More

    ಲಕ್ಷಾಂತರ ರೂ. ವಂಚಿಸಿದ ಮಹಿಳೆ ಬಂಧನ

    ಕಾಸರಗೋಡು: ಆನ್‌ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ತೃಕರಿಪುರದ ಕೈಕೊಟ್ಟುಕಡವು ನಿವಾಸಿ ಹರಹತ್ ಶೆರೀನ್ (31) ಎಂಬಾಕೆಯನ್ನು ಆಲಪ್ಪುಳದ ಚೇರ್ತಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಷೇರುಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿ ಲಾಭದ ಆಮೀಷ ತೋರಿಸಿ ಆಲಪ್ಪುಳದ ಸಿರಿನ್ ಚಂದ್ರನ್ ಎಂಬುವರಿಂದ 17ಲಕ್ಷ ರೂ. ಪಡೆದು ವಂಚನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಕೆಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದಲ್ಲಿ ಗುಜರಾತಿಗಳೂ ಶಾಮೀಲಾಗಿರುವ ಕುರಿತು ಬೆಳಕಿಗೆ ಬಂದಿದ್ದು, ವಂಚನೆ ರೂಪದಲ್ಲಿ ಪಡೆದ ಮೊತ್ತವನ್ನು ಶೆರೀನ್ ಸಹಿತ ಆರು ಮಂದಿ ಹಂಚಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts