ಹಾವಿಗೆ ಕಿಸ್​ ಕೊಡಲು ಮುಂದಾದ ಯುವತಿ! ಮುಂದೇನಾಯ್ತು?

Snake
ಹಾವು
Published on

ನವದೆಹಲಿ: ಮಹಿಳೆಯೊಬ್ಬರು ಹಾವಿಗೆ ಮುತ್ತಿಡಲು ಯತ್ನಿಸುತ್ತಿರುವ ವಿಲಕ್ಷಣ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಏಳು ಸೆಕೆಂಡುಗಳ ವಿಡಿಯೋ ಕ್ಲಿಪ್​ನಲ್ಲಿ ಮಹಿಳೆ ಹಾವನ್ನು ಚುಂಬಿಸಲು ಪ್ರಯತ್ನಿಸುತ್ತಿರುವುದನ್ನು ತೋರಿಸಲಾಗಿದೆ. ಆದರೆ ಆ ಹಾವು ಮಹಿಳೆಯ ಮುಖವನ್ನು ಕಚ್ಚಿದ್ದು ಮುತ್ತು ಕೊಡುವ ಪ್ರಯತ್ನ ಭೀಕರ ಅಂತ್ಯ ನೀಡಿದೆ.

ಈ ಭಯಾನಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಥಟ್ಟನೆ ಕೊನೆಗೊಂಡಿದ್ದರಿಂದ ಮಹಿಳೆಯ ಪಾಡು ಏನಾಗಿದೆ ಎಂಬುದು ಖಚಿತವಾಗಿಲ್ಲ.

ಈ ವಿಡಿಯೋದಲ್ಲಿ ಆ ಮಹಿಳೆಯ ಪ್ರಯತ್ನ ಎಷ್ಟು ವಿಚಿತ್ರವಾಗಿತ್ತೋ, ಅಷ್ಟೇ ವಿಚಿತ್ರವಾಗಿ ಜನರೂ ಕಾಮೆಂಟ್ ಮಾಡಿದ್ದಾರೆ. ಒಬ್ಬರು "ವಿಷಕಾರಿ ಕಿಸ್" ಎಂದು ಬರೆದಿದ್ದರೆ, ಮತ್ತೊಬ್ಬರು ವಿಚಿತ್ರ ಆಟಗಳಿಗೆ ವಿಚಿತ್ರ ಬಹುಮಾನ ಎಂದು ಬರೆದಿದ್ದಾರೆ.

ಕೆಲವರು ಮರೆಯಲಾಗದ ಮುತ್ತು ಎಂದು ತಮಾಷೆ ಮಾಡಿದ್ದು ಮತ್ತೊಬ್ಬ ಮಹಿಳೆ, ಈ ವಿಡಿಯೋ ನನ್ನ ಹಳೆ ಪ್ರಿಯತಮನ ನೆನಪನ್ನು ತರಿಸುತ್ತಿದೆ ಎಂದು ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net