More

    12 ರನ್​ಗಳಿಗೆ ಎದುರಾಳಿ ತಂಡ ಆಲೌಟ್​; ಟಿ-20 ಕ್ರಿಕೆಟ್​ನಲ್ಲಿ ಅತಿ ದೊಡ್ಡ ಗೆಲುವು ದಾಖಲಿಸಿದ ಜಪಾನ್

    ನವದೆಹಲಿ: ಕ್ರೀಡಾ ಜಗತ್ತಿನಲ್ಲಿ ಕ್ರಿಕೆಟ್​ ಒಂದು ವಿಸ್ಮಯಕಾರಿ ಆಟವಾಗಿದ್ದು, ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಹಲವು ನಿದರ್ಶನಗಳಿವೆ. ಇದೀಗ ವಿಸ್ಮಯಕಾರಿ ಘಟನೆಯೊಂದರಲ್ಲಿ 12 ರನ್​ಗಳಿಗೆ ತಂಡ ಒಂದು ಆಲೌಟ್​ ಆಗಿದ್ದು, ಎದುರಾಳಿ ತಂಡವು 205ರನ್​ಗಳ ಜಯ ದಾಖಲಿಸಿರುವ ಅಪರೂಪದ ಕ್ಷಣ ಬೆಳಕಿಗೆ ಬಂದಿದೆ.

    ಜಪಾನ್​ ಹಾಗೂ ಮಂಗೋಲಿಯಾ ನಡುವಿನ ಪಂದ್ಯ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಮಂಗೋಲಿಯಾ ತಂಡವನ್ನು ಜಪಾನ್​ 12 ರನ್​ಗಳಿಗೆ ಆಲೌಟ್​ ಮಾಡಿದೆ. ಟಿ-20 ಕ್ರಿಕೆಟ್​ ಇತಿಹಾಸದಲ್ಲಿ ದಾಖಲಾದ ಎರಡನೇ ಅತಿ ಕಡಿಮೆ ಮೊತ್ತ ಇದಾಗಿದೆ.

    Japan vs Mongolia

    ಇದನ್ನೂ ಓದಿ: ಕೆಜಿಎಫ್​ ಚಾಪ್ಟರ್​-3 ಬರೋದು ಫಿಕ್ಸ್​ ಆಯ್ತಾ?; ಅಪ್ಡೇಟ್ ಕೊಟ್ಟ ನಿರ್ದೇಶಕ ಪ್ರಶಾಂತ್​ ನೀಲ್

    07 ಪಂದ್ಯಗಳ ಟಿ-20 ಸರಣಿಯಲ್ಲಿ ಮೊದಲು ಬ್ಯಾಟ್​​ ಮಾಡಿದ ಜಪಾನ್​ ಶಬರಿಷ್​ ರವಿಚಂದ್ರನ್​ (69 ರನ್), ಕೆಂಡಲ್ ಕಡೋವಾಕಿ-ಫ್ಲೆಮಿಂಗ್ (32 ರನ್), ಇಬ್ರಾಹಿಂ ತಕಹಶಿ (31 ರನ್​) ಬಿರುಸಿನ ಬ್ಯಾಟಿಂಗ್​ ಫಲವಾಗಿ 20 ಓವರ್​ಗಳಲ್ಲಿ 214 ರನ್​ ಗಳಿಸಿತ್ತು. 215 ರನ್​ಗಳ ಗುರಿ ಬೆನ್ನತ್ತಿದ್ದ ಮಂಗೋಲಿಯಾ ತಂಡವನ್ನು ಇನ್ನಿಲ್ಲದಂತೆ ಕಾಡಿದ ಜಪಾನ್​ ವೇಗಿಗಳು ಎದುರಾಳಿ ತಂಡವನ್ನು 8.2 ಓವರ್​ಗಳಲ್ಲಿ 12 ರನ್​ಗಳಿಗೆ ಆಲೌಟ್​ ಮಾಡಿತ್ತು. ಜಪಾನ್​ ಪರ ಜುಮಾ ಕಟೊ-ಸ್ಟಾಫರ್ಡ್ (05 ವಿಕೆಟ್) ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

    12 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಮಂಗೋಲಿಯಾ ತಂಡವು ಟಿ-20 ಕ್ರಿಕೆಟ್​ ಇತಿಹಾಸದಲ್ಲಿ ಅನಪೇಕ್ಷಿತ ದಾಖಲೆ ಬರೆಯಿತು. ಇದಕ್ಕೂ ಮುನ್ನ 2005ರಲ್ಲಿ ಸ್ಪೇನ್​ ವಿರುದ್ಧ ISLE of Man 10 ರನ್​ಗಳಿಗೆ ಆಲೌಟ್​ ಆಗಿದ್ದು, ಈ ಹಿಂದಿನ ದಾಖಲೆಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts