More

    ಮರ್ಚೆಡ್ ಕೆರೆಯಲ್ಲಿನ ಮೀನುಗಳ ಸಾವು

    ರಾಯಚೂರು: ತಾಲೂಕಿನ ಮರ್ಚೆಡ್ ಗ್ರಾಮದಲ್ಲಿನ ಕೆರೆಯಲ್ಲಿ ನೀರಿಲ್ಲದ ಕಾರಣ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳು ಸಾವನ್ನಪ್ಪಿದ್ದು, ಮೀನು ಸಾಕಾಣಿಕೆಯನ್ನು ನಂಬಿಕೊಂಡಿದ್ದವರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ.
    ಸುಮಾರು 400 ಎಕರೆ ವಿಸ್ತಿರ್ಣ ಹೊಂದಿರುವ ಕೆರೆ ತಾಲೂಕಿನಲ್ಲಿ ದೊಡ್ಡ ಕೆರೆಯಾಗಿದ್ದು, ಪ್ರತಿ ವರ್ಷ ಟೆಂಡರ್ ಕರೆದು ಮೀನು ಸಾಕಾಣಿಗೆ ಗುತ್ತಿಗೆ ನೀಡಲಾಗುತ್ತಿದೆ. ಮೀನು ಮರಿಗಳನ್ನು ತಂದು ಸಾಕಾಣಿಕೆ ಮಾಡಲಾಗುತ್ತಿತ್ತು.
    ಪ್ರತಿ ವರ್ಷ ಬೇಸಿಗೆಯಲ್ಲಿ ಕೆರೆಯಲ್ಲಿ ಸ್ವಲ್ಪ ನೀರು ಇರುತ್ತಿತ್ತು. ಆದರೆ ಈ ಬಾರಿ ತೀವ್ರ ಬರದಿಂದಾಗಿ ಕೆರೆ ಸಂಪೂರ್ಣ ಒಣಗಿಹೋಗಿದೆ.
    ಕೆರೆ ದಂಡೆಯಲ್ಲಿ ಮೀನಿನ ರಾಶಿ ಬಿದ್ದಿದ್ದು, ಕೆರೆ ದಂಡೆಯಲ್ಲಿ ದುರ್ವಾಸನೆ ಹೆಚ್ಚಾಗಿದ್ದು, ಜನರು ಕೆರೆ ದಂಡೆಯಲ್ಲಿ ಓಡಾಡದಂತ ಸ್ಥಿತಿ ಎದುರಾಗಿದೆ. ಮೀನು ಸಾಕಣೆದಾರರು ಪರಿಹಾರ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts