More

  ರಣವೀರ್​​-ದೀಪಿಕಾ ವಿಚ್ಛೇದನ ಪಡೆಯುತ್ತಿರುವುದು ನಿಜಾನಾ; ಉಂಗುರ ತೋರಿಸಿ ನಟ ಕೊಟ್ಟ ಸ್ಪಷ್ಟನೆ ಹೀಗಿದೆ

  ಮುಂಬೈ: ಬಾಲಿವುಡ್​ನ ದಿ ಮೋಸ್ಟ್​ ಸ್ಟೈಲಿಶ್​ ಕಪಲ್ಸ್​ ಎಂದೇ ಖ್ಯಾತಿ ಪಡೆದಿರುವ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ದಂಪತಿ​ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ಮಧ್ಯೆ ಈ ಜೋಡಿ ಕುರಿತಾಗಿ ಹೊಸದೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

  ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಸೋಷಿಯಲ್ ಮೀಡಿಯಾದಲ್ಲಿರುವ ತಮ್ಮ ವೆಡ್ಡಿಂಗ್ ಫೊಟೋಗಳನ್ನು ಡಿಲೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್​ ನೀಡಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ಜೋಡಿ ಡಿವೋರ್ಸ್​ ಪಡೆಯಲಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಲು ಶುರು ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ನಟ ರಣವೀರ್​ ಸಿಂಗ್​ ಕಚೇರಿ ಸಿಬ್ಬಂದಿ ಸ್ಪಷ್ಟನೆ ನೀಡಿದ್ದು, ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

  Ranveer Deepika

  ಇದನ್ನೂ ಓದಿ: ಬಂದರು ಗುರಿಯಾಗಿಸಿ ಭಯೋತ್ಪಾದಕರಿಂದ ಗುಂಡಿನ ದಾಳಿ; 7 ಮಂದಿ ಕಾರ್ಮಿಕರು ಸಾವು, ಓರ್ವ ಗಂಭೀರ

  ನಟನ ಇನ್​ಸ್ಟಾಗ್ರಾಮ್​ನಲ್ಲಿ ಹಲವಾರು ಫೋಟೋ, ವಿಡಿಯೋಗಳು ಇದ್ದ ಹಿನ್ನೆಲೆಯಲ್ಲಿ, 2023 ರ ಹಿಂದಿನ ಎಲ್ಲಾ ಫೋಟೊ, ವಿಡಿಯೋಗಳನ್ನು ಆರ್ಕೈವ್ ಮಾಡಲಾಗಿದೆಯೇ ವಿನಾ ಡಿಲೀಟ್​ ಮಾಡಲಾಗಿಲ್ಲ.  ಅದರಲ್ಲಿ ಮದುವೆಯ ಫೋಟೋ, ವಿಡಿಯೋಗಳು ಇವೆಯಷ್ಟೇ. ಅಷ್ಟೇ ಅಲ್ಲದೇ ದೀಪಿಕಾ ಅವರ ಇನ್​ಸ್ಟಾಗ್ರಾಮ್​ನಲ್ಲಿ ಎಲ್ಲವೂ ಇನ್ನೂ ಇದೆ ಎಂದು ನಟ ರಣವೀರ್​ ಸಿಂಗ್​ ಕಚೇರಿ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ.

  ಇನ್ನೂ ಈ ಕುರಿತು ಮಾತನಾಡಿರುವ ನಟ ರಣವೀರ್​, ದೀಪಿಕಾ ನನಗೆ ಮದುವೆ ಹಾಗೂ ನಿಶ್ಚಿತಾರ್ಥದಲ್ಲಿ ಕೊಟ್ಟ ಉಂಗುರ ನನ್ನ ಪಾಲಿನ ಅತ್ಯಂತ ಅಮೂಲ್ಯವಾದ ಆಭರಣ’ ಎಂದರು. ಮಾತ್ರವಲ್ಲದೆ ತಾವು ಮದುವೆಯ ಉಂಗುರವನ್ನು ಸದಾ ಧರಿಸುವುದಾಗಿ ಹೇಳಿ ಉಂಗುರವನ್ನು ತೋರಿಸಿದ್ದಾರೆ. ನನ್ನ ತಾಯಿಯ ವಜ್ರದ ಕಿವಿಯೋಲೆ ಹಾಗೂ ನನ್ನ ಅಜ್ಜಿಯ ಮುತ್ತಿನ ಹಾರದೊಂದಿಗೆ ಸಹ ನನಗೆ ವಿಶೇಷ ಪ್ರೀತಿಯಿದೆ. ಪತ್ನಿ ಕೊಟ್ಟಿರುವ ಉಂಗುರ ಸೇರಿದಂತೆ ವಿವಿಧ ಆಭರಣದ ಜೊತೆ  ಭಾವನಾತ್ಮಕ ಬಂಧವನ್ನು ಹೊಂದಿರುವುದಾಗಿಯೂ ಹೇಳುವ ಮೂಲಕ ವಿಚ್ಚೇದನ ಸುದ್ದಿಗೆ ತೆರೆ ಎಳೆದಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts