More

    ಮೂತ್ರದಲ್ಲಿ ಬೇಯಿಸುವ ಮೊಟ್ಟೆಗಳಿಗೆ ಇಲ್ಲಿ ಭಾರಿ ಡಿಮ್ಯಾಂಡ್​! ತಿಂದ್ರೆ ಏನಾಗುತ್ತೆ? ಇಲ್ಲಿದೆ ಅಚ್ಚರಿಯ ಉತ್ತರ…

    ಬೀಜಿಂಗ್​: ಚಿತ್ರವಿಚಿತ್ರ ತಿನಿಸುಗಳಿಗೆ ಇಡೀ ಜಗತ್ತಿನಲ್ಲಿ ಹೆಸರುವಾಸಿಯಾಗಿರುವ ದೇಶ ಯಾವುದು ಅಂತಾ ಪ್ರಶ್ನೆ ಮಾಡಿದರೆ ಚೀನಾ ಎಂದು ಥಟ್ಟನೆ ಹೇಳಿಬಿಡುತ್ತಾರೆ. ಏಕೆಂದರೆ, ಚೀನಾದವರು ತಿನ್ನದೇ ಇರುವ ವಸ್ತುಗಳೇ ಇಲ್ಲವೇನೋ? ಜಿರಳೆ, ಕಪ್ಪೆ, ಹೆಬ್ಬಾವು, ಮೊಸಳೆ, ಕೋತಿ, ನಾಯಿ, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮನುಷ್ಯನನ್ನು ಬಿಟ್ಟು ಭೂಮಂಡಲದಲ್ಲಿ ಇರುವ ಎಲ್ಲ ಪ್ರಾಣಿಗಳನ್ನೂ ಚೀನಾದವರು ತಿಂದು ಬಿಡುತ್ತಾರೆ.

    ಇನ್ನು ಚೀನಾದ ಮತ್ತೊಂದು ವಿಚಿತ್ರ ಆಹಾರ ಪದ್ಧತಿ ಇದೀಗ ಬೆಳಕಿಗೆ ಬಂದಿದೆ. ಅದೇ “ವರ್ಜಿನ್​ ಬಾಯ್​ ಎಗ್ಸ್”​. ಹೀಗಂದ್ರೆ ಏನು ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿದೆಯಾ? ಈ ವರ್ಜಿನ್​ ಬಾಯ್​ ಎಗ್ಸ್​ ಅಂದ್ರೆ ಮೂತ್ರದಲ್ಲಿ ಮೊಟ್ಟೆಯನ್ನು ಬೇಯಿಸುವುದು. ಅದು ಕೂಡ ವರ್ಜಿನ್ ಹುಡುಗರ ಮೂತ್ರದಲ್ಲಿ. ಇದು ಚೀನಾದ ಡೋಂಗ್ಯಾಂಗ್ ಪ್ರದೇಶದ ಸಾಂಸ್ಕೃತಿಕ ಪರಂಪರೆಯ ಕಲೆಯಾಗಿದೆ.

    ಪ್ರತಿ ವಸಂತ ಋತುವಿನಲ್ಲಿ ಡೋಂಗ್ಯಾಂಗ್ ನಗರದಲ್ಲಿ ಬೀದಿ ವ್ಯಾಪಾರಿಗಳು ವಿಶಿಷ್ಟವಾದ ತಿಂಡಿಯಾಗಿ ‘ವರ್ಜಿನ್​ ಬಾಯ್​ ಎಗ್ಸ್​’ ಮಾರಾಟ ಮಾಡುತ್ತಾರೆ. 10 ವರ್ಷ ಒಳಗಿನ ಬಾಲಕರ ಮೂತ್ರದಿಂದ ಮಾತ್ರ ಮೊಟ್ಟೆಯನ್ನು ಬೇಯಿಸಲಾಗುತ್ತದೆ. ಹುಡುಗರ ಮೂತ್ರವೇ ಏಕೆ ಬೇಕು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಆದರೆ, ಇದು ಶತಮಾನಗಳಿಂದಲೂ ಚೀನಾದಲ್ಲಿ ನಡೆದುಕೊಂಡುಬರುತ್ತಿದೆ. ಮೂತ್ರದಲ್ಲಿ ಬೇಯಿಸಿದ ಮೊಟ್ಟೆಗಳು ಗಮನಾರ್ಹವಾದ ಆರೋಗ್ಯ ಗುಣಗಳನ್ನು ಹೊಂದಿದೆ ಎಂದು ಹೇಳಿಕೊಳ್ಳುತ್ತಾರೆ.

    ನೀವು ಇದನ್ನು ತಿಂದರೆ ನಿಮಗೆ ಹೀಟ್ ಸ್ಟ್ರೋಕ್ ಬರುವುದಿಲ್ಲ ಮತ್ತು ಪರಿಮಳಯುಕ್ತವಾಗಿವೆ. ಅಲ್ಲದೆ, ಸ್ನಾಯು ನೋವು ಕೂಡ ಬರುವುದಿಲ್ಲ. ಈ ಮೊಟ್ಟೆಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ನಮ್ಮ ಕುಟುಂಬದವರು ಪ್ರತಿ ಬಾರಿ ಊಟದ ಜತೆಗೆ ಇವುಗಳನ್ನು ಸೇವಿಸಲು ಬಯಸುತ್ತಾರೆ. ಡೋಂಗ್ಯಾಂಗ್‌ನಲ್ಲಿ, ಪ್ರತಿ ಕುಟುಂಬವು ಈ ಮೊಟ್ಟೆಗಳನ್ನು ತಿನ್ನಲು ಇಷ್ಟಪಡುತ್ತದೆ ಎಂದು “ವರ್ಜಿನ್ ಬಾಯ್ ಎಗ್ಸ್” ಸ್ಟಾಲ್‌ಗಳನ್ನು ಹೊಂದಿರುವ 51 ವರ್ಷದ ಗೆ ಯೋಹುವಾ ಹೇಳಿದ್ದಾರೆ.

    ಯೋಹುವಾ ಅವರು 20 ವರ್ಷಗಳಿಂದಲೂ ತಾಜಾ ಮತ್ತು ಉಪ್ಪು ರುಚಿಯಿಂದಾಗಿ ಜನಪ್ರಿಯವಾದ ತಿಂಡಿಯನ್ನು ತಯಾರಿಸುತ್ತಿದ್ದಾರೆ ಎಂದು ಹೇಳಿದರು. ಪ್ರತಿ ಮೊಟ್ಟೆಯು 1.50 ಯುವಾನ್ (17.62 ರೂಪಾಯಿ) ಕ್ಕೆ ಮಾರಾಟವಾಗುತ್ತದೆ. ತಾನು ಮಾರಾಟ ಮಾಡುವ ಸಾಮಾನ್ಯ ಮೊಟ್ಟೆಗಳ ಬೆಲೆಗಿಂತ ಎರಡು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಈ ವಿಶೇಷ ಮೊಟ್ಟೆಗಳನ್ನು ತಯಾರಿಸಲು ಇಡೀ ದಿನ ತೆಗೆದುಕೊಳ್ಳುತ್ತದೆ. ಮೂತ್ರದ ಪಾತ್ರೆಯಲ್ಲಿ ಹಸಿ ಮೊಟ್ಟೆಗಳನ್ನು ಚೆನ್ನಾಗಿ ನೆನೆಸಿ, ನಂತರ ಕುದಿಸಲಾಗುತ್ತದೆ. ಚೆನ್ನಾಗಿ ಬೇಯಿಸಿದ ಮೊಟ್ಟೆಗಳ ಚಿಪ್ಪುಗಳು ಬಿರುಕು ಬಿಡುತ್ತವೆ ಮತ್ತು ಅವು ಗಂಟೆಗಳ ಕಾಲ ಮೂತ್ರದಲ್ಲಿ ಕುದಿಯುತ್ತವೆ. ಯುವಕರು ಮತ್ತು ಹಿರಿಯರು ಸೇರಿದಂತೆ ಅನೇಕ ಡೋಂಗ್ಯಾಂಗ್ ನಿವಾಸಿಗಳು ಈ ಮೊಟ್ಟೆಗಳು ದೇಹದ ಶಾಖವನ್ನು ಕಡಿಮೆ ಮಾಡುತ್ತದೆ, ಉತ್ತಮ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಸಾಮಾನ್ಯವಾಗಿ ದೇಹವನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ನಂಬಿದ್ದಾರೆ. ಇದನ್ನು ತಮ್ಮ ಪೂರ್ವಜರು ನಮಗೆ ಹೇಳುತ್ತಾ ಬಂದಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್​)

    ಕಾರು ಅಪಘಾತದಲ್ಲಿ ಗಾಯಗೊಂಡ ಪಾಕಿಸ್ತಾನದ ಇಬ್ಬರು ಮಹಿಳಾ ಕ್ರಿಕೆಟಿಗರ ಸ್ಥಿತಿ ಗಂಭೀರ!

    ಸ್ಟಾರ್​ ನಟ ಆ*ತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನೇ ಖರೀದಿಸಿದ “ರಣವಿಕ್ರಮ” ನಟಿ ಅದಾ ಶರ್ಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts