ಅತ್ತೆ-ಸೊಸೆ ಜಗಳಕ್ಕೆ ಕಾರಣವಾಗುತ್ತಾ ಗೃಹಲಕ್ಷ್ಮಿ ಗ್ಯಾರಂಟಿ? ಮಹಿಳೆಯರ ಅಭಿಪ್ರಾಯ ಹೀಗಿತ್ತು…

guarantee
Published on

ವಿಜಯಪುರ: ಅತ್ತೆ, ಸೊಸೆ ಮಧ್ಯೆ ಗೃಹಲಕ್ಷ್ಮಿ ಗ್ಯಾರಂಟಿ ಜಗಳ ಬಂದರೆ ಎಂಬ ವಿಚಿತ್ರ ಪ್ರಶ್ನೆಯನ್ನು ವಿಜಯಪುರದಲ್ಲಿ ಮಹಿಳೆಯರು ಎತ್ತಿದ್ದಾರೆ.

ಮನೆ ಯಜಮಾನಿಗೆ ಎರಡು ಸಾವಿರ ರೂಪಾಯಿ ಕೊಡುವ ಯೋಜನೆಯಲ್ಲಿ ಗೊಂದಲ ಉಂಟಾಗಿದ್ದು ಅತ್ತೆಗೆ ಕೊಡೋದಾ ಸೊಸೆಗೆ ಕೊಡೋದಾ ಎಂಬ ಪ್ರಶ್ನೆ ಎದ್ದಿದ್ದು ಇದರಿಂದಾಗಿ ಚರ್ಚೆ ಉಂಟಾಗಿದೆ.

ಈ ಬಗ್ಗೆ ದಿಗ್ವಿಜಯ ನ್ಯೂಸ್ ಚ್ಯಾನಲ್​ ಬಳಿ ಮಾತನಾಡಿರುವ ಕೆಲ ಮಹಿಳೆಯರು, ಒಂದೇ ಮನೆಯಲ್ಲಿ ಅತ್ತೆ-ಸೊಸೆ, ಓರಗಿತ್ತಿಯರು, ನಾದಿನಿಯರು ಇರುತ್ತಾರೆ. ಮನೆಯಲ್ಲಿ ಇರುವವರೆಲ್ಲ ನನಗೆ ನನಗೆ ಬೇಕು ಎಂದು ಜಗಳ ಆಡುವಂತಾಗಿದೆ. ಏನಾದ್ರೂ ಡಿಸೈಡ್ ಮಾಡಿ ಮೊದಲು ಯೋಜನೆ ಜಾರಿ ಮಾಡಿ. ಇಲ್ಲದಿದ್ರೆ ನೀವು ಕುರ್ಚಿಯಿಂದ ಕೆಳಗೆ ಇಳಿಯಿರಿ, ರೀ ಎಲೆಕ್ಷನ್ ಆಗಲಿ.

ಮನೆಯಲ್ಲಿ ಹಿರಿತನ ಇರುವವರಿಗೆಲ್ಲ ಎರಡು ಸಾವಿರ ಕೊಡಲೇಬೇಕು. ಅತ್ತೆಗಾದ್ರೂ ಕೊಡಿ, ಸೊಸೆಗಾದ್ರೂ ಕೊಡಿ, ಈಗಲೇ ಯೋಜನೆ ಜಾರಿ ಮಾಡಿ, ಮೊದಲು ನುಡಿದಂತೆ ನಡೆಯಿರಿ. ಇವರು ಗೃಹಲಕ್ಷ್ಮಿ ಗ್ಯಾರೆಂಟಿ ಕೊಟ್ಟಿದ್ದಕ್ಕೆ ಅತ್ತೆನೂ ಓಟ್ ಹಾಕಿದಾಳೆ, ಸೊಸೆನೂ ಓಟ್ ಹಾಕಿದಾಳೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

"ಬಿಪಿಎಲ್ ಕಾರ್ಡ್ ನೋಡಿ ಮನೆ ಯಜಮಾನಿ ಎಂದು ನಿರ್ಧರಿಸೋದು ಬೇಡ. ಮನೆ ಮನೆಗೆ ಹೋಗಿ ಸರ್ವೇ ಮಾಡಬೇಕು, ಯಾಕಂದ್ರೆ ಒಂದೆಡೆ ಅತ್ತೆ ಮನೆ ಯಜಮಾನಿ ಇದ್ದರೆ, ಇನ್ನೊಂದೆಡೆ ಸೊಸೆ ಮನೆ ಯಜಮಾನಿ ಇರ್ತಾಳೆ. ಮನೆ ಜವಾಬ್ದಾರಿ ಹೊತ್ತ ಮಹಿಳೆಗೆ ಕೊಡಬೇಕು. ಹಣ ಕೊಡ್ತಿವಿ ಎಂದು ಆಸೆ ಹುಟ್ಟಿಸಿದ್ದೀರಿ. ನೀವು ಕೊಟ್ಟ ಗೃಹಲಕ್ಷ್ಮಿ ಗ್ಯಾರೆಂಟಿ ಮನೆಯಲ್ಲಿ ಅತ್ತೆ-ಸೊಸೆ ಮದ್ಯೆ ಜಗಳ ಹುಟ್ಟಿಸುತ್ತಿದೆ.

ದಯಮಾಡಿ ಅತ್ತೆ-ಸೊಸೆ ಮದ್ಯೆ ಜಗಳ ಹಚ್ಚುವ ಕೆಲಸ ಮಾಡಬೇಡಿ ಆಶ್ವಾಸನೆ ಕೊಡೊ ಮೊದಲು ಯೋಚನೆ ಮಾಡಬೇಕಿತ್ತು. ಮನೆಯ ಸಂಸಾರ ನಡೆಸುವ ಹೊಣೆ ಇರುವ ಎಲ್ಲಾ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆ ಕೊಡಲೇಬೇಕು" ಎಂದು ಕೆಲಸ ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net