

ಮುಂಬೈ: ರಣವಿಕ್ರಮ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜತೆ ತೆರೆ ಹಂಚಿಕೊಂಡಿದ್ದ ಅದಾ ಶರ್ಮಾ ಅವರು ದುಬಾರಿ ಬೆಲೆ ಬಾಳುವ ಮನೆಯನ್ನು ಖರೀದಿ ಮಾಡಿದ್ದಾರೆ. ಆದರೆ ಟ್ವೀಸ್ಟ್ ಎನಪ್ಪಾ ಅಂದ್ರೆ ಈ ಮನೆಯಲ್ಲಿ ಈ ಹಿಂದೆ ಸ್ಟಾರ್ ನಟನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರಂತೆ.
ನಟ ಸುಶಾಂತ್ ಸಿಂಗ್ ಮುಂಬೈನ ಮೋಂಟ್ ಬ್ಲ್ಯಾಂಕ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದರು. 2020 ಜೂನ್ 14ರಂದು ಅದೇ ಅಪಾರ್ಟ್ ಮೆಂಟ್ ರೂಮ್ನಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಅಲ್ಲಿಂದ ಆ ಫ್ಲ್ಯಾಟ್ ಖಾಲಿಯೇ ಉಳಿದಿತ್ತು. ಬಾಲಿವುಡ್ ನ ಖ್ಯಾತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನೇ ಖರೀದಿಸಿದ್ದಾರೆ ನಟಿ ಅದಾ ಶರ್ಮಾ.
ಮುಂಬೈನ ಆ ಫ್ಲ್ಯಾಟ್ ನಾಲ್ಕು ಕೋಣೆಗಳನ್ನು ಹೊಂದಿದ್ದು, ಸಮುದ್ರಕ್ಕೆ ಮುಖ ಮಾಡಿದ ಮನೆಯಾಗಿದೆ. ಒಟ್ಟು 2500 ಸ್ಕ್ವೇರ್ ಫೀಟ್ ವಿಸ್ತೀರ್ಣ ಹೊಂದಿದೆ. ಇಲ್ಲಿಯೇ ಹಲವಾರು ವರ್ಷಗಳಿಂದ ಸುಶಾಂತ್ ಸಿಂಗ್ ವಾಸವಿದ್ದರು. 2020ರ ಜೂನ್ 14ರಂದು ಅವರು ನಿಧನ ಹೊಂದಿದರು. ಸಾವಿನ ನಂತರ ಯಾರೂ ಈ ಮನೆಯಲ್ಲಿ ಉಳಿದುಕೊಳ್ಳಲು ಇಷ್ಟ ಪಟ್ಟಿರಲಿಲ್ಲ.
‘ನಾನು ಎಲ್ಲರ ಹೃದಯದಲ್ಲಿ ವಾಸಿಸುತ್ತಿದ್ದೇನೆ. ಮಾತನಾಡಲು ಇದು ಸರಿಯಾದ ಸಮಯ. ನಾನು ಆ ಮನೆ ನೋಡಲು ಹೋದಾಗ ಮಾಧ್ಯಮದ ಗಮನ ಸಂಪೂರ್ಣವಾಗಿ ನನ್ನ ಮೇಲೆ ಇತ್ತು. ನಾನು ಖಾಸಗಿ ವಿಚಾರವನ್ನು ನನ್ನಲ್ಲೇ ಇಟ್ಟುಕೊಳ್ಳಲು ಬಯಸುವ ವ್ಯಕ್ತಿ. ನನ್ನ ಸಿನಿಮಾಗಳಿಗಾಗಿ ಮಾತ್ರ ಸುದ್ದಿಯಲ್ಲಿ ಇರಲು ಬಯಸುತ್ತೇನೆ. ನಾನು ಉಳಿದ ವಿಚಾರಗಳಲ್ಲಿ ಗೌಪ್ಯತೆ ಕಾಪಾಡಿಕೊಳ್ಳಲು ಇಷ್ಟಪಡುತ್ತೇನೆ’ ಎಂದಿದ್ದಾರೆ ನಟಿ ಅದಾ ಶರ್ಮಾ.
‘ಈ ಜಗತ್ತಿನಲ್ಲಿ ಇಲ್ಲದ ವ್ಯಕ್ತಿಯ ಬಗ್ಗೆ ಮಾತನಾಡುವುದು ತಪ್ಪು ಎಂದು ನಾನು ಭಾವಿಸಿದೆ. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ಹೀಗಾಗಿ, ನಾನು ಆ ಮನೆ ಖರೀದಿಸಿದೆ. ಅವರ ಬಗ್ಗೆ ಮಾಡಿದ ಕೆಲವು ಕಮೆಂಟ್ಗಳನ್ನು ನೋಡಿದೆ. ನನ್ನನ್ನು ಟ್ರೋಲ್ ಮಾಡಿ. ಆದರೆ, ಜಗತ್ತಿನಲ್ಲಿ ಇಲ್ಲದ ಆ ವ್ಯಕ್ತಿ ಬಗ್ಗೆ ಮಾತನಾಡಬೇಡಿ’ ಎಂದು ಕೋರಿದ್ದಾರೆ.