More

    ಇಲ್ಲೊಬ್ಬಳು ಸುಂದರಿ ಗಂಡನ ವಿರುದ್ಧ ಹೇಳಿದ್ದನ್ನೇ ಹೇಳ್ತಾ ಇರ್ತಾಳೆ- ಅವಳನ್ನು ನಿಭಾಯಿಸೋದು ಹೇಗೆ?

    ಇಲ್ಲೊಬ್ಬಳು ಸುಂದರಿ ಗಂಡನ ವಿರುದ್ಧ ಹೇಳಿದ್ದನ್ನೇ ಹೇಳ್ತಾ ಇರ್ತಾಳೆ- ಅವಳನ್ನು ನಿಭಾಯಿಸೋದು ಹೇಗೆ?ನಾನೊಬ್ಬ ಆಪ್ತಸಮಾಲೋಚಕಳು. ಬೆಂಗಳೂರಿನ ಆಪ್ತ ಸಲಹಾ ಕೇಂದ್ರದಲ್ಲಿ ಸೇವೆಸಲ್ಲಿಸುತ್ತಿದ್ದೇನೆ. ನಿಮ್ಮ ಕಾಲಂ ನನಗೆ ಎಷ್ಟೋ ಬಾರಿ ದಾರಿದೀಪವಾಗಿದೆ. ಈಗ ನಮ್ಮ ಸೆಂಟರಿಗೆ ಬರುವ ಮಹಿಳೆಯೊಬ್ಬಳ ಸಮಸ್ಯೆ ನಮ್ಮ ಇಡೀ ಕೇಂದ್ರಕ್ಕೇ ಸಮಸ್ಯೆಯಾಗಿದೆ.

    ಆಕೆ 34 ವರ್ಷದ ಮಹಿಳೆ. ಸಣ್ಣವಯಸ್ಸಿನಲ್ಲಿಯೆ ಮದುವೆಯಾಗಿ ಒಬ್ಬಳು ಮಗಳಿದ್ದಾಳೆ. ಅವಳು ಹೇಳುವುದೇನೆಂದರೆ…`ನನಗೆ ಬುದ್ಧಿಬರುವ ಮೊದಲೇ ತಂದೆತಾಯಿ ಮದುವೆ ಮಾಡಿದರು. ಗಂಡನ ಜತೆ ಹೊಂದಾಣಿಕೆಯೇ ಇಲ್ಲ. ಹೆಚ್ಚಿನ ವಿದ್ಯೆಯೂ ಇಲ್ಲ ಮತ್ತು ತೌರಿನವರು ಬಡವರಾದ ಕಾರಣ ಗಂಡನಜತೆಗೆ ಇರಬೇಕಾಗಿದೆ. ನನ್ನ ನೆಮ್ಮದಿ ಹಾಳಾಗಿದೆ’ ಎನ್ನುತ್ತಾಳೆ. ಅವಳು ತನ್ನ ವಯಸ್ಸಿಗೆ ಮೀರಿದ ಎತ್ತರ ಮತ್ತು ಗಾತ್ರವಿದ್ದಾಳೆ. ಆದರೂ ನೋಡಿದ ಕೂಡಲೇ ಮತ್ತೊಮ್ಮೆ ತಿರುಗಿನೋಡುವಷ್ಟು `ಸುಂದರಿ’.

    ಅವಳ ಗಂಡ ಇಬ್ಬರೂ ಸಣ್ಣ ಆಗೋಣ ಎಂದು ನಮ್ಮ ಸೆಂಟರ್ ಹತ್ತಿರವಿರುವ ಯೋಗಕೇಂದ್ರಕ್ಕೆ ವಾರದಲ್ಲಿ ಎರಡು ದಿನ ಕರೆದುಕೊಂಡು ಬರುತ್ತಾನೆ. ಗಂಡಸರಿಗೆ ಮೊದಲಮಹಡಿಯಲ್ಲೂ, ಹೆಂಗಸರಿಗೆ ಕೆಳಗಿನ ಹಜಾರದಲ್ಲೂ ಯೋಗ ಹೇಳಿಕೊಡುತ್ತಾರಂತೆ. ಗಂಡ ಮಹಡಿಗೆ ಹೋದ ತಕ್ಷಣ ಈ ಮಹಾತಾಯಿ ನಮ್ಮ ಸೆಂಟರ್‌ನಲ್ಲಿ ಪ್ರತ್ಯಕ್ಷಳಾಗುತ್ತಾಳೆ. ಸುಮಾರು ಆರುತಿಂಗಳಿನಿಂದ ಹೀಗೆ ಬರುತ್ತಿದ್ದಾಳೆ. ನಮ್ಮ ಸೆಂಟರ್ ನಲ್ಲಿರುವ ಎಲ್ಲ ಆಪ್ತ ಸಲಹಾಗಾರರೂ ಇವಳ ಕಥೆ ಕೇಳಿದ್ದಾಯಿತು.  ಹಲವು ಸಲಹೆಗಳನ್ನು ನೀಡಿದ್ದಾಯಿತು. ಇವಳು ಯಾವೊಂದನ್ನು ಪರಿಪಾಲಿಸುವುದಿಲ್ಲ.

    ಪ್ರತಿಯೊಬ್ಬರ ಮುಂದು ಹೇಳಿದ್ದನ್ನೇ ಹೇಳುವ ಚಟ. `ಮನೋವೈದ್ಯರನ್ನು ಭೇಟಿಮಾಡು’ ಎಂದರೆ ಅದನ್ನು ಮಾಡುವುದಿಲ್ಲ. `ನಿನ್ನ ಗಂಡನನ್ನು ಕರೆದುಕೊಂಡು ಬಾ’ ಎಂದರೆ ಏನೇನೋ ಸಬೂಬು ಹೇಳುತ್ತಾಳೆ. ಈ ಕೇಸನ್ನು ಹೇಗೆ ನಿಭಾಯಿಸುವುದು ಮೇಡಂ?

    ಉತ್ತರ: ಒಮ್ಮೊಮ್ಮೆ ಹೀಗಾಗುತ್ತದೆ. ನಾನು ಹದಿನೈದು ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತ ಇಂಥ ಜಿಗುಟು ಜನರ ಹತ್ತಿರ ಸಿಕ್ಕಿಕೊಂಡು ನರಳಿದ್ದೇನೆ. ಏನೋ ಸಣ್ಣ ಸಮಾಜಸೇವೆ ಮಾಡೋಣ ಎಂದು ಹೊರಟು ನಾವೇ ಸಮಸ್ಯೆಯ ಸುಳಿಗೆ ಸಿಕ್ಕಿಕೊಳ್ಳುವ
    ಪಡಿಪಾಟಿಲು ನಿಜಕ್ಕೂ ಭಯಂಕರವೇ. ಆಕೆ, ಯೋಗ ಎನ್ನುವ ಕತ್ತಿಯಿಂದ ತಪ್ಪಿಸಿಕೊಳ್ಳಲು ನಿಮ್ಮ ಸೆಂಟರ್‌ಅನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾಳೆ.

    ನೀವು ಈ ಕೆಳಕಂಡ ಯಾವುದಾದರೂ ಟೆಕ್ನಿಕ್ ಬಳಸಿ ಅವಳಿಗೆ ಫ್ಯಾಮಿಲಿ ಕೌನ್ಸಿಲಿಂಗ್ ಮಾಡಲು ಸಾಧ್ಯವೇ ಪ್ರಯತ್ನಿಸಿ.
    . ನಿಮ್ಮಲ್ಲಿ ಯಾರಾದರೂ ಒಬ್ಬರು ಮುತುವರ್ಜಿವಹಿಸಿ, ನಿಮ್ಮ ಕೇಂದ್ರದ ಯೋಗಕೇಂದ್ರಕ್ಕೆ ಹೋಗಿ ಅವಳ ಗಂಡನಿಗೆ `ಈಕೆ ಯೋಗಾಭ್ಯಾಸ ಮಾಡುವ ಸಮಯದಲ್ಲಿ ನಮ್ಮ ಕೇಂದ್ರಕ್ಕೆ ಬರುತ್ತಾಳೆ’ ಎನ್ನುವ ಸತ್ಯ ತಿಳಿಯುವಂತೆ ಮಾಡುವುದು.
    .ಆಕೆಯ ಮನೆಯ ಲ್ಯಾಂಡ್‌ಫೋನ್‌ ನಂಬರ್ ಪಡೆದು ನಿಮ್ಮಲ್ಲಿಯ ಪುರುಷ ಸಲಹೆಗಾರರು ಆಕೆಯ ಗಂಡನ ಜತೆಯಲ್ಲಿ ಆಕೆಯ ಸಮಸ್ಯೆಯ ಬಗ್ಗೆ ಮಾತನಾಡುವುದು ಮತ್ತು ಇಬ್ಬರನ್ನೂ ನಿಮ್ಮ ಕೇಂದ್ರಕ್ಕೆ ಬರುವಂತೆ ಮಾಡಿ ಜತೆಯಲ್ಲಿ ಕೂಡಿಸಿಕೊಂಡು ಕೌನ್ಸಿಲಿಂಗ್ ಮಾಡುವುದು.

    .ನಾವು ಆರುತಿಂಗಳಾದ ಮೇಲೆ ಒಬ್ಬರಿಗೆ ಹೀಗೆ ಕೌನ್ಸಿಲಿಂಗ್ ಮಾಡಲು ಸಾಧ್ಯವಿಲ್ಲ. ನಿಮಗೆ ಕೌನ್ಸಿಲಿಂಗ್ ಬೇಕೇ ಹಾಗಿದ್ದರೆ ಒಂದು ಸಿಟ್ಟಿಂಗ್‌ಗೆ ಸಾವಿರರೂಪಾಯಿ ಕೊಡಿ. ಅಥವಾ ನಿಮ್ಮ ಗಂಡನನ್ನು ಕರೆತನ್ನಿ ಎನ್ನುವ ಕರಾರನ್ನು ಕಡ್ಡಾಯವಾಗಿ ಹಾಕುವುದು. .ಇವು ಯಾವುವೂ ಪರಿಣಾಮ ಬೀರದಿದ್ದಲ್ಲಿ ನಿಮ್ಮ ಕೇಂದ್ರದ ಎಲ್ಲಾ ಕೌನ್ಸಿಲ್‌ರಗಳು ಆಕೆ ಬಂದಾಗ ನಮಗೀಗ ಸಮಯವಿಲ್ಲ ಬೇರೆ ಕೌನ್ಸಿಲರ್‌ಗಳು (ಆಪ್ತಸಲಹೆ ಕೇಳಲು ಬರುವವರನ್ನು ರೋಗಿಗಳು ಎನ್ನುವುದಿಲ್ಲ, ಅವರು ಕ್ಲೈಂಟ್‍ಗಳು ಅಥವಾ ಕೌನ್ಸಿಲಿಗಳು)  ಇದ್ದರೆ ಹೋಗಿ ಎಂದು ಹೇಳಿ ಆಕೆಯೊಂದಿಗೆ ಮಾತನಾಡಲು ನಿರಾಕರಿಸುವುದು.

    ನಾಲ್ಕನೆಯದು ಸ್ವಲ್ಪ ಕ್ರೌರ್ಯವೆನಿಸಬಹುದು. ಆದರೆ ಆಕೆ ಯೋಗಮಾಡದ ಸೋಮಾರಿತನಕ್ಕೆ ನಿಮ್ಮನ್ನು ನಿಮ್ಮ ಕೇಂದ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾಳೆ. ಅದನ್ನು ಅವಳಿಗೆ ಮನಗಾಣುವಂತೆ ಮಾಡಲು ಇದು ಅಗತ್ಯವಷ್ಟೇ. ಆಕೆಗೆ ನಿಜವಾಗಿ ಬೇಕಾಗಿರುವದು ಫ್ಯಾಮಿಲಿ ಕೌನ್ಸಿಲಿಂಗ್, ಈಕೆಯ ನಿಜವಾದ ಸಮಸ್ಯೆ ಅರ್ಥವಾಗಬೇಕಾದರೆ ಅವಳ ಗಂಡನನ್ನು ಮಾತಾಡಿಸುವುದು ತುಂಬಾ ಅಗತ್ಯವಿದೆ.

    ನಿಮ್ಮ ಪ್ರಶ್ನೆ ಓದಿ ನಗ್ಬೇಕೋ, ಅಳ್ಬೆಕೋ ಗೊತ್ತಾಗ್ತಿಲ್ವಲ್ಲಾ ಸ್ವಾಮಿ… ಯಾವ ಕಾಲದಲ್ಲಿದ್ದೀರಿ ನೀವು?

    ಮೊದಲ ರಾತ್ರಿಯೇ ನೀವು ನನಗೆ ಬೇಡ ಎಂದುಬಿಟ್ಟಳು- ನರಕವಾಗಿರುವ ಬದುಕನ್ನು ಹೇಗೆ ಸಹಿಸಲಿ?

    ನಾನು ತುಂಬಾ ಒಳ್ಳೆಯವಳು ಮೇಡಂ… ಆದ್ರೆ ಎಲ್ಲಾ ತಪ್ಪಾಗಿ ಭಾವಿಸ್ತಾರೆ, ಏನ್​ ಮಾಡ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts