More

    VIDEO | IPLನಲ್ಲಿ ಮುಗಿದ ಚೆನ್ನೈ ಕಥೆ.. ಧೋನಿ ಏನ್ ಮಾಡ್ತಿದ್ದಾರೆ ನೋಡಿದ್ದೀರಾ?

    ಚೆನ್ನೈ:  ಐಪಿಎಲ್ 17ನೇ ಸೀಸನ್​​ನಲ್ಲಿ ಆರ್​​ಸಿಬಿ ತಂಡದ ಎದರು ಚೆನ್ನೈ ಸೂಪರ್ ಕಿಂಗ್ಸ್ ಸೋಲುವ ಮೂಲಕವಾಗಿ ಕಥೆ ಅಂತ್ಯಗೊಂಡಿದೆ. ಈ ಹಿಂದೆ ಐದು ಬಾರಿಯ ಚಾಂಪಿಯನ್ ಆಗಿದ್ದ ಸಿಎಸ್‌ಕೆ ಈ ವರ್ಷ ಪ್ಲೇಆಫ್‌ಗೆ ಪ್ರವೇಶಿಸದೆ ನಿರ್ಗಮಿಸಿತು. ಈ ಅನುಕ್ರಮದಲ್ಲಿ ಸುಮಾರು ಎರಡು ತಿಂಗಳ ಕಾಲ ಐಪಿಎಲ್ ನಲ್ಲಿ ಬ್ಯುಸಿಯಾಗಿದ್ದ ಟೀಂ ಇಂಡಿಯಾದ ದಿಗ್ಗಜ ಆಟಗಾರ, ಸಿಎಸ್ ಕೆ ಸ್ಟಾರ್ ಆಟಗಾರ ಎಂಎಸ್ ಧೋನಿ ತವರು ರಾಂಚಿ ತಲುಪಿದ್ದಾರೆ.

    ಚೆನ್ನೈ ಸೂಪರ್ ಕಿಂಗ್ಸ್ ಶನಿವಾರ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಧೋನಿ ಮತ್ತು ಜಡೇಜಾ ಕಾದಾಡಿದರೂ ಚೆನ್ನೈ 27 ರನ್‌ಗಳಿಂದ ಸೋಲನುಭವಿಸಿತ್ತು. ಚೆನ್ನೈ ಪ್ಲೇಆಫ್‌ಗೆ ಅರ್ಹತೆ ಪಡೆಯದ ಹಿನ್ನೆಲೆಯಲ್ಲಿ ಧೋನಿ ತಮ್ಮ ಕುಟುಂಬದೊಂದಿಗೆ ಭಾನುವಾರ ತಮ್ಮ ತವರು ರಾಂಚಿ ತಲುಪಿದರು.  ನಿನ್ನೆ (ಸೋಮವಾರ) ತಮ್ಮ ನೆಚ್ಚಿನ ಬೈಕ್ ನಲ್ಲಿ ಹೆಲ್ಮೆಟ್ ಹಾಕಿಕೊಂಡು  ಬೈಕ್​ ರೈಡ್​​ ಮಾಡಿದ್ದಾರೆ.

    ಯಮಹಾ ಬೈಕ್‌ನಲ್ಲಿ ಧೋನಿ ಫಾರ್ಮ್‌ಹೌಸ್‌ಗೆ ಮರಳುತ್ತಿದ್ದಾರೆ. ಇದನ್ನು ಅಭಿಮಾನಿಯೊಬ್ಬ ವಿಡಿಯೋ ಮಾಡಿಕೊಂಡಿದ್ದಾನೆ. ಅಭಿಮಾನಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕಳೆದ ಕೆಲವು ದಿನಗಳಿಂದ ಧೋನಿ ನಿವೃತ್ತಿ ಕುರಿತು ಚರ್ಚೆ ನಡೆಯುತ್ತಿದೆ. ಈ ಸೀಸನ್ ಅವರ ಕೊನೆಯ ಸೀಸನ್ ಎಂದು ವದಂತಿಗಳಿವೆ. ಆದರೆ.. ಇವುಗಳಿಗೆ ಧೋನಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ತಮ್ಮ ನಿವೃತ್ತಿ ಕುರಿತು ಯಾವುದೇ ಘೋಷಣೆ ಮಾಡಿಲ್ಲ.

    ಕನ್ನಡಿಯಲ್ಲಿ ತನ್ನ ಮುಖವನ್ನೇ ನೋಡಿಕೊಂಡು ನಾಚಿದ ಕೋತಿ; ವಿಡಿಯೋ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts