More

    ಅಲ್ಲಿಯೂ ರಾಜಕೀಯ ಇದೆ… LSG ಕೋಚ್​ ಬಿಚ್ಚಿಟ್ರು ಕೆ.ಎಲ್. ರಾಹುಲ್ ಹೇಳಿದ ಕಿವಿಮಾತು

    ಬೆಂಗಳೂರು: ಈ ಬಾರಿಯ ಐಪಿಎಲ್​ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದೇ ಆದರೂ ಪ್ಲೇಆಫ್​ ಏರುವಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ನೇತೃತ್ವದ ಲಖನೌ ಸೂಪರ್ ​ಜೈಂಟ್ಸ್ ತಂಡ​ ವಿಫಲವಾಯಿತು. ಇದರ ಬೆನ್ನಲ್ಲೇ ಲೀಗ್​ನಿಂದ ಹೊರಗುಳಿದ ಎಲ್​ಎಸ್​ಜಿ ತಂಡ ಹಾಗೂ ಕ್ಯಾಪ್ಟನ್ ರಾಹುಲ್, ತಮ್ಮ ಮ್ಯಾನೆಜ್​ಮೆಂಟ್​ ಜತೆಗೆ ಹೆಚ್ಚು ಸಮಯ ಸುದೀರ್ಘ ಚರ್ಚೆಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ತಂಡದ ಕೋಚ್​ ಆದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಜಸ್ಟಿನ್ ಲ್ಯಾಂಗರ್​, ಟೀಂ ಇಂಡಿಯಾದ ಹೆಡ್ ಕೋಚ್ ಹುದ್ದೆಯ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇಕೆ ಎಂಬುದನ್ನು ಬಹಿರಂಗವಾಗಿ ಹೇಳಿದ್ದಾರೆ.

    ಇದನ್ನೂ ಓದಿ: ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ ಬಾಲಕ, ಮದ್ಯಕ್ಕೆ ಖರ್ಚು ಮಾಡಿದ್ದು 69,000 ರೂ.!

    ಕಳೆದ ಹಲವು ದಿನಗಳಿಂದ ಟೀಂ ಇಂಡಿಯಾದ ಹೆಡ್​ ಕೋಚ್​ ಹುದ್ದೆಗೆ ಗೌತಮ್ ಗಂಭೀರ್​, ಮಹೇಂದ್ರ ಸಿಂಗ್ ಧೋನಿ ಹೀಗೆ ಸ್ಟಾರ್​ ಮಾಜಿ ಕ್ರಿಕೆಟಿಗರ ಹೆಸರುಗಳು ಮುಂಚೂಣಿಯಲ್ಲಿವೆ. ಈ ಹುದ್ದೆಯ ರೇಸ್​ನಲ್ಲಿ ಲಖನೌ ಕೋಚ್​ ಜಸ್ಟಿನ್ ಕೂಡ ಇದ್ದರು. ಆದ್ರೆ, ಇದೀಗ ಅವರು ನಾನಂತೂ ಟೀಂ ಇಂಡಿಯಾದ ಹೆಡ್​ ಕೋಚ್ ಸ್ಥಾನವನ್ನು ಸ್ವೀಕರಿಸಲು ಸಿದ್ಧನಿಲ್ಲ ಎಂದು ನೇರವಾಗಿ ಹೇಳಿಕೆ ನೀಡಿದ್ದಾರೆ. ಈ ಖಡಕ್ ನಿರ್ಧಾರದ ಹಿಂದಿನ ಕಾರಣವನ್ನು ಸಹ ಬಟಾಬಯಲು ಮಾಡಿದ್ದಾರೆ.

    “ನಾನು ಕೆ.ಎಲ್​. ರಾಹುಲ್​ ಜತೆಗೆ ಮಾತನಾಡಿದೆ. ಆಗ ಅವರು, ‘ನೋಡಿ ಐಪಿಎಲ್​ ತಂಡಗಳಲ್ಲಿಯೇ ಇಷ್ಟೊಂದು ರಾಜಕೀಯ ಮತ್ತು ಒತ್ತಡ ಇದೆ ಎಂದಾದರೆ, ಇನ್ನೂ ಟೀಂ ಇಂಡಿಯಾದ ಕೋಚ್​ ಸ್ಥಾನ. ಇಲ್ಲಿಗಿಂತ ಸಾವಿರಪಟ್ಟು ಅಲ್ಲಿದೆ’ ಎಂದು ಹೇಳಿದರು. ತಕ್ಷಣವೇ ಎಚ್ಚೆತ್ತುಕೊಂಡ ನಾನು, ನಿಜಕ್ಕೂ ಇದು ಉತ್ತಮ ಸಲಹೆ ಎಂದೇ ಭಾವಿಸಿದೆ” ಎಂದರು.

    ಇದನ್ನೂ ಓದಿ: ಸುಹಾನಾಳ ಜತೆ ಡೇಟಿಂಗ್​ ಮಾಡಲು 7 ಷರತ್ತುಗಳನ್ನಿಟ್ಟ ಎಸ್​ಆರ್​ಕೆ! ಬಾಯ್​ಫ್ರೆಂಡ್​ ಕತೆ ಅಷ್ಟೇ ಅಂದ್ರು ನೆಟ್ಟಿಗರು

    “ಖಂಡಿತ ಹುದ್ದೆಯ ಬಗ್ಗೆ ಮಾತನಾಡುವಂತಿಲ್ಲ. ಇದು ಅತ್ಯುತ್ತಮ ಜಾಬ್ ಎಂಬುದರಲ್ಲಿ ಸಂಶಯವೂ ಇಲ್ಲ. ಆದ್ರೆ, ಈ ಕ್ಷಣಕ್ಕೆ ಆ ಹುದ್ದೆ ನನಗಲ್ಲ ಎಂಬುದೇ ನನ್ನ ನಿರ್ಧಾರ” ಎಂದು ಹೇಳಿದ್ದಾರೆ. ಸದ್ಯ ರಾಹುಲ್ ನೀಡಿದ ಸಲಹೆ ನೆನೆದ ಮಾಜಿ ಕ್ರಿಕೆಟಿಗನ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ಇವರಿಬ್ಬರಿಲ್ಲ ಅಂದ್ರೆ IPL​ಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts