More

    ವಾಟ್ಸ್​ಆ್ಯಪ್​ ಮೆಸೇಜ್​ ಹಾಕಿ ಯುವತಿ ಸಾವು; ಸೀಮೆಎಣ್ಣೆ ಕ್ಯಾನ್​ ಕೊಟ್ಟ ಕೊಲೆಯ ಸುಳಿವು!

    ವಿಜಯವಾಡ: ಇದು ನನ್ನ ಕೊನೆಯ ಸಂದೇಶ, ಇನ್ನು ಮುಂದೆ ನಿಮಗೆ ನಾನು ಸಿಗುವುದಿಲ್ಲ. ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಬೇಡಿ…

    ಇದು 22 ವರ್ಷದ ಆಂಧ್ರಪ್ರದೇಶದ ವಿಜಯವಾಡದ ಅಂಗವಿಕಲ ಯುವತಿ ಉಮ್ಮನೇನಿ ಭುವನೇಶ್ವರಿ ಅವರ ಫೋನಿನ ವಾಟ್ಸ್​ಆ್ಯಪ್​ನಿಂದ ಆಕೆಯ ಎಲ್ಲಾ ಕಾಂಟ್ಯಾಕ್ಟ್​ಗಳಿಗೆ ಹೋದ ಕೊನೆಯ ಸಂದೇಶವಿದು. ಈ ಸಂದೇಶ ನೋಡಿ ಗಾಬರಿಬಿದ್ದ ಸ್ನೇಹಿತರ ಪೈಕಿ ಕೆಲವರು ಬಂದು ನೋಡುವಷ್ಟರಲ್ಲಿ ಯುವತಿ ಬೆಂಕಿಯಲ್ಲಿ ದಹದಹಿಸಿಹೋಗಿದ್ದಳು.

    ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೊಳದ ಬಳಿ ಈ ಘಟನೆ ನಡೆದಿದೆ. ಪೊಲೀಸರಿಗೆ ದೂರು ಹೋದಾಗ ಅವರು ಸ್ಥಳದ ಪರಿಶೀಲನೆ ಮಾಡಿದರು. ಉಮ್ಮನೇನಿಯ ಸ್ನೇಹಿತರೆಲ್ಲರೂ ಇವಳ್ಯಾಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬ ಅಚ್ಚರಿ ಕಾಡತೊಡಗಿತ್ತು. ಕಾಲನ್ನು ಕಳೆದುಕೊಂಡು ಅಂಗವಿಕಲೆಯಾಗಿದ್ದರೂ ಆತ್ಮಹತ್ಯೆ ಮಾಡಿಕೊಳ್ಳುವಂಥದ್ದೇನು ಇರಲಿಲ್ಲ ಎಂದು ಅವರೆಲ್ಲಾ ಹೇಳಿದರು. ಆದರೆ ಆಕೆಯೇ ತನ್ನ ಫೋನ್​ನಿಂದ ಮೆಸೇಜ್​ ಮಾಡಿರುವ ಕಾರಣ, ಆತ್ಮಹತ್ಯೆಯ ಹಾದಿ ತುಳಿದಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದರು.

    ಆದರೆ ಸ್ನೇಹಿತರ ಮಾತನ್ನೆಲ್ಲಾ ಕೇಳಿದ ಬಳಿಕ ಪೊಲೀಸರ ಯೋಚನೆ ಬೇರೆ ಕಡೆ ತಿರುಗಿತು. ವಾಟ್ಸ್​ಆ್ಯಪ್​ ಸಂದೇಶ ಯುವತಿಯ ಫೋನ್​ನಿಂದ ಹೋದ ಮಾತ್ರಕ್ಕೆ ಅದನ್ನು ಆಕೆಯೇ ಕಳುಹಿಸಿರಬೇಕು ಎಂದೇನೂ ಇಲ್ಲವಲ್ಲ ಎಂದು ಅವರು ಅಂದುಕೊಂಡರು.

    ಅದಕ್ಕೆ ಇನ್ನೂ ಒಂದು ಬಲವಾದ ಕಾರಣವಿತ್ತು. ಅದೇನೆಂದರೆ ಯುವತಿಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವುದು ತಿಳಿದುಬಂದಿತ್ತು. ಒಂದು ವೇಳೆ ಆಕೆಯೇ ಬೆಂಕಿ ಹಚ್ಚಿಕೊಂಡಿದ್ದು ಹೌದಾಗಿದ್ದರೆ ಅಲ್ಲಿಯೇ ಸೀಮೆಎಣ್ಣೆಯ ಕ್ಯಾನ್​ ಕಾಣಿಸಬೇಕಿತ್ತು. ಆದರೆ ಅಕ್ಕ ಪಕ್ಕದಲ್ಲಿ ಎಲ್ಲಿಯೂ ಕ್ಯಾನ್​ ಕಾಣಿಸಲಿಲ್ಲ. ಬೆಂಕಿಯಲ್ಲಿಯೇ ಅದು ಉರಿದು ಹೋಗುವ ಛಾನ್ಸ್​ ಕೂಡ ಇರಲಿಲ್ಲ.

    ಆದ್ದರಿಂದ ನಾಪತ್ತೆಯಾಗಿರುವ ಕ್ಯಾನ್​ ಗಮನಿಸಿರುವ ಪೊಲೀಸರು ಇದೊಂದು ಕೊಲೆ ಇರಬಹುದು ಎಂದು ಶಂಕಿಸಿದ್ದಾರೆ.

    ಮಾತ್ರವಲ್ಲದೇ ಘಟನೆ ಸಂಭವಿಸಿರುವ ಸ್ವಲ್ಪ ಮುಂಚೆ ಆಕೆ ತನ್ನ ತಾಯಿಯ ಜತೆ ಮಾತನಾಡಿದ್ದಾರೆ. ಸಂಜೆ 6.49 ಕ್ಕೆ ತನ್ನ ಮಗಳೊಂದಿಗೆ ಮಾತನಾಡಿದ್ದಾಗಿ ಭುವನೇಶ್ವರಿಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಅರ್ಧ ಗಂಟೆಯಲ್ಲಿ ಮನೆಗೆ ತಲುಪುವುದಾಗಿ ಮಗಳು ತಿಳಿಸಿದ್ದಳು. ರಾತ್ರಿ 7.30 ಆದರೂ ಹಿಂದಿರುಗದಿದ್ದಾರೆ ಕರೆ ಮಾಡಿದ್ದರೆ, ಆಕೆಯ ಫೋನ್​ ಸ್ವಿಚ್​ ಆಫ್​ ಆಗಿತ್ತು ಎಂದು ತಾಯಿ ಹೇಳಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

    ಪಕ್ಕದ್ಮನೆ ಆಂಟಿಗೆ ಗಂಡ ಸುಖಕೊಡಲ್ವಂತೆ- ಸದಾ ಪೀಡಿಸುತ್ತಿದ್ದಾಳೆ: ಹೇಗೆ ತಪ್ಪಿಸಿಕೊಳ್ಳಲಿ?

    ಅಜ್ಜ ಕೊಟ್ಟ ಆಸ್ತಿಯನ್ನು ತಾಯಿ ಚಿಕ್ಕ ಮಗಳ ಹೆಸರಿಗೆ ಮಾಡಿದ್ದಾರೆ- ನಮಗೆಲ್ಲಾ ಪಾಲು ಸಿಗಲ್ವಾ?

    ಲವ್​ ಫೇಲ್ಯೂರ್​ಗೆ​ ₹5, ಹೊಸ ಲವ್​ಗೆ ₹10, ಲವರ್​ ಬಿಟ್ಟು ಹೋದ್ರೆ ₹15, ಇಷ್ಟದ ಲವರ್​ಗಾಗಿ​ ₹49

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts