ಆನೆ ದಾಳಿ, ಕೃಷಿ ನಾಶ

elephant
Published on

ಸುಳ್ಯ: ಮಂಡೆಕೋಲಿನಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು ಬುಧವಾರ ರಾತ್ರಿ ಪೆರ್ದೋಡಿ, ಮಿತ್ತಮೂಲೆ, ಹೊಸೊಕ್ಲು ಭಾಗದ ಕೃಷಿಕರ ತೋಟಕ್ಕೆ ನುಗ್ಗಿ ಕೃಷಿ ಬೆಳೆಗಳನ್ನು ಹಾನಿಗೈದಿವೆ.

ಕಾಡಾನೆಗಳು ಮೂರ್ನಾಲ್ಕು ಹಿಂಡುಗಳಾಗಿ ಚದುರಿ ಹೋಗುತ್ತಿದ್ದು ಒಂದು ಹಿಂಡು ಗ್ರಾಮದ ಎರ್ಕಲ್ಪಾಡಿ ಸುಬ್ರಹ್ಮಣ್ಯ ಭಟ್ ಅವರ ತೋಟಕ್ಕೆ ನುಗ್ಗಿದರೆ ಮತ್ತೊಂದು ಗುಂಪು ಪೆರ್ದೋಡಿ, ಮಿತ್ತಮೂಲೆ, ಹೊಸೊಕ್ಲು ಭಾಗದ ತೋಟಗಳಿಗೆ ನುಗ್ಗಿ ಬಾಳೆ, ಅಡಕೆ ಹಾಗೂ ತೆಂಗಿನ ಮರಗಳನ್ನು ಪುಡಿಗೈದು ನಷ್ಟ ಉಂಟುಮಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net