ಕರೊನಾ: ಬೆಂಗಳೂರು ಫಸ್ಟ್‌, ಕೊಡಗು ಲಾಸ್ಟ್‌- ನಿಮ್ಮ ಜಿಲ್ಲೆಯ ಮಾಹಿತಿ ನೋಡಿ...

Coronavirsu
Published on

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಒಟ್ಟೂ ಹೊಸದಾಗಿ ಸೋಂಕಿತರಾದವರ ಸಂಖ್ಯೆ 8161. ಈ ಮೂಲಕ ಮೊದಲ ದಿನದಿಂದ ಇಲ್ಲಿಯವರೆಗೆ ಕರೊನಾ ಸೋಂಕು ಪೀಡಿತರಾಗಿರುವವರ ಸಂಖ್ಯೆ 2 ಲಕ್ಷದ 91 ಸಾವಿರದ 826.

ಈ ಪೈಕಿ ಸದ್ಯ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 82 ಸಾವಿರದ 410. ಇವರಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 751 ಮಂದಿ.

ನಿನ್ನೆ ಸಂಜೆ 5 ಗಂಟೆಯಿಂದ ಇಲ್ಲಿಯವರೆಗೆ ಕರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿರುವವರ ಸಂಖ್ಯೆ 6814ಕ್ಕೆ ಏರಿದೆ. ಈ ಮೂಲಕ ಇಲ್ಲಿಯವರೆಗೆ ಆಸ್ಪತ್ರೆಯಿಂದ ಒಟ್ಟಾರೆಯಾಗಿ ಬಿಡುಗಡೆಯಾದವರು 2 ಲಕ್ಷ ನಾಲ್ಕು ಸಾವಿರದ 439.

ಕಳೆದ 24 ಗಂಟೆಗಳಲ್ಲಿ ಕರೊನಾಕ್ಕೆ 148 ಮಂದಿ ಬಲಿಯಾಗಿದ್ದು, ಇಲ್ಲಿಯವರೆಗೆ ಕರೊನಾ ರಾಜ್ಯದಲ್ಲಿ ಈ ಸೋಂಕು 4958 ಮಂದಿಯನ್ನು ಬಲಿ ಪಡೆದಂತಾಗಿದೆ.

ಇನ್ನು ಭಾರತದ ವಿಷಯಕ್ಕೆ ಬರುವುದಾದರೆ ಇಲ್ಲಿಯವರೆಗೆ 3.17 ದಶಲಕ್ಷ ಮಂದಿ ಕರೊನಾ ಸೋಂಕಿಗೆ ಗುರಿಯಾಗಿದ್ದರೆ, 2.4 ದಶಲಕ್ಷ ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮಹಾಮಾರಿಗೆ ಭಾರತದಲ್ಲಿ ಇದುವರೆಗೆ 58,390 ಮಂದಿ ಬಲಿಯಾಗಿದ್ದಾರೆ.


ರಾಜ್ಯದ ಸಂಪೂರ್ಣ ವಿವರಗಳ ಪಟ್ಟಿ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net