ಮನೆಗೆ ನುಗ್ಗಿ ಚಿನ್ನ ಕಳ್ಳತನ

udp-9-theft
Published on

ಕಾಸರಗೋಡು: ನೀಲೇಶ್ವರದಲ್ಲಿ ಹಾಡಹಗಲು ಮನೆಯಿಂದ ಐದು ಪವನು ಚಿನ್ನಾಭರಣ ಕಳವುಗೈದ ಆರೋಪಿಯನ್ನು ಪೊಲೀಸರು ತಾಸುಗಳೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಞಂಗಾಡು ರೈಲ್ವೆನಿಲ್ದಾಣ ಸನಿಹದ ಗಾರ್ಡರ್ ವಳಪ್ಪು ನಿವಾಸಿ ಪಿ.ಎಚ್.ಆಸಿಫ್ ಬಂಧಿತ.

ನೀಲೇಶ್ವರ ಪಳ್ಳಿಕೆರೆ ಸೈಂಟ್ ಆನ್ಸ್ ಶಾಲೆ ಸನಿಹದ ನಿವಾಸಿ, ವ್ಯಾಪಾರಿ ಸುಕುಮಾರನ್ ಎಂಬುವರ ಮನೆಯಿಂದ ಕಳವು ನಡೆದಿದೆ. ಸುಕುಮಾರನ್ ಅವರ ಪತ್ನಿ ನೆರೆಮನೆ ನಿವಾಸಿ ಮಹಿಳೆಯೊಂದಿಗೆ ಮಾತನಾಡುತ್ತಿದ್ದಂತೆ ಮನೆಗೆ ನುಗ್ಗಿ ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದನು. ಮಹಿಳೆ ಮನೆಗೆ ವಾಪಸಾಗುತ್ತಿದ್ದಂತೆ ಸಾಮಗ್ರಿ ಅಸ್ತವ್ಯಸ್ತವಾಗಿರುವುದನ್ನು ಕಂಡು ಸಂಶಯದಿಂದ ನೋಡಿದಾಗ ಚಿನ್ನ ನಾಪತ್ತೆಯಾಗಿತ್ತು. ಈ ಬಗ್ಗೆ ತಕ್ಷಣ ನೀಲೇಶ್ವರ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net