More

    3.48 ಕೋಟಿ ಮೌಲ್ಯದ ಅಂಬರ್‌ಗ್ರೀಸ್ ಅಕ್ರಮ ಮಾರಾಟ ಯತ್ನ: ಆರು ಮಂದಿ ಬಂಧನ

    ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಬಾಳಿಪುಣಿ ಗ್ರಾಮದ ನವೋದಯ ಶಾಲೆಯ ಬಳಿ ನಿಷೇಧಿತ ವಸ್ತುವಾದ ಅಂಬರ್‌ಗ್ರೀಸ್ (ತಿಮಿಂಗಲ ವಾಂತಿ)ಯನ್ನು ಅಕ್ರಮವಾಗಿ ಮಾರಾಟ ಮಾಡಲು ಬಂದ ಬೆಂಗಳೂರು ಮತ್ತು ಉಡುಪಿ ಮೂಲದ ಆರು ಮಂದಿಯನ್ನು ಬಂಧಿಸಲಾಗಿದೆ. ಅವರಿಂದ 3.48 ಕೋಟಿ ಮೌಲ್ಯದ 3.480 ಕೆ.ಜಿ ಅಂಬರ್ ಗ್ರೀಸ್ ವಶ ಪಡಿಸಿಕೊಳ್ಳಲಾಗಿದೆ.

    ಕುಂದಾಪುರ ತಾಲೂಕು ಜಡ್ಕಲ್ ಗ್ರಾಮದ ಪ್ರಶಾಂತ್ (24), ಬೆಂಗಳೂರಿನ ವೀರಭದ್ರ ನಗರದ ಬಿಎಸ್‌ಕೆ ಮೂರನೇ ಹಂತದ ಸತ್ಯರಾಜ್ (32), ಮಂಗಳೂರು ತಾಲೂಕು ತೆಂಕ ಎಡಪದವು ಪಡ್ಯಾರು ಮನೆ ರೋಹಿತ್ (27), ಅಡ್ಡೂರಿನ ರಾಜೇಶ್ (37), ತೆಂಕ ಎಡಪದವು ಪದ್ರಂಗಿಯ ವಿರೂಪಾಕ್ಷ (37) ಮತ್ತು ಕಾಪು ಮಲಾರ್‌ನ ನಾಗರಾಜ್ (31) ಬಂಧಿತರು.
    ತಿಮಿಂಗಲ ವಾಂತಿಯನ್ನು ತಮಿಳುನಾಡು ಮೂಲದ ಮೀನುಗಾರ ಸೇದು ಮಾಣಿಕ್ಯ ಎಂಬುವರು ನೀಡಿರುವುದಾಗಿ ಬಂಧಿತರು ತಿಳಿಸಿದ್ದಾರೆ.
    ಸಹಾಯಕ ಪೊಲೀಸ್ ಆಯುಕ್ತ ದಿನಕರ ಶೆಟ್ಟಿರವರ ಮಾರ್ಗದರ್ಶನದಲ್ಲಿ ಕೊಣಾಜೆ ಠಾಣಾ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಮುಂದಾಳತ್ವದಲ್ಲಿ ಉಪನಿರೀಕ್ಷಕರಾದ ಶರಣಪ್ಪ ಭಂಡಾರಿ ಮತ್ತು ಮಲ್ಲಿಕಾರ್ಜುನ್ ಬಿರಾದಾರ್, ಎಎಸ್‌ಐಯವರಾದ ಮೋಹನ್ ದೇರಳಕಟ್ಟೆ, ಸಂಜೀವ, ಸಿಬ್ಬಂದಿಯವರಾದ ಅಶೋಕ್, ಶಿವಕುಮಾರ್, ಪುರುಷೋತ್ತಮ, ದೀಪಕ್, ಅಂಬರೀಶ್ ಘಂಟಿ, ಭರಮಾ ಬಡಿಗೇರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts