

ಬೆಂಗಳೂರು: ಇದೀಗ 11 ಗಂಟೆಗೆ ಸಂಪುಟ ಸಭೆ ಶುರುವಾಗಲಿದ್ದು ಗ್ಯಾರಂಟಿ ಯೋಜನೆಗಳ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸುಳಿವು ನೀಡಿದ್ದಾರೆ.
ಚುನಾವಣೆಗೂ ಮುನ್ನ ಘೋಷಿಸಿದ ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ಕಾಂಗ್ರೆಸ್ ಸರ್ಕಾರ ಸಕಲ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 200 ಯೂನಿಟ್ ವಿದ್ಯುತ್ ಮತ್ತು 10 ಕೆಜಿ ಅಕ್ಕಿ ಉಚಿತವಾಗಿ ನೀಡುವ ಗ್ಯಾರಂಟಿ ಯೋಜನೆಯನ್ನು ಸರ್ಕಾರ ಜಾರಿಗೆ ತರಲಿದ್ದು, ಉಳಿದ ಎರಡು ಗ್ಯಾರಂಟಿಗಳಾದ ಮನೆಯೊಡತಿಗೆ 2000 ರೂಪಾಯಿ ಮತ್ತು ನಿರುದ್ಯೋಗಿ ಪದವೀಧರರಿಗೆ 3000 ಸಾವಿರ ರೂ. ಹಣ ನೀಡುವ ಯೋಜನೆಯನ್ನು ಕೆಲ ತಿಂಗಳಗಳು ನಂತರ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ಗ್ಯಾರಂಟಿ’ಗಾಗಿ ಸಿಎಂ-ಸಚಿವರ ಸಭೆ: ಕೊನೆಗೇನು ನಿರ್ಧಾರ?
ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, "11 ಗಂಟೆಗೆ ಸಚಿವ ಸಂಪುಟ ಸಭೆ ಇದೆ. ಸಚಿವ ಸಂಪುಟದ ನಂತರ ಗ್ಯಾರಂಟಿಯನ್ನ ಘೋಷಣೆ ಮಾಡ್ತಾರೆ. ಸ್ವತಃ ಸಿಎಂ ಸಿದ್ದರಾಮಯ್ಯನವರೆ ಗ್ಯಾರಂಟಿ ಬಗ್ಗೆ ಘೋಷಣೆ ಮಾಡ್ತಾರೆ. ರಾಜ್ಯದ ಜನತೆಗೆ ಸಿಹಿ ಸುದ್ದಿ ಸಿಗುತ್ತಾ? ಕಾದು ನೋಡಿ ಮಧ್ಯಾಹ್ನ 1 ಗಂಟೆಗೆ ಗೊತ್ತಾಗುತ್ತೆ" ಎಂದು ರಾಮಲಿಂಗರೆಡ್ಡಿ ಹೇಳಿಕೆ ನೀಡಿದ್ದಾರೆ.