More

    ಪ್ರಧಾನಿ ಕಚೇರಿಯ ಉಪಕಾರ್ಯದರ್ಶಿಯಾಗಿ ಸೋಗು ಹಾಕಿದ್ದ ಕಿಲಾಡಿ! ಕಡೆಗೂ ಕುರಿ ಚರ್ಮದ ತೋಳ ಬಲೆಗೆ

    ನವದೆಹಲಿ: ಪುಣೆ ಪೊಲೀಸ್‌ನ ಅಪರಾಧ ವಿಭಾಗವು ಪ್ರಧಾನ ಮಂತ್ರಿ ಕಚೇರಿಯಲ್ಲಿ (ಪಿಎಂಒ) ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಂತೆ ಪೋಸ್​ ನೀಡಿದ್ದ ವ್ಯಕ್ತಿಯನ್ನು ಬಂಧಿಸಿದೆ. ಈ ವಾರದ ಆರಂಭದಲ್ಲಿ ಔಂಧ್‌ನಲ್ಲಿ ಚಾರಿಟಬಲ್ ಟ್ರಸ್ಟ್ ಒಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 54 ವರ್ಷದ ಕಿಲಾಡಿ ಸಿಕ್ಕಿಬಿದ್ದಿದ್ದಾರೆ.

    ಬಂಧಿತ ವ್ಯಕ್ತಿಯನ್ನು ವಾಸುದೇವ್ ನಿವೃತ್ತಿ ತಾಯ್ಡೆ (54) ಎಂದು ಗುರುತಿಸಲಾಗಿದ್ದು, ಅವರು ಡಾ ವಿನಯ್ ದೇವ್ ಹೆಸರಿನಲ್ಲಿ ಪಿಎಂಒ ಉಪ ಕಾರ್ಯದರ್ಶಿಯಾಗಿದ್ದು ಅವರು ಗುಪ್ತಚರ ಸಂಬಂಧಿತ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: 22 ವರ್ಷದ ಮಗಳ ಸೋಗು ಹಾಕಿದ 48ರ ಮಹಿಳೆ! ಕಾಲೇಜು ಸೇರಿ ಯುವಕರೊಂದಿಗೆ ಸರಸ!

    ಪುಣ್ಯಾತ್ಮ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ?

    ಪುಣೆ ಮೂಲದ ಸಂಘಟನೆ ಬಾರ್ಡರ್‌ಲೆಸ್ ವರ್ಲ್ಡ್ ಫೌಂಡೇಶನ್ ಸೋಮವಾರ ಔಂಧ್ ಪ್ರದೇಶದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾರ್ಯಕ್ರಮದ ಭಾಗವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಆಂಬ್ಯುಲೆನ್ಸ್ ಒಂದನ್ನು ಕಳುಹಿಸಲು ಯೋಜಿಸಲಾಗಿತ್ತು ಎಂದು ಪುಣೆ ಸಿಟಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ .

    ವಿನಯ್ ದೇವ್ ಆಗಿ ಪೋಸ್ ಕೊಡುತ್ತಿದ್ದ ವ್ಯಕ್ತಿ ಕಾರ್ಯಕ್ರಮಕ್ಕೆ ಹಾಜರಾಗಿ ತಾನು ಐಎಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ಸಂಘಟನೆಯ ಟ್ರಸ್ಟಿಗಳು ಈತನ ಅನುಮಾನಾಸ್ಪದ ಚಲನವಲನಗಳನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಸೇನಾ ಆಫಿಸರ್​ ಸೋಗು ಹಾಕಿ ಉದ್ಯಮಿಯನ್ನು ವಂಚಿಸಿದ ಸೈಬರ್ ಕಳ್ಳರು!

    ಅಪರಾಧ ವಿಭಾಗದ ಘಟಕ 1 ರ ತಂಡವು ತನಿಖೆಯನ್ನು ಪ್ರಾರಂಭಿಸಿದ ನಂತರ, ಅವರು ವ್ಯಕ್ತಿಯನ್ನು ಪತ್ತೆಹಚ್ಚಿದರು ಮತ್ತು ವಿಚಾರಣೆಗಾಗಿ ಆತನನ್ನು ವಶಕ್ಕೆ ತೆಗೆದುಕೊಂಡರು. ತಾಳೇಗಾಂವ್ ದಭಾಡೆ ನಿವಾಸಿ ತಾಯ್ಡೆ ಎಂಬಾತನನ್ನು ಆತನ ಮನೆಯಿಂದ ಬಂಧಿಸಲಾಗಿದೆ.

    ಮುಂದೇನು?

    ಉಪ ಪೊಲೀಸ್ ಕಮಿಷನರ್ (ಅಪರಾಧ) ಅಮೋಲ್ ಝೆಂಡೆ, “ಆರಂಭಿಕ ತನಿಖೆಯಿಂದ ಶಂಕಿತ ವ್ಯಕ್ತಿಯು ಐಎಎಸ್ ಅಧಿಕಾರಿಯಂತೆ ನಟಿಸುತ್ತಿದ್ದ ಎಂದು ತಿಳಿದುಬಂದಿದೆ. ಅವರು ಸೋಗು ಹಾಕಿ ಜನರು ಅಥವಾ ಸಂಸ್ಥೆಗಳಿಗೆ ವಂಚಿಸಿದ್ದಾರೆಯೇ ಎಂದು ನಾವು ತನಿಖೆ ನಡೆಸುತ್ತಿದ್ದೇವೆ” ಎಂದಿದ್ದಾರೆ.

    ವಂಚನೆ ಮತ್ತು ಸೋಗು ಹಾಕುವಿಕೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ವಾಸುದೇವ್ ನಿವೃತ್ತಿ ಟಾಯ್ಡೆ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಈತನ ಹಿಂದಿನ ದಾಖಲೆಗಳಳ ಪರಿಶೀಲನೆ ಮೂಲಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts