ಪ್ಲೇಆಫ್​ ರೇಸ್​ನಿಂದ ಮುಂಬೈ ಔಟ್​​; ಆರ್​ಸಿಬಿ ಲೆಕ್ಕಾಚಾರ ಹೀಗಿದೆ

RCB
Published on

ಬೆಂಗಳೂರು: ವಿಶ್ವದ ಮಿಲಿಯನ್​ ಡಾಲರ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್​ ಪ್ರಾರಂಭಗೊಂಡು 50ಕ್ಕೂ ಹೆಚ್ಚು ಪಂದ್ಯಗಳು ಮುಕ್ತಾಯಗೊಂಡಿದ್ದು, ಯಾವ ತಂಡಬು ಅಧಿಕೃತವಾಗಿ ಪ್ಲೇಆಫ್​ ಪ್ರವೇಶಿಸಿಲ್ಲ. ಬಹುತೇಕ ತಂಡಗಳು 11ಕ್ಕಿಂತ ಹೆಚಚಿನ ಪಂದ್ಯಗಳನ್ನು ಆಡಿದ್ದು, ಪ್ಲೇಆಫ್​ ರೇಸಿನಲ್ಲಿ ಕಲ್ಕತ್ತಾ ಹಾಗೂ ರಾಜಸ್ಥಾನ ಮುಂದಿದ್ದು, ಉಳಿದ ಎರಡು ಸ್ಥಾನಗಳಿಗಾಗಿ 7ಕ್ಕೂ ಹೆಚ್ಚು ತಂಡಗಳ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿದೆ.

ಇನ್ನೂ ಐಪಿಎಲ್​ನ 58ನೇ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದ್ದು, ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದಾಗಿದೆ. ಈ ಪಂದ್ಯದಲ್ಲಿ ಯಾರು ಸೋತರೂ ಟೂರ್ನಿಯಲ್ಲಿ ಅವರ ಪಯಣ ಕೊನೆಗೊಳ್ಳುತ್ತದೆ. ಉಭಯ ತಂಡಗಳು 11-11 ಪಂದ್ಯಗಳನ್ನು ಆಡಿದ್ದು, ಪ್ರಸ್ತುತ 8-8 ಅಂಕಗಳನ್ನು ಹೊಂದಿವೆ.

ಇಂದಿನ ಪಂದ್ಯದಲ್ಲಿ ಗೆದ್ದ ತಂಡವು 14 ಅಂಕಗಳನ್ನು ತಲುಪಿ ಪ್ಲೇಆಫ್‌ ರೇಸ್‌ನಲ್ಲಿ ಉಳಿಯುವ ಸಾಧ್ಯತೆ ಇದೆ, ಆದರೆ ಸೋತ ತಂಡವು 12 ಅಂಕಗಳನ್ನು ಮಾತ್ರ ತಲುಪಲು ಸಾಧ್ಯವಾಗುತ್ತದೆ.  ಹೀಗಿರುವಾಗ ಈ ಪಂದ್ಯದಲ್ಲಿ ಸೋತ ತಂಡವು ಟೂರ್ನಿಯಿಂದ ಹೊರಬೀಳುವುದು ಖಚಿತ. ಅಂದರೆ ಪಂಜಾಬ್​ ಅಥವಾ ಆರ್​ಸಿಬಿ ಪೈಕಿ ಯಾವ ತಂಡ ಸೋತರೂ ಫ್ಲೇಆಫ್​ ಬಾಗಿಲು ಮುಚ್ಚಲಿದೆ.

ಆರ್​ಸಿಬಿ ಫ್ಲೇಆಫ್​ ಲೆಕ್ಕಾಚಾರ ನೋಡುವುದಾದರೆ ಉಳಿದ ಮೂರೂ ಪಂದ್ಯಗಳನ್ನು ಗೆದ್ದರೆ 14 ಅಂಕ ಸಂಪಾದಿಸಲಿದೆ. ಆದರೆ ಈಗಾಗಲೇ 12 ಅಂಕ ಸಂಪಾದಿಸಿರುವ ಚೆನ್ನೈ, ಡೆಲ್ಲಿ ಹಾಗೂ ಲಖನೌ ಸೂಪರ್​ಜೈಂಟ್ಸ್​ ಉಳಿದ ಪಂದ್ಯಗಳನ್ನು ಸೋಲಬೇಕಿದೆ. ಈ ಮೂರು ತಂಡಗಳು ತಮ್ಮ ಉಳಿದ ಪಂದ್ಯಗಳಲ್ಲಿ ಒಂದನ್ನು ಗೆದ್ದರೂ ಆಗ 14 ಅಂಕ ಈ ಮೂರು ತಂಡಗಳ ಬಳಿ ಇರುತ್ತದೆ. ಆರ್​ಸಿಬಿ ಕೂಡ ಉಳಿದ ಪಂದ್ಯಗಳನ್ನು ಗೆದ್ದರೆ ಅವರ ಬಳಿಯೂ 14 ಅಂಕ ಇರುತ್ತದೆ. ಈ ವೇಳೆ ನೆಟ್​ ರನ್​ರೇಟ್​ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಆರ್​ಸಿಬಿ ಗೆಲ್ಲುವುದಲ್ಲದೆ ರನ್​ರೇಟ್ ಕಾಪಾಡಿಕೊಳ್ಳಬೇಕಾದ ಒತ್ತಡದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net