More

    22 ವರ್ಷದ ಮಗಳ ಸೋಗು ಹಾಕಿದ 48ರ ಮಹಿಳೆ! ಕಾಲೇಜು ಸೇರಿ ಯುವಕರೊಂದಿಗೆ ಸರಸ!

    ನ್ಯೂಯಾರ್ಕ್​: ಅಮೆರಿಕದ 48 ವರ್ಷ ವಯಸ್ಸಿನ ಮಹಿಳೆಯೊಬ್ಬಳು ತನ್ನ 22 ವರ್ಷ ವಯಸ್ಸಿನ ಮಗಳ ಸೋಗು ತೊಟ್ಟು ಕಾಲೇಜು ಸೇರಿದ್ದಲ್ಲದೆ, ಚಿಕ್ಕ ವಯಸ್ಸಿನ ಯುವಕರೊಂದಿಗೆ ಡೇಟ್​ ಮಾಡುತ್ತಿದ್ದುದು ಪತ್ತೆಯಾಗಿದೆ. ಎರಡು ವರ್ಷಗಳ ಕಾಲ ಹೊಸತೊಂದು ಪಟ್ಟಣಕ್ಕೆ ಹೋಗಿ ತನ್ನ ಮಗಳಿನ ಗುರುತು-ವೇಷಗಳನ್ನು ತೊಟ್ಟು ವಂಚಿಸಿದ್ದಕ್ಕೆ ಇದೀಗ ಲೌರಾ ಓಗಲ್ಸ್​​ಬಿ ಎಂಬುವಳ ಮೇಲೆ ಮೊಕದ್ದಮೆ ಹೂಡಲಾಗಿದೆ.

    ತನ್ನ ಮಗಳ ಐಡೆಂಟಿಟಿಯನ್ನು ಕದ್ದ ಲೌರಾ, ಅವಳ ಹೆಸರಿನಲ್ಲಿ ಸೋಷಿಯಲ್​ ಸೆಕ್ಯುರಿಟಿ ಕಾರ್ಡ್​​ಗೆ ಅರ್ಜಿ ಸಲ್ಲಿಸಿ 25 ಸಾವಿರ ಡಾಲರ್ ಅವ್ಯವಹಾರ ಮಾಡಿದ್ದಾಳೆ. ಯೂನಿವರ್ಸಿಟಿಗೆ ಎನ್​ರೋಲ್​ ಮಾಡಿಕೊಂಡು, ಶಿಕ್ಷಣ ಸಾಲ, ಡ್ರೈವಿಂಗ್​ ಲೈಸೆನ್ಸ್​ ಪಡೆದಿದ್ದಲ್ಲದೆ, ಅವಳನ್ನು 22 ವರ್ಷದವಳೆಂದು ನಂಬಿದ್ದ ಬಾಯ್​ಫ್ರೆಂಡ್​​ಗಳನ್ನೂ ಆಕೆ ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಒಬ್ಬ ವಿವಾಹಿತೆ- ಡಬಲ್‌ ಮರ್ಡರ್‌! ಪತ್ನಿಯನ್ನು ಛೇಡಿಸಿದ್ದಕ್ಕೆ ಮೈಸೂರಲ್ಲಿ ಬಿತ್ತು ಎರಡು ಹೆಣ

    ಮಗಳ ಸೋಗಿನಲ್ಲಿ ಮೋಜು: ಅರ್ಕಾನ್ಸಸ್​ನಲ್ಲಿ ತನ್ನ ಮಗಳೊಂದಿಗೆ ವಾಸಿಸುತ್ತಿದ್ದ ಲೌರಾ ಏಕಾಂಗಿಯಾಗಿ ಮಿಸ್ಸೌರಿಯ ಮೌಂಟೇನ್​ ವ್ಯೂ ಪಟ್ಟಣಕ್ಕೆ ಸ್ಥಳಾಂತರಗೊಂಡು ಮಗಳೊಂದಿಗಿನ ಸಂಪರ್ಕ ಕಡಿದುಕೊಂಡಳು. 2016 ರಲ್ಲಿ ತನ್ನ ಮಗಳು ಲೌರೆನ್​ ಆಶ್ಲೇ ಹೇಯ್ಸ್​​ ಹೆಸರಿನಲ್ಲಿ ಸೋಷಿಯಲ್​ ಸೆಕ್ಯುರಿಟಿ ಕಾರ್ಡ್​​ಗೆ ಅರ್ಜಿ ಸಲ್ಲಿಸಿದಳು. ಮಿಸ್ಸೌರಿ ಡ್ರೈವರ್ಸ್​ ಲೈಸೆನ್ಸ್​​ಅನ್ನೂ ಅದೇ ಹೆಸರಲ್ಲಿ ಪಡೆದಿದಳು. 2017ರಲ್ಲಿ ಮಗಳ ಐಡಿ ಬಳಸಿ ಸೌತ್​ವೆಸ್ಟ್​ ಬ್ಯಾಪ್ಟಿಸ್ಟ್​ ಯೂನಿವರ್ಸಿಟಿಗೆ ಪ್ರವೇಶ ಪಡೆದ ಲೌರಾ, ವಿದ್ಯಾರ್ಥಿಗಳಿಗೆ ಸಿಗುವ ಸಾಲಗಳನ್ನು, ಪುಸ್ತಕಗಳ ಗ್ರಾಂಟ್​ಗಳನ್ನು ಪಡೆದಿದ್ದಳು ಎನ್ನಲಾಗಿದೆ. ಆದರೆ, ತರಗತಿಗಳನ್ನು ಅಟೆಂಡ್​ ಮಾಡುತ್ತಿದ್ದಳಾ ಇಲ್ಲವಾ ಎಂಬುದು ತಿಳಿದುಬಂದಿಲ್ಲ. ಸ್ಥಳೀಯ ಗ್ರಂಥಾಲಯವೊಂದರಲ್ಲಿ ಕೆಲಸ ಪಡೆದ ಆಕೆ ಸ್ಥಳೀಯರನ್ನು ತಾನು ತನ್ನ ನಿಜವಾದ ವಯಸ್ಸಿಗಿಂತ 26 ವರ್ಷ ಚಿಕ್ಕಿವಳೆಂದು ನಂಬಿಸುವಲ್ಲಿ ಯಶಸ್ವಿಯಾಗಿದ್ದಳು ಎಂದು ವರದಿ ತಿಳಿಸಿದೆ.

    ಲೌರಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಸೌತ್​ವೆಸ್ಟ್​ ಬಾಪ್ಟಿಸ್ಟ್​ ಯೂನಿವರ್ಸಿಟಿಗೆ ಮತ್ತು ತನ್ನ ಮಗಳು ಲೌರೆನ್​​ಗೆ 17,521 ಡಾಲರ್​ಗಳನ್ನು ಪರಿಹಾರವಾಗಿ ನೀಡಬೇಕೆಂದು ಕೋರ್ಟ್​ ಆದೇಶಿಸಿದೆ. ಜೊತೆಗೆ, ಆಕೆಗೆ 5 ವರ್ಷ ಜೈಲು ಶಿಕ್ಷೆ ಕೂಡ ವಿಧಿಸುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)

    ವಿಕಿ-ಕತ್ರಿನಾ ಮದುವೆಯ ಅಪರೂಪದ ದೃಶ್ಯಗಳು ಇಲ್ಲಿವೆ ನೋಡಿ…

    ಮೊಟ್ಟೆ ವಿರೋಧಿಸಿದ್ರೆ ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿಂದು ಹೋಗ್ತೀವಿ ಎಂದ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts