More

    ರೈತರ ಬ್ಯಾಂಕ್ ಖಾತೆಗೆ ಕೇಂದ್ರದಿಂದ ಮತ್ತೆ ಬರಲಿದೆ ಹಣ: ಯಾವಾಗ? ಇಲ್ಲಿದೆ ಮಾಹಿತಿ

    ನವದೆಹಲಿ: ದೇಶದ ಕೋಟ್ಯಂತರ ರೈತರ ಬ್ಯಾಂಕ್ ಖಾತೆಗಳಿಗೆ ಕೇಂದ್ರ ಸರ್ಕಾರ ಸದ್ಯದಲ್ಲೇ ಮತ್ತೆ ಹಣ ಹಾಕಲಿದೆ. ಈ ವಿಷಯವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ‘ಕಿಸಾನ್ ಕಲ್ಯಾಣ್’ ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡುವಾಗ ತಿಳಿಸಿದ್ದಾರೆ.

    ‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು (ಡಿ. 25) ನಾನು ಮತ್ತೆ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದೇನೆ. ಅದೇ ದಿನ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಮತ್ತೊಂದು ಕಂತಿನ ಹಣವನ್ನು ದೇಶದ ಕೋಟ್ಯಂತರ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು’ ಎಂದು ಪ್ರಧಾನಿ ಮೋದಿ ಹೇಳಿದರು.

    ಇದನ್ನೂ ಓದಿ: ಈಗ ವಿರೋಧಿಸುತ್ತಿರುವ ಕೃಷಿ ಕಾಯ್ದೆ ಬೇಕೆಂದು ಅಂದು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದ ಇದೇ ರೈತರು!

    ಪ್ರತಿ ವರ್ಷ ರೈತರಿಗೆ ತಲಾ 6 ಸಾವಿರ ರೂ.ಗಳನ್ನು ಕೇಂದ್ರ ಸರ್ಕಾರ ಮೂರು ಕಂತುಗಳಲ್ಲಿ ನೀಡುತ್ತಿದೆ. ಅದರ ಒಂದು ಕಂತಾಗಿ ತಲಾ 2 ಸಾವಿರ ರೂ.ಗಳು ಡಿ. 25ರಂದು ರೈತರ ಖಾತೆಗಳಿಗೆ ಜಮಾ ಆಗಲಿವೆ. ಇದೇ ವಿಷಯವನ್ನು ಪ್ರಧಾನಿ ಟ್ವಿಟರ್ ಮೂಲಕವೂ ಸ್ಪಷ್ಟಪಡಿಸಿದ್ದಾರೆ. 2019ರಲ್ಲಿ ಮೋದಿ ಈ ಯೋಜನೆಯನ್ನು ಆರಂಭಿಸಿದ್ದಾರೆ. ಪ್ರಸ್ತುತ 14.5 ಕೋಟಿ ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

    ಇದೇ ವೇಳೆ ಮೂರು ಕೃಷಿ ಕಾನೂನುಗಳ ಬಗ್ಗೆ ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಪ್ರಧಾನಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿಯೂ ಇದೇ ಕಾನೂನಿನ ಬಗ್ಗೆ ಉಲ್ಲೇಖಿಸಿ ಇದೀಗ ರೈತರನ್ನು ದಾರಿ ತಪ್ಪಿಸಬಾರದು ಎಂದು ರಾಜಕೀಯ ಪಕ್ಷಗಳಿಗೆ ಹೇಳಿದರು.

    ಮದುವೆಯಾಗಿ 2 ತಿಂಗಳಲ್ಲೇ ಹೊಟ್ಟೆಹಿಡಿದುಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ನೇಹಾ

    ಎಲ್ಲವನ್ನೂ ಒಪ್ಪಿಸಿ ನಂತ್ರ ರೇಪ್​ಕೇಸ್​ ಹಾಕಿದ್ರೆ ಪ್ರಯೋಜನವಾಗಲ್ಲ- ಹೈಕೋರ್ಟ್​ನ ಈ ತೀರ್ಪು ನೋಡಿ…

    ಶೀಲಗೆಟ್ಟರೂ ಅಡ್ಡಿಲ್ಲ, ಮಗುಬೇಕೆಂದು ನಿಮ್ಮನ್ನು ಬಳಸಿಕೊಂಡಳಾಕೆ- ನೀವು ಚಿಂತಿಸಿ ಪ್ರಯೋಜನವಿಲ್ಲ…

    ಈಗ ವಿರೋಧಿಸುತ್ತಿರುವ ಕೃಷಿ ಕಾಯ್ದೆ ಬೇಕೆಂದು ಅಂದು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದ ಇದೇ ರೈತರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts