಂಬದ ಜತೆ ಚರ್ಚಿಸಿರಲಿಲ್ಲ, ಅವರೆಲ್ಲಿ ಇದಕ್ಕೆ ವಿರೋಧಿಸುತ್ತಾರೆ ಎಂಬ ಭಯವಿತ್ತು. ಆದರೆ ನಂತರ ವಿಷಯ ತಿಳಿದು ಅವರೂ ತುಂಬಾ ಸಂತೋಷಪಟ್ಟರು ಎನ್ನುತ್ತಾರೆ ಈ ಯುವ ವೈದ್ಯೆ.

    ಹೊರರೋಗಿಗಳಿಗೆ ಕೇವಲ 10 ರೂಪಾಯಿ ಶುಲ್ಕ ವಿಧಿಸಿದರೆ, ಆಸ್ಪತ್ರೆಗೆ ಅಡ್ಮಿಟ್​ ಆಗಬೇಕಾಗುವ ರೋಗಿಗಳಿಗೆ ಪ್ರತಿ ಹಾಸಿಗೆಗೆ ವಿಧಿಸುವುದು ಕೇವಲ 50 ರೂಪಾಯಿ. ಹೀಗೆ ಪ್ರತಿದಿನ ಕನಿಷ್ಠ 40 ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಇವರ ಈ ಕಾರ್ಯಕ್ಕೆ ಇದಾಗಲೇ ಹಲವಾರು ಮಂದಿ ಶ್ಲಾಘಟನೆ ವ್ಯಕ್ತಪಡಿಸಿದ್ದಾರೆ. ಅಜ್ಜ ನೆನಪಿಗಾಗಿ “ನೂರ್ ಚಾರಿಟಬಲ್ ಟ್ರಸ್ಟ್” ಕೂಡ ಪ್ರಾರಂಭಿಸಿರುವ ಇವರು, ಕರೊನಾ ಲಾಕ್​ಡೌನ್​ ಸಮಯದಲ್ಲಿ ಅಸಂಖ್ಯ ಬಡವರಿಗೆ ಊಟ ನೀಡಿದ್ದಾರೆ.

    ಸೈಕಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದು ಮತ್ತು ಹಿಂದುಳಿದ ಜನರಿಗಾಗಿಯೇ ಬಹು-ವಿಶೇಷ ಆಸ್ಪತ್ರೆಯನ್ನು ಸ್ಥಾಪಿಸುವ ಭವಿಷ್ಯದ ಯೋಜನೆ ಈ ವೈದ್ಯೆಗಿದೆ.

    ಸ್ನೇಹಿತರು ಲಕ್ಷಲಕ್ಷ ಸಂಪಾದಿಸ್ತಿದ್ರೆ ನಾನು ಸಾವಿರದಲ್ಲೇ ಇದ್ದೇನೆ- ಡಿಪ್ರೆಷನ್​ಗೆ ಹೋಗುತ್ತಿರುವೆ, ಏನು ಮಾಡಲಿ?

    ಮೋದಿಗೆ ಬುದ್ಧಿಕಲಿಸಿದ ಕೇಜ್ರಿವಾಲ್​ ಎಂದು ಹೊಗಳುವಷ್ಟರಲ್ಲೇ ಆಗೋಯ್ತು ಭಾರಿ ಮುಖಭಂಗ!

    ರೈತರ ಬ್ಯಾಂಕ್ ಖಾತೆಗೆ ಕೇಂದ್ರದಿಂದ ಮತ್ತೆ ಬರಲಿದೆ ಹಣ: ಯಾವಾಗ? ಇಲ್ಲಿದೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts