More

  ತಡರಾತ್ರಿ ಫುಟ್ ಪಾತ್​​ನಲ್ಲಿ ನಯನತಾರಾ; ವಿಡಿಯೋ ನೋಡಿ

  ಮುಂಬೈ:  ಸ್ಟಾರ್‌ಗಳು ಏನೇ ಮಾಡಿದರೂ ಅಭಿಮಾನಿಗಳಿಗೆ ಹಬ್ಬ. ಅದರಲ್ಲೂ ನಾಯಕಿಯರ ಕುರಿತ ವೀಡಿಯೋ, ಸುದ್ದಿಗಳಿಗೆ ಒಂದು ರೇಂಜ್ ನಲ್ಲಿ ಬೇಡಿಕೆ ಇದೆ. ಆದರೆ ನಯನತಾರಾ ಅಂತಹ ವಿಷಯಗಳಿಂದ ದೂರವಿದ್ದಾರೆ.  ಆದರೆ ಇತ್ತೀಚೆಗೆ ಕೇರಳದಲ್ಲಿ ಆಕೆಯ ಮಧ್ಯರಾತ್ರಿಯ ಬೀದಿ ಬದಿ ಕಾಣಿಸಿಕೊಂಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.

  ನಯನತಾರಾ ಮಧ್ಯರಾತ್ರಿ ತನ್ನ ಸ್ನೇಹಿತರೊಂದಿಗೆ ಫುಟ್ ಪಾತ್ ಮೇಲೆ ಐಸ್ ಕ್ರೀಂ ಸೇವಿಸಿ ಅಚ್ಚರಿ ಮೂಡಿಸಿದ್ದಾರೆ. ನಯನ ತನ್ನ ಫ್ರೆಂಡ್ಸ್ ಜತೆ ಐಸ್ ಕ್ರೀಂ ಎಂಜಾಯ್ ಮಾಡುವಾಗ ತುಂಬಾ ಹ್ಯಾಪಿಯಾಗಿ ಕಾಣುತ್ತಿದ್ದಳು.  ಈ ವಿಡಿಯೋವನ್ನು ಸ್ವತಃ ನಯನತಾರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮತ್ತೆ ಮತ್ತೆ ವೀಕ್ಷಿಸುತ್ತಿದ್ದಾರೆ.  ನಯನತಾರಾ ತಮ್ಮ ವೈಯಕ್ತಿಕ ಜೀವನದಲ್ಲಿ ಎಷ್ಟು ಸರಳವಾಗಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

  ಆ ವಿಡಿಯೋದಲ್ಲಿ ನಯನ ಜತೆಗೆ ಇನ್ನಿಬ್ಬರು ಕಾಣಿಸಿಕೊಂಡಿದ್ದಾರೆ. ಅವರು ನಯನ ಸ್ನೇಹಿತರು ಅಥವಾ ಸಂಬಂಧಿಕರು ಎಂದು ತಿಳಿದು ಬಂದಿದೆ. ನಡುರಾತ್ರಿ ರಸ್ತೆ ಬದಿ ಐಸ್ ಕ್ರೀಂ ತಿಂದು ತಡರಾತ್ರಿ ಎಂಜಾಯ್ ಮಾಡುತ್ತಿದ್ದವರಿಗೆ ಆ ಐಸ್ ಕ್ರೀಂ ಅಂಗಡಿಯ ಮುಂದೆಯೇ ನಯನತಾರಾ ಬ್ಯಾನರ್ ಕಾಣಿಸಿತು. ಇದರೊಂದಿಗೆ ಉಳಿದ ಇಬ್ಬರು ನಯನತಾರಾ ಜತೆ ತಮಾಷೆಯ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts