ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ್ರೆ… ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

WhatsApp Image 2024-05-24 at 12.02.26 PM
Published on

ಹರಿಯಾಣ: ನಿನ್ನೆ (ಮೇ.24) ಇಲ್ಲಿನ ಮಹೇಂದ್ರಗಢದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಖಂಡಿತವಾಗಿ ಅಗ್ನಿವೀರ್ ಯೋಜನೆಯನ್ನು ಕಿತ್ತು ಬಿಸಾಡ್ತೀವಿ ಎಂದು ಹೇಳಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಯೋಧರನ್ನು ಕಾರ್ಮಿಕರಂತೆ ಮಾಡಿದ್ದಾರೆ. ಸೇನೆಗೆ ಅಗ್ನಿವೀರ್ ಯೋಜನೆ ಬೇಕಾಗಿಲ್ಲ. ಇದು ಪಿಎಂಒ ಮಾಡಿದ ಯೋಜನೆಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅದನ್ನು ಸಂಪೂರ್ಣವಾಗಿ ತೆಗೆದುಹಾಕುತ್ತೇವೆ. ಇಲ್ಲಿನ ಯುವಕರು ಸೇನೆಗೆ ಆಯ್ಕೆಯಾಗಲು ಹೆಮ್ಮೆಪಡುತ್ತಾರೆ" ಎಂದು ಹೇಳಿದರು.

ಪ್ರತಿಭಟನಾ ನಿರತ ರೈತರ ಬಗ್ಗೆ ಧ್ವನಿ ಎತ್ತಿದ ರಾಹುಲ್, "ಹರಿಯಾಣದ ರೈತರು ದೇಶದ ಹೊಲಗಳಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಮೋದಿ ಸರ್ಕಾರವು ನಿಮ್ಮ ಹಕ್ಕುಗಳನ್ನು ಕಸಿದುಕೊಂಡಿದ್ದಲ್ಲದೇ ಕೋಟ್ಯಾಧಿಪತಿಗಳಿಗೆ ಸಹಾಯ ಮಾಡಲು ಭೂ ನ್ಯಾಯಮಂಡಳಿ ಮಸೂದೆಯನ್ನು ರದ್ದುಗೊಳಿಸಿತು. ನಂತರ ಮೂರು (ಫಾರ್ಮ್) ಕಾನೂನುಗಳು ಬಂದವು, ಆದರೆ ಸರ್ಕಾರ ಮಾತ್ರ ಇದ್ಯಾವುದಕ್ಕೂ ಉತ್ತರಿಸಲಿಲ್ಲ" ಎಂದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net