More

    ಈ ರಾಜ್ಯಗಳಲ್ಲಿ ಮಹಿಳೆಯರೇ ‘ಎಣ್ಣೆ’ ಜಾಸ್ತಿ ಕುಡಿಯೋದಂತೆ: ಲೆಕ್ಕಾಚಾರ ತಲೆಕೆಳಗೆ ಮಾಡಿ ಸಮೀಕ್ಷೆ!

    ನವದೆಹಲಿ: ಹೆಚ್ಚು ಮದ್ಯಸೇವನೆ ಮಾಡುವ ರಾಜ್ಯ ಯಾವುದು ಎಂದು ಕೇಳಿದರೆ ಬಹುಶಃ ಎಲ್ಲರ ಗಮನ ಹೋಗುವುದು ಗೋವಾದತ್ತ. ಅದನ್ನು ಬಿಟ್ಟಿರೆ ಮಹಾರಾಷ್ಟ್ರದಲ್ಲಿಯೂ ಎಣ್ಣೆ ಪ್ರಿಯರು ಹೆಚ್ಚಿಗೆ ಇದ್ದಾರೆ ಎಂದೇ ಅಂದುಕೊಳ್ಳಲಾಗಿತ್ತು.

    ಆದರೆ ರಾಷ್ಟ್ರೀಯ ಕುಟುಂಬ ಕಲ್ಯಾಣ ಇಲಾಖೆಯ 2019-20ರ ಸಮೀಕ್ಷೆ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ. ಮದ್ಯಪ್ರಿಯರು ಯಾವ ರಾಜ್ಯದಲ್ಲಿ ಹೆಚ್ಚಾಗಿದ್ದಾರೆ, ಯಾವ ರಾಜ್ಯದಲ್ಲಿ ಮಹಿಳೆಯರು, ಪುರುಷರನ್ನು ಮೀರಿಸುತ್ತಿದ್ದಾರೆ ಎನ್ನುವ ಸಮೀಕ್ಷೆಯೊಂದು ಹೊರಗೆ ಬಿದ್ದಿದೆ.

    2015-16ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ 15ರಿಂದ 49 ವರ್ಷದ ಜನರನ್ನು ಗುರಿಯಾಗಿರಿಸಿ ಮಾಹಿತಿ ಕಲೆ ಹಾಕಲಾಗಿತ್ತು. ಆದರೆ 2019-20ರಲ್ಲಿ 15 ವರ್ಷ ಮೇಲ್ಪಟ್ಟವರನ್ನು ಸಂಪರ್ಕಿಸಿ ಸಮೀಕ್ಷೆ ಸಿದ್ಧಪಡಿಸಲಾಗಿದೆ. ಸಮೀಕ್ಷೆಯಲ್ಲಿ ಹಲವು ಕುತೂಹಲಕಾರಿ ಅಂಶಗಳಿದ್ದು, ಕೆಲವೊಂದು ರಾಜ್ಯಗಳಲ್ಲಿ ಮಹಿಳೆಯರೇ ಪುರುಷರಿಗಿಂತ ಹೆಚ್ಚು ಮದ್ಯದ ದಾಸರಾಗಿದ್ದಾರೆ.

    ಸಮೀಕ್ಷೆಯ ಪ್ರಕಾರ ದಕ್ಷಿಣ ಭಾರತದ ತೆಲಂಗಾಣ ರಾಜ್ಯದಲ್ಲಿ ಅತೀ ಹೆಚ್ಚು ಮದ್ಯ ಮಾರಾಟವಾಗುತ್ತಿದ್ದು, ಸಂಪೂರ್ಣ ಮದ್ಯ ನಿಷೇಧಗೊಂಡಿರುವ ಬಿಹಾರದ ಗಂಡಸರು ಅತೀ ಹೆಚ್ಚಿನ ಪ್ರಮಾಣದಲ್ಲಿ ಮದ್ಯದ ದಾಸರಾಗಿದ್ದಾರೆ. ಮದ್ಯದ ಉತ್ಪಾದನೆ, ಮಾರಾಟ, ಆಮದು ಬಿಹಾರದಲ್ಲಿ ನಿಷೇಧವಾಗಿದ್ದರೂ, ಅಲ್ಲಿ ಮದ್ಯದ ದಾಸರು ಮಹಾರಾಷ್ಟ್ರಗಿಂತ ಜಾಸ್ತಿ ಎನ್ನುವ ಅಂಶ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಈ ರಾಜ್ಯಕ್ಕೆ ಮದ್ಯ ಪೂರೈಕೆ ಮಾಡುತ್ತಿರುವವರು ಯಾರು ಎಂಬುದು ಈಗಿರುವ ಪ್ರಶ್ನೆ.

    ಇನ್ನು ಮಹಿಳೆಯರ ವಿಷಯಕ್ಕೆ ಬರುವುದಾದರೆ, ಸಿಕ್ಕಿಂನಲ್ಲಿ ಅತೀ ಹೆಚ್ಚು ಮಹಿಳೆಯರು ಪುರುಷರಿಗಿಂತಲೂ ಹೆಚ್ಚು ಮದ್ಯಸೇವನೆ ಮಾಡುತ್ತಾರಂತೆ. ಸಿಕ್ಕಿಂನಲ್ಲಿ ಮದ್ಯ ಹೀರುವ ಮಹಿಳೆಯ ಸಂಖ್ಯೆ ಶೇ.16.2ರಷ್ಟು ಇದ್ದರೆ, ಎರಡನೆಯ ಸ್ಥಾನದಲ್ಲಿ ಇರುವ ಅಸ್ಸಾಂನಲ್ಲಿ
    ಶೇ.7.3ರಷ್ಟು ಮದ್ಯ ಸೇವಿಸುತ್ತಾರೆ ಎಂದು ಸಮೀಕ್ಷೆ ಹೇಳಿದೆ.

    ಗುಜರಾತ್​ನಲ್ಲಿ ಕೂಡ ಮದ್ಯಮಾರಾಟ ನಿಷೇಧವಿದ್ದು, ಮದ್ಯ ಸೇವಕರು ಇಲ್ಲಿ ಅತಿಕಮ್ಮಿ ಸಂಖ್ಯೆಯಲ್ಲಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಪುರುಷರು ಅತೀ ಕಡಿಮೆ ಪ್ರಮಾಣದ ಮದ್ಯ ಸೇವಿಸುತ್ತಿದ್ದಾರೆ.

    ಅತೀ ಹೆಚ್ಚು ಮದ್ಯ ಸೇವಿಸುವ ರಾಜ್ಯಗಳಲ್ಲಿ ತೆಲಂಗಾಣ ಮೊದಲ ಸ್ಥಾನದಲ್ಲಿದ್ದು (ಶೇ. 43.3), ಸಿಕ್ಕಿಂ (ಶೇ. 39.8, ), ಮಣಿಪುರ (ಶೇ. 37.5) ಮತ್ತು ಗೋವಾದಲ್ಲಿ ಶೇ. 36.9ರಷ್ಟು ನಂತರದ ಸ್ಥಾನಗಳನ್ನು ಪಡೆದಿವೆ. ಮಿಜೋರಾಂ, ಮಣಿಪುರ್, ಮೇಘಾಲಯ ಮತ್ತು ತ್ರಿಪುರಾದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟವರು ಅತೀ ಹೆಚ್ಚು ಮದ್ಯ ಸೇವಿಸುತ್ತಾರೆ ಎಂದು ವರದಿ ತಿಳಿಸಿದೆ.

    ಅದೇ ರೀತಿ ಈಶಾನ್ಯ ರಾಜ್ಯಗಳಲ್ಲಿ ಅತೀ ಹೆಚ್ಚು ತಂಬಾಕು ಸೇವಿಸುತ್ತಾರೆ ಎಮದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವಿವರಿಸಿದೆ. ಕರ್ನಾಟಕದ ಬಗ್ಗೆ ಇದರಲ್ಲಿ ಉಲ್ಲೇಖವಿಲ್ಲ.

    ಫೇಷಿಯಲ್​ ಮಾಡಿಸಬೇಕಿತ್ತು ಎನ್ನುತ್ತಲೇ ಬ್ಯೂಟಿ ಪಾರ್ಲರ್​ ಮಾಲೀಕಳನ್ನು ತಬ್ಬಿಕೊಂಡು ಪರಾರಿ!

    ಕಾಲಿಗೆ ಸುತ್ತಿಗೊಂಡ ಬೃಹದಾಕಾರದ ಹಾವು- ಭಯಾನಕ ವಿಡಿಯೋ ವೈರಲ್​

    ಸರ್ಕಾರಿ ಬಸ್​, ಗ್ಯಾಸ್ ಟ್ಯಾಂಕರ್​ ನಡುವೆ ಭೀಕರ ಅಪಘಾತ- 12 ಮಂದಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts