ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡು ಮಗನನ್ನೇ ಮದುವೆಯಾಗಿ ಆತನ ಮಗುವನ್ನು ಹೆತ್ತಳೀ ತಾಯಿ!

mrina1
Published on

ರಷ್ಯಾ: ರಷ್ಯಾದ ಪ್ರಸಿದ್ಧ ಬ್ಲಾಗರ್‌ ಆಗಿರುವ ಮರಿಯಾ ಬಾಲ್ಮಶೇವ್‌ ಎಂಬ ಮಹಿಳೆ ತನ್ನ ಮಲಮಗನನ್ನೇ ಮದುವೆಯಾಗಿ, ಆತನ ಮಗುವಿನ ತಾಯಿಯಾಗಿ ಸುದ್ದಿಯಲ್ಲಿದ್ದಾಳೆ!

ಇಂಥದ್ದೊಂದು ಸುದ್ದಿ ಮಾಡಿರುವ ಮಹಿಳೆ ಎಂದರೆ 35 ವರ್ಷದ ಮರಿನಾ. ಈಕೆ ಅಲ್ಯಾಕ್ಸೆ ಶವ್ರೀನ್‌ ಎಂಬುವವರ ಜತೆ ಮದುವೆಯಾಗಿದ್ದಳು. ಅಲ್ಯಾಕ್ಸೆ ಅವರಿಗೆ ಮೊದಲ ಪತ್ನಿಯಿಂದ ವ್ಲಾದಿಮಿಯರ್‌ ವೋವಾ ಎಂಬ ಮಗ ಇದ್ದ. ಸಂಬಂಧದಲ್ಲಿ ಈ ವ್ಲಾದಿಮಿಯರ್‌ ಮರಿನಾಗೆ ತಾಯಿಯಾಗಬೇಕು.

ಆದರೆ ಮರಿನಾ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡು ಯುವತಿಯಂತೆ ಕಾಣಿಸಿಕೊಂಡು ತನ್ನ 21 ವರ್ಷದ ಮಲಮಗನನ್ನೇ ವರಿಸಿದ್ದಾಳೆ. ಈ ಕುರಿತು ಹೆಮ್ಮೆಯಿಂದ ಈಕೆ ತನ್ನ ಬ್ಲಾಗರ್‌ನಲ್ಲಿ ಬರೆದುಕೊಂಡಿದ್ದಳು. ನಂತರ ತನ್ನ ಮಲಮಗನಿಂದ ಮೊದಲ ಮಗುವನ್ನು ಪಡೆಯುತ್ತಿರುವುದಾಗಿ ಘೋಷಿಸಿಕೊಂಡಿದ್ದಳು. ಇದೀಗ ಈ ಜೋಡಿಗೆ ಮಗಳು ಜನಿಸಿದ್ದಾಳೆ.

ಅಲೆಕ್ಸೆ ಅವರನ್ನು ಮರಿನಾ ಮದುವೆಯಾದಾಗ ವ್ಲಾದಿಮಿಯರ್‌ 11 ವರ್ಷವಾಗಿತ್ತು. ತನ್ನ ಪತಿಯೊಂದಿಗೆ 10 ವರ್ಷ ಸಂಸಾರ ಮಾಡಿದ ಬಳಿಕ ಆತನಿಂದ ದೂರ ಆಗಿರುವ ಮರಿನಾ, ಇದೀಗ ಮಗನ ಜತೆ ಮದುವೆಯಾಗಿ ಮಗುವನ್ನೂ ಪಡೆದಿದ್ದಾಳೆ.

ತಮ್ಮ ಬ್ಲಾಗ್‌ನಲ್ಲಿ ಮಗಳ ಫೋಟೋ ಸಂಪೂರ್ಣವಾಗಿ ಹಾಕದೇ ಮುಖವನ್ನು ಮರೆಮಾಚಿರುವ ಮರಿನಾ, ಈ ಖುಷಿಯನ್ನು ಹಂಚಿಕೊಂಡಿದ್ದಾಳೆ. ಸದ್ಯ ಈಕೆ 50 ಲಕ್ಷದಷ್ಟು ಫಾಲೋವರ್‌ಗಳನ್ನು ಹೊಂದಿದ್ದಾಳೆ. ವಿಶ್ವದ ಅತ್ಯಂತ ಆಕರ್ಷಕ ನೀಲಿ ಕಣ್ಣುಗಳು' ಎಂಬ ಶೀರ್ಷಿಕೆ ಕೊಟ್ಟು ಮಗುವಿನ ಫೋಟೋ ಹಾಕಿದ್ದಾಳೆ.

ಈಕೆಯ ಮೊದಲ ಪತಿಗೆ 45 ವರ್ಷ ವಯಸ್ಸಾಗಿದ್ದು, ಅವರು ಐದು ದತ್ತು ಮಕ್ಕಳನ್ನು ನೋಡಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net