

ಭೋಪಾಲ್: ರಸ್ತೆಯಲ್ಲಿ ಹೋಗುವಾಗ, ವಾಹನ ಚಾಲನೆ ಮಾಡುವಾಗ ಮೊಬೈಲ್‌ಫೋನ್‌ನಲ್ಲಿ ಮಾತನಾಡಬೇಡಿ, ಹೆಡ್‌ಫೋನ್ ಹಾಕಿಕೊಂಡು ರಸ್ತೆಯಲ್ಲಿ ಹೋಗಬೇಡಿ... ಇದು ಪ್ರಾಣಕ್ಕೆ ಅಪಾಯ ಎಂದು ಯಾರು ಎಷ್ಟೇ ಹೇಳಿದರೂ, ಎಷ್ಟೇ ಘೋಷಣೆ ಮಾಡಿದರೂ, ಎಷ್ಟೇ ಬುದ್ಧಿವಾದ ಹೇಳಿದರೂ ನಮಗೇನೂ ಆಗುವುದಿಲ್ಲ ಎಂದು ಇದನ್ನು ಕಿವಿಯ ಮೇಲೆ ಹಾಕಿಕೊಳ್ಳದವರೇ ಹೆಚ್ಚು.
ಮೊಬೈಲ್‌ಫೋನ್‌ನಲ್ಲಿ ಮಾತನಾಡುತ್ತಾ ಹೋಗುವ ಸಮಯದಲ್ಲಿ ಮೈಮೇಲೆ ಎಚ್ಚರಿಕೆಯೇ ಕೆಲವರಿಗೆ ಇರದಿದ್ದರೆ, ಹೆಡ್‌ಪೋನ್‌ನಿಂದಾಗಿ ಅಕ್ಕಪಕ್ಕ ಬರುವ ಗಾಡಿಗಳ ಸದ್ದೂ ಕೇಳಿಸದೇ ಹೋಗುತ್ತದೆ. ಇಂಥ ಅನೇಕ ಸಂದರ್ಭಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವ ಹಲವಾರು ಘಟನೆಗಳು ನಡೆದಿವೆ.
ಅಂಥದ್ದೇ ಒಂದು ಘಟನೆ ಮಧ್ಯಪ್ರದೇಶದ ಹೋಶಂಗಾಬಾದ್ನಲ್ಲಿ ನಡೆದಿದೆ. ಕಿವಿಯಲ್ಲಿ ಹೆಡ್ಪೋನ್ ಹಾಕಿಕೊಂಡು ರೈಲ್ವೆ ಹಳಿ ದಾಟುತ್ತಿದ್ದ ಆರೋಗ್ಯ ಕಾರ್ಯಕರ್ತೆ ಮೇಲೆ ರೈಲ್ವೆ ಹರಿದಿದೆ. ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಿವಿಯಲ್ಲಿ ಹೆಡ್‌ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ರೈಲ್ವೆ ಹಳಿ ದಾಟಲು ಮುಂದಾಗಿದ್ದಾರೆ. ಈ ವೇಳೆ ಸೂಪರ್ ಫಾಸ್ಟ್ ರೈಲು ಬಂದಿದ್ದು ಅವರಿಗೆ ತಿಳಿಯಲ್ಲಿ.
ಸಮೀಪ ಬರುತ್ತಿದ್ದಂತೆಯೇ ರೈಲು ಬರುವುದನ್ನು ನೋಡಿ ಏನು ಮಾಡಬೇಕು ಎಂದು ತಿಳಿಯದೇ ಹಳಿಯ ಮೇಲೆಯೇ ಓಡಿಬಿಟ್ಟಿದ್ದಾರೆ. ರೈಲು ಅವರ ಮೇಲೆಯೇ ಹರಿದಿದೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರಿಗೆ ಇದು ಪಾಠವಾಗಲಿದೆ.