

ಉತ್ತರ: ನಿಮ್ಮ ಗೆಳೆಯನ ವಿವಾಹ ಸಿಂದೂವಾದ ವಿವಾಹವೇ ಆಗಿರುತ್ತದೆ. ನಿಮ್ಮ ಗೆಳೆಯನ ಹೆಂಡತಿ ತನ್ನ ಮೊದಲಿನ ಪತಿಯಿಂದ ಡೈವೋರ್ಸ್ ಪಡೆದ ನಂತರ ನಿಮ್ಮ ಗೆಳೆಯನನ್ನು ವಿವಾಹ ಆಗಿರುವುದರಿಂದ ಆ ವಿವಾಹ ಕಾನೂನಿನಲ್ಲಿ ಮಾನ್ಯತೆ ಪಡೆಯುತ್ತದೆ.
ನಿಮ್ಮ ಗೆಳೆಯನ ಹೆಸರಿನಲ್ಲಿರುವ ಎಲ್ಲಾ ಆಸ್ತಿಯಲ್ಲಿ ನಿಮ್ಮ ಗೆಳೆಯನ ಹೆಂಡತಿಗೆ ಮತ್ತು ಆತನ ತಾಯಿಗೆ ಸಮಪಾಲು ಇರುತ್ತದೆ. ನಿಮ್ಮ ಗೆಳೆಯನಿಗೆ ಮಕ್ಕಳು ಇದ್ದರೆ ಅವರಿಗೂ ಸಮಪಾಲು ಸಿಗುತ್ತದೆ. ಕೊಲೆಯ ಆರೋಪ ಒಬ್ಬ ವ್ಯಕ್ತಿಯ ಮೇಲೆ ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಸಾಬೀತಾದಾಗ ಮಾತ್ರ ಅಂತಹ ವ್ಯಕ್ತಿಗೆ ಕೊಲೆಯಾದ ವ್ಯಕ್ತಿಯ ಆಸ್ತಿಯಲ್ಲಿ ಪಾಲಿ ಸಿಗುವುದಿಲ್ಲ.
ನಿಮ್ಮ ಗೆಳೆಯನ ವಿಷಯದಲ್ಲಿ ಆತನ ಹೆಂಡತಿಯ ಮೇಲೆ ದೋಷಾರೋಪಣೆ ಸಹ ಆಗಿಲ್ಲ. ಹೀಗಾಗಿ, ಆಕೆಯ ಮೃತ ಗಂಡನ ಆಸ್ತಿಯಲ್ಲಿ ಆಕೆಯ ಹಕ್ಕನ್ನು ಯಾರೂ ಚ್ಯುತಿ ಮಾಡುವಂತಿಲ್ಲ.
ಸಾಧ್ಯವಾದರೆ ನಿಮ್ಮ ಗೆಳೆಯನ ತಂದೆ ತಾಯಿ ಇರುವ ತಾಲೂಕಿನ ಮಧ್ಯಸ್ಥಿಕೆ ಕೇಂದ್ರದಲ್ಲಿ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಗೆ ಅರ್ಜಿ ಕೊಡಲು ತಿಳಿಸಿ. ಅವರು ನಿಮ್ಮ ಗೆಳೆಯನ ಹೆಂಡತಿಯನ್ನು ಕರೆಯಿಸಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಸಹಾಯ ಮಾಡಬಹುದು. ಇದಕ್ಕೆ ಹಣ ಖರ್ಚು ಆಗುವುದಿಲ್ಲ.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್ ಮೇಲೆ ಕ್ಲಿಕ್ ಮಾಡಿ.