ಎಲ್ಲವನ್ನೂ ಒಪ್ಪಿಸಿ ನಂತ್ರ ರೇಪ್​ಕೇಸ್​ ಹಾಕಿದ್ರೆ ಪ್ರಯೋಜನವಾಗಲ್ಲ- ಹೈಕೋರ್ಟ್​ನ ಈ ತೀರ್ಪು ನೋಡಿ...

marraige
Published on

ನವದೆಹಲಿ: ಮದುವೆಯಾಗುತ್ತಾನೆಂದು ಮಾಡಿದೆ, ಅದಕ್ಕಾಗಿ ಆತನಿಗೆ ಎಲ್ಲವನ್ನೂ ಒಪ್ಪಿಸಿಬಿಟ್ಟೆ, ಈಗ ಆತ ಮದುವೆಗೆ ನಿರಾಕರಿಸುತ್ತಿದ್ದಾನೆ, ಆದ್ದರಿಂದ ಆತನ ವಿರುದ್ಧ ಅತ್ಯಾಚಾರದ ಕೇಸ್​ ದಾಖಲು ಮಾಡಿ...

ಈ ರೀತಿ ದೂರು ದಾಖಲಿಸುವ ಯುವತಿಯರಿಗೇನೂ ಕಮ್ಮಿ ಇಲ್ಲ. ಮೊದಲು ಯುವಕ ಹೇಳಿದಂತೆ ಕೇಳಿ ಆತನ ಜತೆ ಸುದೀರ್ಘ ಸಮಯ ಸೆಕ್ಸ್​ನಲ್ಲಿ ತೊಡಗಿಸಿಕೊಂಡು ನಂತರ ಕೈಕೊಟ್ಟು ಹೋದಾಗ ಅತ್ಯಾಚಾರದ ಕೇಸ್​ ಹಾಕುವ ಹೆಣ್ಣುಮಕ್ಕಳಿಗೆ ಪಾಠ ಆಗುವಂಥ ತೀರ್ಪೊಂದು ದೆಹಲಿಯ ಹೈಕೋರ್ಟ್​ ನಿಡಿದೆ.

ಮದುವೆಯ ನೆಪ ಹೇಳಿ ಸುದೀರ್ಘ ದಿನಗಳವರೆಗೆ ಲೈಂಗಿಕತೆಯಲ್ಲಿ ತೊಡಗಿಸಿಕೊಂಡಿದ್ದರೆ ಅದು ಎಲ್ಲಾ ಕೇಸ್​ಗಳಲ್ಲಿಯೂ ಅತ್ಯಾಚಾರವಾಗುವುದಿಲ್ಲ ಎಂದು ಕೋರ್ಟ್​ ಹೇಳಿದೆ. ದೀರ್ಘ ಸಮಯ ಮದುವೆಯಾಗುವ ಭರವಸೆಯಿಂದಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿ ಮದುವೆಯಾಗುತ್ತೇನೆ ಎಂದಾಕ್ಷಣ ಲೈಂಗಿಕತೆಯಲ್ಲಿ ತೊಡಗಿಕೊಳ್ಳುವ ಮುನ್ನ ಹೆಣ್ಣುಮಕ್ಕಳು ಎಚ್ಚರಿಕೆಯಿಂದ ಇರಬೇಕು ಎಂದು ಈ ತೀರ್ಪು ಹೇಳಿದೆ.

ಒಂದು ವೇಳೆ ಈ ರೀತಿ ದೈಹಿಕ ಸಂಬಂಧಕ್ಕೆ ಆಹ್ವಾನವಿತ್ತಾಗ ಅದನ್ನು ನಿರಾಕರಿಸುವ ಅವಕಾಶ ಇರುತ್ತದೆ. ಅಂಥ ಸಂದರ್ಭದಲ್ಲಿ ದೀರ್ಘಾವಧಿಯವರೆಗೆ ದೈಹಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡು ನಂತರ ಅದನ್ನು ಅತ್ಯಾಚಾರ ಎಂದರೆ ಅದನ್ನು ಮಾನ್ಯ ಮಾಡಲು ಆಗದು ಎಂದು ಕೋರ್ಟ್​ ಹೇಳಿದೆ.

ಮದುವೆಯಾಗುವುದಾಗಿ ಹೇಳಿ ಸೆಕ್ಸ್​ಗೆ ಕರೆದಾಗ ಅದನ್ನು ತಿರಸ್ಕಾರ ಮಾಡಬಹುದು. ಒಂದು ವೇಳೆ ತಿರಸ್ಕಾರ ಮಾಡಿದ ಬಳಿಕವೂ ಒತ್ತಾಯ ಕೇಳಿಬರಬಹುದು. ಇಂಥ ಸಂದರ್ಭದಲ್ಲಿ ದೀರ್ಘ ಕಾಲದ ಸಂಬಂಧ ಬೆಳೆಯಲಾಗದು. ಒಂದು ವೇಳೆ ದೀರ್ಘ ಕಾಲ ಸಂಬಂಧ ಬೆಳೆಸಿ ನಂತರ ಅತ್ಯಾಚಾರ ಕೇಸ್​ ಹಾಕುವುದು ಉಚಿತವಲ್ಲ ಎಂದಿದ್ದಾರೆ ನ್ಯಾಯಮೂರ್ತಿಗಳು.

ಅತ್ಯಾಚಾರದ ಆರೋಪದ ಮೇಲೆ ಯುವಕನೊಬ್ಬನ ವಿರುದ್ಧ ಯುವತಿಯೊಬ್ಬಳು ಹಾಕಿದ್ದ ಕೇಸ್​ಗೆ ಸಂಬಂಧಿಸಿದಂತೆ ಕೋರ್ಟ್​ ಈ ಆದೇಶಹೊರಡಿಸಿದೆ. ಸೆಷನ್ಸ್​ ಕೋರ್ಟ್​ ಯುವಕನಿಗೆ ಅತ್ಯಾಚಾರದ ಆರೋಪದಡಿ ಶಿಕ್ಷೆ ವಿಧಿಸಿತ್ತು. ದೀರ್ಘ ಕಾಲದವರೆಗೆ ತನ್ನೊಂದಿಗೆ ಯುವಕ ಸೆಕ್ಸ್​ನಲ್ಲಿ ತೊಡಗಿಸಿಕೊಂಡು ನಂತರ ಮದುವೆಯಾಗಲು ನಿರಾಕರಿಸಿದ್ದ ಎಂದಿದ್ದಳು ಯುವತಿ. ಆದ್ದರಿಂದ ಇದು ಅತ್ಯಾಚಾರ ಆಗದು ಎಂದಿರುವ ಕೋರ್ಟ್​, ಯುವಕನನ್ನು ಆರೋಪಮುಕ್ತಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net