More

    13 ಸಾವಿರ ಕಿ.ಮೀ ಹಾರಿಬಂದ ‘ಜೋ ಬೈಡೆನ್‌‘ ಪಾರಿವಾಳಕ್ಕೆ ಮರಣದಂಡನೆ ಭೀತಿ!

    ವಾಷಿಂಗ್ಟನ್‌: ಅಮೆರಿಕದಿಂದ ಆಸ್ಟ್ರೇಲಿಯಾಕ್ಕೆ ಪಾರಿವಾಳವೊಂದು ಹಾರಿಬಂದಿದ್ದು, ಅದಕ್ಕೀಗ ಮರಣದಂಡನೆ ವಿಧಿಸಲಾಗಿದೆ. ಅರ್ಥಾತ್‌ ಅದನ್ನು ಸಾಯಿಸುವಂತೆ ಆದೇಶ ಹೊರಡಿಸಲು ಸಿದ್ಧತೆ ನಡೆಸಲಾಗಿದೆ.

    ಸುಮಾರು 13 ಸಾವಿರ ಕಿ.ಮೀ ದೂರವನ್ನು ಕ್ರಮಿಸಿ ಈ ಪಾರಿವಾಳ ಬಂದಿದೆ. ಪೆಸಿಫಿಕ್ ಸಾಗರ ದಾಟಿ ಅಮೆರಿಕದಿಂದ ಆಸ್ಟ್ರೇಲಿಯಾಗೆ ಬಂದಿರುವ ರೇಸಿಂಗ್ ಪಾರಿವಾಳ ಇದಾಗಿದೆ. ಇದರ ಪಾದಕ್ಕೆ ಕಟ್ಟಲಾಗಿರುವ ನೀಲಿಬಣ್ಣದ ಬ್ಯಾಂಡ್‌ನಿಂದ ಇದು ಆಸ್ಟ್ರೇಲಿಯಾದಿಂದ ಬಂದಿರುವುದಾಗಿ ವರದಿಯಾಗಿದೆ.

    ಇದಕ್ಕೆ ಅಮೆರಿಕದ ನಿಯೋಜಿತ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ಹೆಸರು ಇಡಲಾಗಿದೆ. ಇಷ್ಟು ದೂರದಿಂದ ಹಾರಿಬಂದಿರುವ ಈ ಪಾರಿವಾಳವನ್ನು ಹತ್ಯೆ ಮಾಡಲು ಆದೇಶ ಹೊರಡಿಸಿರುವ ಕಾರಣ ಎಂದರೆ ಹಕ್ಕಿಜ್ವರದ ಭೀತಿ. ಪಾರಿವಾಳವನ್ನು ಕ್ವಾರಂಟೈನ್ ಮಾಡಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಇದನ್ನು ಸಾಯಿಸಲು ಆದೇಶಿಸಲು ಚಿಂತನೆ ನಡೆದಿದೆ.

    ಅಮೆರಿಕದ ಒರೆಗಾನ್ ರಾಜ್ಯದಿಂದ ಅಕ್ಟೋಬರ್ 29ರಂದು ಈ ಪಾರಿವಾಳ ನಾಪತ್ತೆಯಾಗಿತ್ತು. ಡಿಸೆಂಬರ್ 26ರಂದು ಅದು ಮೆಲ್ಬೋರ್ನ್‌ನಲ್ಲಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ್ದ ಕೆವಿನ್ ಸೆಲ್ಲಿ ಎಂಬವವರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಹಕ್ಕಿಗಳ ಸಂರಕ್ಷಣೆ ಕುರಿತು ಕಠಿಣ ಕಾನೂನು ಜಾರಿಯಲ್ಲಿದೆ. ಈ ಪಾರಿವಾಳ ಹಕ್ಕಿ ಜ್ವರ ಬಂದಿದ್ದರೆ, ಅದರಿಂದ ಇಡೀ ದೇಶಕ್ಕೆ ಅಪಾಯ ಎನ್ನುವುದು ಆಸ್ಟ್ರೇಲಿಯಾದ ಪ್ರಾಣಿ ಸಂರಕ್ಷಣಾ ಇಲಾಖೆಯ ಮಾತು.

    ಪಾರಿವಾಳದಿಂದ ಆಸ್ಟ್ರೇಲಿಯಾದ ಪ್ರಾಣಿ ಸಂಪತ್ತು ಅಪಾಯಕ್ಕೆ ಸಿಲುಕಲಿದೆ. ಈ ಪಕ್ಷಿಯನ್ನು ಕೊಲ್ಲುವುದೇ ಉತ್ತಮ ಎಂಬ ತೀರ್ಮಾನಕ್ಕೆ ಅಧಿಕಾರಿಗಳು ಬಂದಿದ್ದಾರೆ ಎಂದು ವರದಿಯಾಗಿದೆ.

    ಈ ಪಾರಿವಾಳ ಕಾರ್ಗೋ ಶಿಪ್​ನಲ್ಲಿ ಪೆಸಿಫಿಕ್ ಸಾಗರ ದಾಟಿ ಆಸ್ಟ್ರೇಲಿಯಾಕ್ಕೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
    ಚೀನಾದ ರೇಸಿಂಗ್ ಪಾರಿವಾಳಗಳು ಆಸ್ಟ್ರೇಲಿಯಾಗೆ ವೆಸ್ಟ್ ಕೋಸ್ಟ್ ಕಾರ್ಗೋ ಶಿಪ್ ಗಳಲ್ಲಿ ಬಂದಿರುವ ಪ್ರಕರಣಗಳನ್ನು ಕೇಳಿದ್ದೇನೆ, 1931 ರಲ್ಲಿ ಪಾರಿವಾಳವೊಂದು ಫ್ರಾನ್ಸ್ ನಿಂದ ಪ್ರಾರಂಭಿಸಿ ವಿಯೆಟ್ನಾಮ್ ವರೆಗೂ ಪ್ರಯಾಣಿಸಿದ್ದು ಅತಿ ಹೆಚ್ಚಿನ ದೂರ ಪ್ರಯಾಣಿಸಿರುವ ದಾಖಲೆಯಾಗಿದೆ ಎಂದು ಆಸ್ಟ್ರೇಲಿಯಾದ ರಾಷ್ಟ್ರೀಯ ಪಾರಿವಾಳ ಒಕ್ಕೂಟದ ಕಾರ್ಯದರ್ಶಿ ಬ್ರಾಡ್ ಟರ್ನರ್ ಮಾಹಿತಿ ನೀಡಿದ್ದಾರೆ. ಆದರೆ ಇದೀಗ ಹಕ್ಕಿಜ್ವರದ ಭೀತಿಯಿಂದ ಇದನ್ನು ಸಾಯಿಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

    ಆದರೆ ಈ ಬ್ಯಾಂಡ್‌ ನಕಲಿಯಾಗಿದ್ದು, ಇದನ್ನು ಹತ್ಯೆ ಮಾಡುವ ಅಗತ್ಯವಿಲ್ಲ ಎನ್ನುವ ವಾದವೂ ಕೇಳಿಬರುತ್ತಿದೆ. ಈ ಬಗ್ಗೆ ಇನ್ನಷ್ಟೇ ತೀರ್ಮಾನವಾಗಬೇಕಿದೆ.

    ದೈಹಿಕವಾಗಿ ಆರೋಗ್ಯವಾಗಿದ್ದರೂ ವೀರ್ಯಾಣು ನಿಲ್‌ ಎಂದು ಬಂದಿದೆ- ನನಗೆ ಮಕ್ಕಳಾಗುವುದಿಲ್ಲವೆ?

    ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಮಾಡಿದ್ದಕ್ಕೆ ಪ್ರಶಸ್ತಿ ತಿರಸ್ಕರಿಸಿದ ಹಿರಿಯ ಕವಿ

    ಪತ್ನಿ ಹಲ್ಲೆ ಮಾಡ್ತಿದ್ದಾಳೆ, ಮೂರು ಮದ್ವೆಯಾಗಿದ್ದಾಳೆ, ಹಣಕ್ಕೆ ಡಿಮಾಂಡ್‌ ಮಾಡ್ತಿದ್ದಾಳೆ: ಬೆಂಗಳೂರು ಪತಿಯಿಂದ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts