More

    ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ ಬಾಲಕ, ಮದ್ಯಕ್ಕೆ ಖರ್ಚು ಮಾಡಿದ್ದು 69,000 ರೂ.!

    ಮಹಾರಾಷ್ಟ್ರ: ಮೇ.20ರಂದು ವೇಗವಾಗಿ ತನ್ನ ತಂದೆಯ ಪೋರ್ಷೆ ಕಾರನ್ನು ಕುಡಿದ ಅಮಲಿನಲ್ಲಿಯೇ ಚಲಾಯಿಸಿಕೊಂಡು ಬಂದ 17 ವರ್ಷದ ಬಾಲಕನೊಬ್ಬ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವ್ಯಕ್ತಿಗಳು ಸ್ಥಳದಲ್ಲಿ ಮೃತಪಟ್ಟರು. ಈ ಘಟನೆಯಲ್ಲಿ ಬಾಲಕ ಮತ್ತು ತಂದೆಯನ್ನು ವಿಚಾರಣೆಗೆ ಒಳಪಡಿಸಿದ್ದ ಪುಣೆ ಪೊಲೀಸರು, ಅವರ ವಿರುದ್ಧ ದಾಖಲಾದ ಪ್ರಕರಣದ ಆಧಾರದ ಮೇಲೆ ವಿಶಾಲ್ ಅಗರವಾಲ್ ಅವರನ್ನು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಬಂಧಿಸಿದ್ದರು.

    ಇದನ್ನೂ ಓದಿ: ಕುಡಿಯುವ ನೀರಿನ ಸಮಸ್ಯೆಗೆ ಡಿಸಿ ಹೊಣೆ; ರೈತರಿಗೆ ನೆರವಾಗುವಂತೆ ಸಿಎಂ ಸೂಚನೆ

    ಬಾಲಕನ ತಂದೆ ವಿಶಾಲ್ ಅಗರವಾಲ್ ಒಬ್ಬ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದು, ಮಗ ಮಾಡಿದ ತಪ್ಪಿನಿಂದಾಗಿ ಇದೀಗ ಪುಣೆ ಪೊಲೀಸರ ಅತಿಥಿಯಾಗಿದ್ದಾರೆ. ಅಪಘಾತದ ಬಗ್ಗೆ ಹೆಚ್ಚಿನ ತನಿಖೆಗಾಗಿ ಹಲವು ತಂಡಗಳನ್ನು ರಚಿಸಿದ ಪೊಲೀಸರು, ಮೇ.20ರ ಮುಂಜಾನೆ ಛತ್ರಪತಿ ಸಂಭಾಜಿನಗರ ಪ್ರದೇಶದಿಂದ ಅವರನ್ನು ಬಂಧಿಸಿದ್ದರು. ಭಾನುವಾರ ಬೆಳಗ್ಗೆ ಪುಣೆಯ ಹದಿಹರೆಯದ ಯುವಕ ದ್ವಿಚಕ್ರ ವಾಹನದಲ್ಲಿ ಬಂದ ದಂಪತಿಗಳ ಮೇಲೆ ತನ್ನ ಸ್ಪೋರ್ಟ್ಸ್ ಕಾರನ್ನು ಹರಿಸಿದ ಕಾರಣ ದಂಪತಿಗಳು ಸ್ಥಳದಲ್ಲೇ ಸಾವಿಗೀಡಾದರು.

    ಅಪಘಾತಕ್ಕೂ ಮುನ್ನ ಅಪ್ರಾಪ್ತ ವಯಸ್ಕ ಮದ್ಯದ ಅಮಲಿನಲ್ಲಿದ್ದ ಎಂದು ಹೇಳಲಾಗಿದ್ದು, ಪ್ರಕರಣದಲ್ಲಿ ಇನ್ನು ಇಬ್ಬರನ್ನು ಪೋಲೀಸರು ಕಸ್ಟಡಿಗೆ ತೆಗೆದುಕೊಂಡು, ತನಿಖೆ ನಡೆಸಿದ್ದಾರೆ. ಮೊದಲಿಗೆ ಆತ ಅಪ್ರಾಪ್ತ ವಯಸ್ಕನು ಎಂಬ ಕಾರಣಕ್ಕೆ ಜಿಲ್ಲಾ ನ್ಯಾಯಾಲಯವು ಬಂಧನಕ್ಕೊಳಗಾದ 14 ಗಂಟೆಗಳೊಳಗೆ ಬಾಲಕನಿಗೆ ಜಾಮೀನು ನೀಡಿ, ಕಳುಹಿಸಿತ್ತು. ಬಳಿಕ ಸಾರ್ವಜನಿಕರು ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಇಬ್ಬರ ಸಾವಿಗೆ ನ್ಯಾಯ ದೊರಕಿಸಿ ಕೊಡಿ, ಕುಡಿದ ಅಮಲಿನಲ್ಲಿ ಇಬ್ಬರನ್ನು ಬಲಿಪಡೆದ ಬಾಲಕನ ವಿರುದ್ಧ ಕ್ರಮ ಜರುಗಿಸಿ ಎಂದಿದ್ದರು. ಇದರ ಮೇರೆಗೆ ಆತನಿಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸಿ, ಶಿಕ್ಷೆಗೆ ಒಳಪಡಿಸಿದ ಕೋರ್ಟ್​, 2025ರವರೆಗೆ ಬಾಲಕನ ಡ್ರೈವಿಂಗ್ ಲೈಸನ್ಸ್​ ಅನ್ನು ರದ್ದುಗೊಳಿಸಿದೆ.

    ಇದನ್ನೂ ಓದಿ: ಒಂದಲ್ಲ ಎರಡಲ್ಲ 4 ಬಾರಿ… ಶಿಲ್ಪಾ ಶೆಟ್ಟಿ ಪತಿ ರಾಜ್​ಕುಂದ್ರಾ ವಿರುದ್ಧ ಗಂಭೀರ ಆರೋಪ ಮಾಡಿದ ರಾಸ್ ಟೇಲರ್!

    ಈ ಭೀಕರ ಅಪಘಾತ ಸಂಭವಿಸುವ ಕೆಲವು ಗಂಟೆಗಳ ಮೊದಲು ಬಾಲಕ ಎರಡು ಪಬ್‌ಗಳಲ್ಲಿ ಒಟ್ಟು 69,000 ರೂ. ಬಿಲ್ ಮಾಡಿದ್ದ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್). 

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ಇವರಿಬ್ಬರಿಲ್ಲ ಅಂದ್ರೆ IPL​ಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts