ಹೋಟೆಲ್‌ನಲ್ಲಿ ರಾತ್ರಿ ಕಳೆದ ಪ್ರೇಮಿಗಳು ಮಾರನೆಯ ದಿನ ಶವವಾದರು!

suicide
Published on

ಲಖನೌ: ಹೋಟೆಲ್‌ನಲ್ಲಿ ರೂಂ ಬುಕ್‌ ಮಾಡಿದ ಜೋಡಿಯೊಂದು ಮಾರನೆಯ ದಿನ ಶವವಾಗಿರುವ ಘಟನೆ ಉತ್ತರ ಪ್ರದೇಶ ಲಖನೌನಲ್ಲಿ ನಡೆದಿದೆ.

ರಾಹುಲ್‌ ಮತ್ತು ನ್ಯಾನ್ಸಿ ಜೋಡಿ ಆತ್ಮಹತ್ಯೆ ಮಾಡಿಕೊಂಡವರು. ನಾಲ್ಕು ವರ್ಷಗಳಿಂದ ಸ್ನೇಹಿತರಾಗಿದ್ದ ಈ ಇಬ್ಬರೂ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೋಟೆಲ್‍ನ ಸಿಬ್ಬಂದಿ ರೂಮಿಗೆ ಹೋಗಿ ನೋಡಿದಾಗ ಜೋಡಿಯ ಮೃತದೇಹ ಪತ್ತೆಯಾಗಿದೆ.ಹಾಸಿಗೆಯ ಮೇಲೆ ನ್ಯಾನ್ಸಿಯ ಮೃತದೇಹ ಪತ್ತೆಯಾಗಿದ್ದು, ರಾಹುಲ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಅವರು ನೀಡಿರುವ ಮಾಹಿತಿಯನ್ನು ಆಧರಿಸಿ ಮನೆಯವರಿಗೆ ಕರೆ ಮಾಡಿರುವ ಹೋಟೆಲ್‌ ಸಿಬ್ಬಂದಿ ಘಟನೆಯ ಕುರಿತು ವಿವರಿಸಿದ್ದಾರೆ. ಆಸ್ಪತ್ರೆಗೆ ದೌಡಾಯಿಸಿದ ನ್ಯಾನ್ಸಿ ತಂದೆ ಮೃತ ರಾಹುಲ್ ನಾನ್ಸಿಗೆ ಆಮಿಷವೊಡ್ಡಿ ಕರೆದುಕೊಂಡು ಹೋಗಿದ್ದ ಎಂದು ದೂರಿದ್ದಾರೆ. ಆದರೆ ಸಾವಿಗೆ ನಿಖರ ಕಾರಣವಿನ್ನೂ ತಿಳಿದುಬಂದಿಲ್ಲ.

ಘಟನೆ ಸ್ಥಳದಲ್ಲಿ ಯಾವುದೇ ಡೆತ್‍ನೋಟ್ ಪತ್ತೆಯಾಗಿಲ್ಲ. ನ್ಯಾನ್ಸಿಯ ಕುಟುಂಬ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಎಸಿಪಿ ದೀಪಕ್ ಕುಮಾರ್ ಹೇಳಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟಣಾ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ಕರೆಯಲಾಗಿದೆ ಎಂದು ಎಸಿಪಿ ತಿಳಿಸಿದ್ದಾರೆ.

ನಾವು ಎರಡು ಕುಟುಂಬದವರನ್ನು ಮತ್ತು ಹೋಟೆಲ್ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದೇವೆ. ಕಳೆದ ನಾಲ್ಕು ವರ್ಷಗಳಿಂದ ನ್ಯಾನ್ಸಿ ಮತ್ತು ರಾಹುಲ್ ಪರಸ್ಪರ ಪರಿಚಯವಿದ್ದರು. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇನೆ. ಆದರೆ ಇಬ್ಬರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net