More

    ವಿಕಿ-ಕತ್ರಿನಾ ಮದುವೆಯ ಅಪರೂಪದ ದೃಶ್ಯಗಳು ಇಲ್ಲಿವೆ ನೋಡಿ…

    ಮುಂಬೈ: 2019ರಿಂದ ಡೇಟ್​ ಮಾಡುತ್ತಿದ್ದ ಬಾಲಿವುಡ್​ ಬೆಡಗಿ ಕತ್ರಿನಾ ಕೈಫ್​ ಮತ್ತು ವಿಕಿ ಕೌಶಲ್​​ ಡಿಸೆಂಬರ್​ 9 ರ ಗುರುವಾರದಂದು ರಾಜಸ್ಥಾನದಲ್ಲಿ ಹಿಂದೂ ಪದ್ಧತಿಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈವರೆಗೂ ತಮ್ಮ ಪ್ರೇಮ ಮತ್ತು ಮದುವೆಯ ಬಗ್ಗೆ ತುಟಿಪಿಟಿಕ್​​ ಎನ್ನದ ಹಾಟ್​​ ಕಪಲ್​​, ತಮ್ಮ ಬಹುಚರ್ಚಿತ ಮದುವೆಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ಆ್ಯಕ್ಟೀವ್​ ಆಗಿದ್ದಾರೆ.

     

    View this post on Instagram

     

    A post shared by Vicky Kaushal (@vickykaushal09)

    ಈ ಮುನ್ನ ‘ಸಾತ್​​ ಫೇರೆ’ ಸಂದರ್ಭದ ಚಿತ್ರಗಳನ್ನು ಶೇರ್​ ಮಾಡಿಕೊಂಡಿದ್ದ ಈ ದಂಪತಿ, ಇದೀಗ ತಮ್ಮ ಅರಿಶಿನ ಶಾಸ್ತ್ರದ ಚಿತ್ರಗಳನ್ನು ತಂತಮ್ಮ ಇನ್​​ಸ್ಟಾಗ್ರಾಂ ಖಾತೆಗಳಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ಒಂದೊಂದೇ ಚಿತ್ರಗಳನ್ನು ನೋಡಿ ಅಭಿಮಾನಿಗಳು ಹರ್ಷಭರಿತರಾಗಿದ್ದು, ಇವು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಿವೆ. ಕತ್ರೀನಾರ ಚಿತ್ರಗಳಿಗೆ ಅದಾಗಲೇ 28 ಲಕ್ಷಕ್ಕೂ ಹೆಚ್ಚು ಲೈಕ್​ಗಳು ಸಿಕ್ಕಿದ್ದು, ವಿಕಿ ಕೌಶಲ್​ರ ಚಿತ್ರಗಳಿಗೂ 19 ಲಕ್ಷಕ್ಕೂ ಹೆಚ್ಚು ಲೈಕ್​ಗಳು ಸಿಕ್ಕಿವೆ.

     

    View this post on Instagram

     

    A post shared by Katrina Kaif (@katrinakaif)

    ತಮ್ಮ ಈ ಹಲದೀ ಸಮಾರಂಭದ ಚಿತ್ರಗಳಿಗೆ “ಶುಕ್ರ್​. ಸಬ್ರ್​. ಖುಷಿ.” ಎಂಬ ಶೀರ್ಷಿಕೆ ನೀಡಿದ್ದಾರೆ. ಶುಕ್ರ್​ ಮತ್ತು ಸಬ್ರ್​ ಇಸ್ಲಾಂ ಧರ್ಮದಲ್ಲಿ ದೇವರಲ್ಲಿನ ನಂಬಿಕೆಯ ಪ್ರಮುಖ ಎರಡು ಅಂಶಗಳಾಗಿದ್ದು, ಅರಬಿಕ್​ ಭಾಷೆಯಲ್ಲಿ ಶುಕ್ರ್​​ ಎಂದರೆ ಕೃತಜ್ಞತೆ ಮತ್ತು ಧನ್ಯವಾದಗಳನ್ನು ಅರ್ಪಿಸುವುದಾಗಿಯೂ, ಸಬ್ರ್​​ ಎಂದರೆ ತಾಳ್ಮೆಯಿಂದ ದಾರಿಯಲ್ಲಿ ಮುಂದುವರೆಯುವುದಾಗಿಯೂ ಅರ್ಥ ಬರುತ್ತದೆ. ಇನ್ನು ಖುಷಿ ಎಂಬ ಹಿಂದಿ ಪದ ಕನ್ನಡದಲ್ಲೂ ಇರುವ ಖುಷಿ ಅಥವಾ ಸಂತಸಕ್ಕೆ ಪರ್ಯಾಯವಾಗಿದೆ.

    ವೈರಲ್​ ಆಗ್ತಿವೆ ವಿಕಿ-ಕತ್ರಿನಾ ‘ಮದುವೆ’ ಫೋಟೋಗಳು!

    VIDEO| ಲೆಹಂಗಾ ಬದಲಿಗೆ ಜೀನ್ಸ್​​ ತೊಟ್ಟ ಮದುವೆ ಹೆಣ್ಣು! ವೈರಲ್​ ಆಗ್ತಿದೆ ಈ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts