More

    ನಿಷೇಧಿತ ತಿಮಿಂಗಿಲದ ವಾಂತಿಗಿದೆ ಭಾರಿ ಬೆಲೆ! ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ…

    ಬೆಂಗಳೂರು: ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಕೋಟ್ಯಾಂತರ ರೂ. ಬೆಲೆಬಾಳುವ ಅಂಬರ್​ಗ್ರೀಸ್ಅನ್ನು ವಶಕ್ಕೆ ಪಡೆದಿದ್ದಾರೆ.

    ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ನಿಷೇಧಿತ ಆಂಬರ್ ಗ್ರಿಸ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ಆರೋಪಿಗಳ ವಿರುದ್ಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಂದಹಾಗೆ ಈ ಆರೋಪಿಗಳಿಂದ ಸುಮಾರು 6.5 ಕೆ.ಜಿ. ತೂಕದ ಅಂಬರ್​ಗ್ರೀಸ್​ ವಶಕ್ಕೆ ಪಡೆಯಲಾಗಿದ್ದು ಪ್ರತಿ ಕೆಜಿಗೆ ಸುಮಾರು 2 ಕೋಟಿ ರೂ. ಬೆಲೆ ಬಾಳುತ್ತದೆ. ಅಂದರೆ ಇವರಿಂದ ಸುಮಾರು 13 ಕೋಟಿ ರೂ. ಮೌಲ್ಯದ ಅಂಬರ್​ಗ್ರೀಸ್​​ಅನ್ನು ವಶಕ್ಕೆ ಪಡೆಯಲಾಗಿದೆ.

    ಇದನ್ನೂ ಓದಿ: 3.48 ಕೋಟಿ ಮೌಲ್ಯದ ಅಂಬರ್‌ಗ್ರೀಸ್ ಅಕ್ರಮ ಮಾರಾಟ ಯತ್ನ: ಆರು ಮಂದಿ ಬಂಧನ

    ನಿಷೇಧಿತ ತಿಮಿಂಗಿಲದ ವಾಂತಿಗಿದೆ ಭಾರಿ ಬೆಲೆ! ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ…

    ಏನಿದು ಅಂಬರ್​ಗ್ರೀಸ್​?!

    ಅಂಬರ್‌ಗ್ರೀಸ್ ಎನ್ನುವ ಪದಾರ್ಥ ಸ್ಪರ್ಮ್​ ವೇಲ್​ಗಳ ಜೀರ್ಣಾಂಗ ವ್ಯವಸ್ಥೆಯಲ್ಲಿ ಉತ್ಪತ್ತಿಯಾಗುವ ಮಂದ ಬೂದು ಅಥವಾ ಕಪ್ಪು ಬಣ್ಣದ ವಸ್ತುವಾಗಿದೆ. ಹೊಸದಾಗಿ ಸಮುದ್ರ ಸೇರಿದ ಅಂಬರ್​ಗ್ರೀಸ್, ಮಲದ ವಾಸನೆ ಹೊಂದಿರುತ್ತದೆ. ಇದು ಸಮಯ ಕಳೆದಂತೆ ಸಿಹಿಯಾದ, ಮಣ್ಣಿನ ಪರಿಮಳವನ್ನು ಪಡೆಯುತ್ತದೆ. ಸಾಮಾನ್ಯವಾಗಿ ಇದರ ಗಂಧವನ್ನು ಐಸೊಪ್ರೊಪಿಲ್ ಆಲ್ಕೋಹಾಲ್‌ನ ಪರಿಮಳಕ್ಕೆ ಹೋಲಿಸಲಾಗುತ್ತದೆ.

    ಇದನ್ನೂ ಓದಿ: 35 ಬಡ ಮೀನುಗಾರರ ಜೀವನವನ್ನೇ ಬದಲಿಸಿದ ಸತ್ತು ಬಿದ್ದಿದ್ದ ತಿಮಿಂಗಿಲ! ಕಾರಣ ಕೇಳಿದ್ರೆ ಅಚ್ಚರಿ ಖಂಡಿತ

    ಅಂಬರ್‌ಗ್ರಿಸ್​ಗೆ ಹೆಚ್ಚಿನ ಮೌಲ್ಯ ಬರಲು ಕಾರಣ ಸುಗಂಧ ದ್ರವ್ಯ ತಯಾರಕರು. ಇದು ಸುಗಂಧ ದ್ರವ್ಯಕ್ಕೆ ಹೆಚ್ಚಿನ ಜೀವಿತಾವಧಿ ನೀಡುತ್ತದೆ. ಆದರೆ ಇದನ್ನು ಈಗಿನ ಕಾಲದಲ್ಲಿ ಅಂಬರ್​ ಗ್ರೀಸ್​ ಬದಲಿಗೆ ಸಿಂಥೆಟಿಕ್ ಆಂಬ್ರಾಕ್ಸೈಡ್‌ ಎಂಬ ಮನುಷ್ಯ ನಿರ್ಮಿತ ವಸ್ತುವನ್ನು ಬಳಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts