ಪತ್ನಿ ಹಲ್ಲೆ ಮಾಡ್ತಿದ್ದಾಳೆ, ಮೂರು ಮದ್ವೆಯಾಗಿದ್ದಾಳೆ, ಹಣಕ್ಕೆ ಡಿಮಾಂಡ್‌ ಮಾಡ್ತಿದ್ದಾಳೆ: ಬೆಂಗಳೂರು ಪತಿಯಿಂದ ದೂರು

beating
Published on

ಬೆಂಗಳೂರು: ಗಂಡ ಹಾಗೂ ಅತ್ತೆ ಮನೆಯವರು ನೀಡುವ ಕಿರುಕುಳದಿಂದಾಗಿ ಅದೆಷ್ಟೋ ಮಹಿಳೆಯರು ಅತ್ತೆ ಮನೆಯವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿರುವುದನ್ನು ಕೇಳಿದ್ದೇವೆ. ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ಪತ್ನಿ ವಿರುದ್ಧ ಪತಿಯೇ ದೂರು ದಾಖಲು ಮಾಡಿದ್ದಾರೆ.

ಇದು ನಡೆದಿರುವುದು ಬೆಂಗಳೂರಿನ ಬಾಣಸವಾಡಿಯಲ್ಲಿ. ಅಮಿತ್‌ ಬೆಹೇತಿ ಎನ್ನುವ ವ್ಯಕ್ತಿಯೊಬ್ಬರು ಪತ್ನ ಇಶಾ ಅವರ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ನನ್ನ ವಿವಾಹ ಇಶಾಳೊಂದಿಗೆ ಎರಡೂವರೆ ವರ್ಷಗಳ ಹಿಂದೆ ಅಂದರೆ 2018ರಲ್ಲಿ ನಡೆದಿದೆ. ಮದುವೆಯ ಆರಂಭದ ದಿನಗಳಿಂದಲೇ ಆಕೆ ಸಿಕ್ಕಾಪಟ್ಟೆ ಹಣದ ಬೇಡಿಕೆ ಶುರು ಮಾಡಿದ್ದಳು. ಮಾತ್ರವಲ್ಲದೇ ಚಿನ್ನಾಭರಣ ನೀಡುವಂತೆಯೂ ಪೀಡಿಸುತ್ತಿದ್ದಳು. ಕೋಟಿ ಕೋಟಿ ರೂಪಾಯಿ ಬೇಡಿಕೆಯನ್ನೂ ಇಡುತ್ತಿದ್ದಾಳೆ. ಇಷ್ಟೆಲ್ಲಾ ಹಣ ನೀಡಲು ನಾನು ಒಪ್ಪದಿದ್ದ ಕಾರಣ, ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾಳೆ ಎಂದು ಅಮಿತ್‌ ದೂರಿದ್ದಾರೆ.

ಇತ್ತೀಚೆಗೆ ಪದೇ ಪದೇ ಒಂದು ಕೋಟಿ ರೂಪಾಯಿ ನೀಡುವಂತೆ ಪತ್ನಿ ಹಿಂಸಿಸುತ್ತಿದ್ದಾಳೆ. ಒಂದು ವೇಳೆ ನಾನು ಹಣ ಕೊಡದೇ ಹೋದರೆ ವರದಕ್ಷಿಣೆ ಕಿರುಕುಳ ಕೇಸ್‌ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ ಎಂದಿರುವ ಅಮಿತ್‌, ಆಕೆ ಏನಾದರೂ ಕೇಸ್‌ ಹಾಕಿ ತಮಗೆ ತೊಂದರೆ ಬರಬಹುದು ಎನ್ನುವ ಉದ್ದೇಶದಿಂದ ಈಗ ಪತ್ನಿಯ ವಿರುದ್ಧವೇ ದೂರು ದಾಖಲು ಮಾಡಿದ್ದಾರೆ. ಇಷ್ಟೇ ಅಲ್ಲ, ಇದಾಗಲೇ ತಮ್ಮ ಪತ್ನಿ ಮೂರು ಮದುವೆಯಾಗಿದ್ದು, ಎಲ್ಲರನ್ನೂ ವಂಚಿಸಿದ್ದಾಳೆ ಎಂದೂ ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net