ಕಾಲಿಗೆ ಸುತ್ತಿಗೊಂಡ ಬೃಹದಾಕಾರದ ಹಾವು- ಭಯಾನಕ ವಿಡಿಯೋ ವೈರಲ್​

snake
Published on

ಹಾವು ಎಂದರೆ ಕನಸಿನಲ್ಲಿಯೂ ಬೆಚ್ಚಿಬೀಳುವವರೇ ಹೆಚ್ಚುಮಂದಿ. ಅಂಥದ್ದರಲ್ಲಿ ಎದುರಿಗೆ ಹಾವು ಬಂದರೆ? ಅಬ್ಬಾ ನೆನೆಸಿಕೊಂಡರೇ ಭಯವಾಗುತ್ತದೆಯಲ್ಲವೆ?

ಆದರೆ ಇಲ್ಲೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಇದೊಂದು ರೀತಿಯಲ್ಲಿ ಭಯಾನಕ ವಿಡಿಯೋ. ಏಕೆಂದರೆ ಈ ವಿಡಿಯೋದಲ್ಲಿ ಬೃಹದಾಕಾರದ ಹಾವೊಂದು ಯುವಕನ ಕಾಲನ್ನು ಸುತ್ತಿಕೊಂಡಿದೆ. ಯುವಕ ಅದನ್ನು ತೆಗೆಯಲು ಹರಸಾಹಸ ಪಡುತ್ತಿದ್ದಾನೆ. ಆದರೆ ಅದು ಸಾಧ್ಯವಾಗುತ್ತಿಲ್ಲ.

ಆತನನ್ನು ರಕ್ಷಿಸಲು ಅನೇಕ ಮಂದಿ ಬಂದಿದ್ದಾರೆ. ಯುವಕ ಮಾತ್ರ ಸಾವು ಸಮೀಪವೇ ಬಂದಂತೆ ಒದ್ದಾಡುತ್ತಿದ್ದಾನೆ. ಎಷ್ಟು ಮಂದಿ ಬಂದರೂ ಹಾವನ್ನು ಈ ಯುವಕನ ಕಾಲಿನಿಂದ ತಪ್ಪಿಸಲು ಸಾಧ್ಯವಾಗುತ್ತಿಲ್ಲ.

29 ಸೆಕೆಂಡ್​ಗಳ ಈ ವಿಡಿಯೋ ಅನ್ನು ಮೇರಿಪೋಚೋವಾ ಎಂಬ ಟ್ವಿಟರ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾವು ತನ್ನ ಡಿನ್ನರ್​ಗಾಗಿ ಹೀಗೆ ಮಾಡುತ್ತಿದೆ ಎಂದು ಕ್ಯಾಪ್ಷನ್​ ಬರೆಯಲಾಗಿದೆ. ಈ ವಿಡಿಯೋ ಸಕತ್​ ವೈರಲ್​ ಆಗಿದ್ದು, ಭಯಾನಕ ದೃಶ್ಯ ಕಂಡು ಬೆಚ್ಚಿಬೀಳುವಂತಾಗಿದೆ.

ಇದು ನಡೆದಿರುವುದು ಎಲ್ಲಿ, ಯಾವಾಗ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ, ಕೊನೆಯಲ್ಲಿ ಯುವಕನನ್ನು ಹಾವಿನಿಂದ ಕಾಪಾಡಲಾಗಿದೆ ಎಂದು ಸುದ್ದಿಯಾಗಿದೆ, ಆದರೆ ಆ ಭಾಗ ಈ ವಿಡಿಯೋದಲ್ಲಿ ಇಲ್ಲ.

ಅಕ್ಟೋಬರ್ 2019 ರಲ್ಲಿ, 61 ವರ್ಷದ ಕೇರಳದ ಕಾರ್ಮಿಕನೊಬ್ಬನ ಕುತ್ತಿಗೆಗೆ ಹೆಬ್ಬಾವು ಸುತ್ತಿಕೊಂಡು ಆತ ಉಸಿರಾಡಲಾಗದೇ ಒದ್ದಾಡುತ್ತಿದ್ದ ವಿಡಿಯೋ ಒಂದು ವೈರಲ್​ ಆಗಿತ್ತು. ಸ್ಥಳೀಯರೆಲ್ಲಾ ಬಂದು ಕೊನೆಗೂ ಹಾವಿನಿಂದ ಕಾರ್ಮಿಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net