More

    ಚಂದಿರನ ಅಂಗಳವನ್ನು ತೋಡಿ ಕಲ್ಲು-ಮಣ್ಣು ಹೊತ್ತು ತಂದ ‘ಚಾಂಗ್​ ಲಿ’

    ಬೀಜಿಂಗ್​: ಒಂದೆಡೆ ಎಲ್ಲಾ ರಾಷ್ಟ್ರಗಳೊಂದಿಗೆ ಶತ್ರುತ್ವ ಕಟ್ಟಿಕೊಂಡಿರುವ ಚೀನಾ ಕರೊನಾದ ನಡುವೆಯೂ ತನ್ನ ಬಾಹ್ಯಾಕಾಶದ ಸಾಧನೆಯನ್ನು ಮುಂದುವರೆಸಿದೆ.

    ಚೀನಾ ಕಳುಹಿಸಿದ್ದ ಮಾನವ ರಹಿತ ಬಾಹ್ಯಾಕಾಶ ನೌಕೆ ”ಚಾಂಗ್​ ಲಿ-5” ಯಶಸ್ವಿಯಾಗಿದ್ದು, ಚಂದ್ರನ ಮೇಲಿನ ಶಿಲೆ, ಮಣ್ಣು ಸಂಗ್ರಹಿಸಿ ಭೂಮಿಗೆ ತರುವಲ್ಲಿಯೂ ಯಶ ಕಂಡಿದೆ.. ಚಂದ್ರನ ಮೇಲ್ಭಾಗದ ಶಿಲೆ, ಮಣ್ಣಿನ ಮಾದರಿಗಳನ್ನು ಸಂಗ್ರಹಿಸುವ ಚೀನಾದ ಐತಿಹಾಸಿಕ ಯೋಜನೆ ಇದಾಗಿತ್ತು.

    ಈ ಹಿಂದೆ ಡಿಸೆಂಬರ್ 2013ರಲ್ಲಿ ಬಾಹ್ಯಾಕಾಶ ನೌಕೆ ಚಾಂಗ್ ಲಿ 3 ಚಂದ್ರನ ಮೇಲೆ ಇಳಿಸಲಾಗಿತ್ತು. 2019ರಲ್ಲಿ ಚಾಂಗ್ ಲಿ 4 ಚಂದ್ರನ ಮತ್ತೊಂದು ಮೇಲ್ಮೈನಲ್ಲಿ ಲ್ಯಾಂಡ್ ಮಾಡಿದ ಸಾಧನೆ ಮಾಡಿತ್ತು. ಇದೀಗ ಚಾಂಗ್​ ಲಿ-5 ಮೂಲಕ ಅಮೋಘ ಸಾಧನೆ ಮಾಡಿದೆ ಚೀನಾ,.
    ನವೆಂಬರ್ 24ರಂದು’ಚಾಂಗ್- 5 ಪ್ರೋಬ್’ ನೌಕೆಯನ್ನು ವೀನಾ ಉಡಾವಣೆ ಮಾಡಿತ್ತು. ಚೀನಾದ ಪೌರಾಣಿಕ ದೇವತೆಯ ಹೆಸರಾದ ಚಾಂಗ್​ ಇದಕ್ಕೆ ಇಡಲಾಗಿದೆ. ಈ ಉಡಾವಣೆಯ ಉದ್ದೇಶ ಚಂದ್ರನ ಉಗಮದ ಕುರಿತಾದ ರಹಸ್ಯವನ್ನು ತಿಳಿಯುವುದು. ಇದೀಗ ಅದು ಯಶಸ್ವಿಯಾಗಿದ್ದು, ಚಂದ್ರನ ಮೇಲ್ಭಾಗದಲ್ಲಿನ ವಸ್ತುಗಳನ್ನು ಸಂಗ್ರಹಿಸಿದೆ.

    ಇದನ್ನೂ ಓದಿ: VIDEO: ನಿರ್ಮಾಣಹಂತದಲ್ಲಿ ಕಟ್ಟಡದ ಕಂಬ ಯುವಕನ ಮೇಲೆ ಬಿದ್ದ ಭಯಾನಕ ವಿಡಿಯೋ

    ಚಾಂಗ್​ ಲಿ-5” ತನ್ನ ರೋಬೋಟಿಕ್ ಕೈಗಳಿಂದ ಚಂದ್ರನ ನೆಲವನ್ನು ಅಗೆದು, ಮಣ್ಣು ಮತ್ತು ಕಲ್ಲಿನ ಮಾದರಿಗಳನ್ನು ವಾಹನಕ್ಕೆ ತುಂಬಿಸಿದ್ದು, ಅಲ್ಲಿಂದ ಅದು ಆರ್ಬಿಟಿಂಗ್ ಮಾಡ್ಯುಲ್‌ಗೆ ಸೇರಿಸಲಾಗಿದೆ. ಎರಡು ದಿನ ಈ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಗಗನನೌಕೆ ಬಳಿಕ ಚೀನಾದ ಮಂಗೋಲಿಯಾ ಪ್ರದೇಶಕ್ಕೆ ಮರಳಲಿದೆ ಎಂದು ಚೀನಾ ನ್ಯಾಷನಲ್‌ ಸ್ಪೇಸ್‌ ಅಡ್ಮಿನಿಸ್ಟ್ರೇಷನ್‌ ಹೇಳಿದೆ.

    ಇದಾಗಲೇ ಶಿಲೆ, ಮಣ್ಣು-ಕಲ್ಲುಗಳನ್ನು ಸಂಗ್ರಹಿಸಿ ಆರ್ಬಿಟರ್‌ಗೆ ರವಾನಿಸಿರುವ ಚಾಂಗ್ ಲಿ​-5, ಇದೀಗ ಈ ಸ್ಯಾಂಪಲ್ ಹೊತ್ತು ಕಳೆದ ವಾರ ಭೂಮಿಯತ್ತ ಹೊರಟ್ಟಿದ್ದ ಗಗನನೌಕೆ ಈಗ ಭೂಮಿಯನ್ನು ಸುರಕ್ಷಿತವಾಗಿ ತಲುಪಿದೆ.

    ಚಂದ್ರನ ಶಿಲೆ ಸುಮಾರು 4.4 ಪೌಂಡ್ ಭಾರ ಇದೆ, ಅಗ್ನಿಪರ್ವತದ ಸ್ಯಾಂಪಲ್​ಗಳನ್ನು ಹೊಂದಿದ್ದ ಸ್ಪೇಸ್ ಕ್ಯಾಪ್ಸುಲ್ ಅಟ್ಲಾಂಟಿಕ್ ಸಮುದ್ರಕ್ಕೂ 3 ಸಾವಿರ ಮೈಲಿಗಳ ದೂರವಿದ್ದಾಗ ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟು, 6 ಮೈಲಿ ಎತ್ತರವಿದ್ದಾಗ ಪ್ಯಾರಚ್ಯೂಟ್ ಮೂಲಕ ಭೂ ಸ್ಪರ್ಶ ಮಾಡಲಾಗಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತಾಧಿಕಾರಿ ಹೇಳಿಕೆ ನೀಡಿದ್ದಾರೆ.

    ಪತ್ನಿಗೂ ತಾಯಿಗೂ ಸದಾ ಜಗಳ- ನಾನು ಕುಗ್ಗಿ ಹೋಗಿದ್ದೇನೆ; ಸಮಸ್ಯೆ ಹೇಗೆ ಪರಿಹರಿಸಲಿ?

    ರೈಲು ಹತ್ತಿ ಸೆಲ್ಫಿ ತೆಗೆಯುವಷ್ಟರಲ್ಲಿಯೇ ಸಜೀವ ದಹನವಾದ ಬಾಲಕ!

    ಈ ರಾಜ್ಯಗಳಲ್ಲಿ ಮಹಿಳೆಯರೇ ‘ಎಣ್ಣೆ’ ಜಾಸ್ತಿ ಕುಡಿಯೋದಂತೆ: ಲೆಕ್ಕಾಚಾರ ತಲೆಕೆಳಗೆ ಮಾಡಿ ಸಮೀಕ್ಷೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts