

ಮೈಸೂರು: ವಿವಾಹಿತೆಯೊಬ್ಬರನ್ನು ಛೇಡಿಸುತ್ತಿದ್ದ ಸ್ನೇಹಿತೆ ಹಾಗೂ ಸ್ನೇಹಿತನ ಸ್ನೇಹಿತ ಇಬ್ಬರನ್ನೂ ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಭೀಕರ ಘಟನೆ ಮೈಸೂರಿನಲ್ಲಿ ನಡೆದಿದೆ.
ಎಚ್.ಡಿ.ಕೋಟೆ ತಾಲೂಕಿನ ಕೊತ್ತೆಗಾಲ ಗ್ರಾಮದ ರವಿ ಹಾಗೂ ಬಸವ ಎಂಬುವವರು ಕೊಲೆಯಾದವರು. ಈ ಇಬ್ಬರನ್ನು ಕೊಲೆ ಮಾಡಿರುವ ಆರೋಪಿ ಮಹೇಶ್. ರವಿ ಮಹೇಶ್ ಅವರ ಪತ್ನಿಯನ್ನು ಪದೇ ಪದೇ ಛೇಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಸಿಟ್ಟುಗೊಂಡಿದ್ದ ಮಹೇಶ್ ಕಂಠಪೂರ್ತಿ ಮದ್ಯಪಾನ ಮಾಡಿ ಇಬ್ಬರ ಕೊಲೆ ಮಾಡಿದ್ದಾನೆ.
ಈ ಘಟನೆಯನ್ನು ಬೋಗಾದಿ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮಹೇಶ್, ರವಿ, ಬಸವ ಹಾಗೂ ಮಹೇಶ್‌ನ ಸ್ನೇಹಿತ ನಾಲ್ವರೂ ಸೇರಿ ಪಾರ್ಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪತ್ನಿಯನ್ನು ಚುಡಾಯಿಸುವ ಬಗ್ಗೆ ಇವರ ನಡುವೆ ಮಾತಿನ ಚಕಮಕಿ ನಡೆದಿದೆ. ಮೊದಲೇ ಸಿಟ್ಟಿನಲ್ಲಿದ್ದ ಮಹೇಶರ್, ಮಹೇಶ್ ಪಿಕಾಸಿಯಿಂದ ರವಿ ತಲೆಗೆ ಹೊಡೆದು ಕೊಂದಿದ್ದಾನೆ. ಇದನ್ನು ತಪ್ಪಿಸಲು ಬಂದ ಬಸನನ್ನೂ ಕೊಲೆ ಮಾಡಿದ್ದಾನೆ. ಈ ಕೊಲೆಗೆ ಮಹೇಶ್ ಸ್ನೇಹಿತನೂ ಸಹಕರಿಸಿದ್ದು ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.