More

    ಒಂದಲ್ಲ ಎರಡಲ್ಲ 4 ಬಾರಿ… ಶಿಲ್ಪಾ ಶೆಟ್ಟಿ ಪತಿ ರಾಜ್​ಕುಂದ್ರಾ ವಿರುದ್ಧ ಗಂಭೀರ ಆರೋಪ ಮಾಡಿದ ರಾಸ್ ಟೇಲರ್!

    ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​​) ಕ್ಯಾಶ್​ ರಿಚ್​ ಲೀಗ್​ ಎಂಬುದು ಎಲ್ಲರಿಗೂ ತಿಳಿದಿದೆ. ಇದು ಕ್ರೀಡಾಭಿಮಾನಿಗಳಿಗೆ ಸಂಪೂರ್ಣ ಮನರಂಜನೆಯನ್ನು ನೀಡುತ್ತದೆ. ಆದರೆ, ಈ ಲೀಗ್ ಹಲವು ವಿವಾದಗಳ ಕೇಂದ್ರ ಬಿಂದುವೂ ಆಗಿದೆ. ಮ್ಯಾಚ್ ಫಿಕ್ಸಿಂಗ್‌ನಿಂದ ಹಿಡಿದು ಆಟಗಾರರ ನಡುವಿನ ಘರ್ಷಣೆಯವರೆಗೆ, ಐಪಿಎಲ್‌ನಲ್ಲಿ ಅನೇಕ ವಿವಾದಗಳಿವೆ. ಈ ವರ್ಷದ ಐಪಿಎಲ್​ ಸೀಸನ್​ನಲ್ಲೂ ಕೂಡ ಒಂದು ವಿಷಯವನ್ನು ಚೆನ್ನಾಗಿ ಚರ್ಚಿಸಲಾಯಿತು. ಅದೇನೆಂದರೆ, ಲಕ್ನೋ ಸೂಪರ್‌ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಅವರನ್ನು ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ಕ್ರೀಡಾಂಗಣದಲ್ಲೇ ಎಲ್ಲರ ಮುಂದೆ ನಿಂದಿಸಿದ್ದರು. ತಂಡದ ಸೋಲನ್ನು ಸಹಿಸದ ಗೋಯೆಂಕಾ ಎಲ್ಲರ ಸಮ್ಮುಖದಲ್ಲಿ ರಾಹುಲ್​ರನ್ನು ಬೈದಿದ್ದರು. ಇದು ವಿವಾದದ ಸ್ವರೂಪ ಪಡೆದುಕೊಂಡು ಗೋಯೆಂಕಾ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾದವು.

    ಓರ್ವ ಸ್ಟಾರ್​ ಆಟಗಾರನನ್ನು ಈ ರೀತಿ ನಡೆಸಿಕೊಳ್ಳುತ್ತಾರಾ ಎಂದು ನೆಟಿಜನ್‌ಗಳು ಜಾಲತಾಣಗಳಲ್ಲಿ ಗೋಯೆಂಕಾ ಅವರನ್ನು ಟ್ರೋಲ್ ಮಾಡಿದ್ದರು. ಭಾರತ ತಂಡಕ್ಕೆ ಅಭೂತಪೂರ್ವ ಸೇವೆ ನೀಡಿದ ಅಂತಾರಾಷ್ಟ್ರೀಯ ಆಟಗಾರನನ್ನು ಅವಮಾನಿಸುವುದು ಸರಿಯಲ್ಲ ಎಂದು ಲಖನೌ ಮಾಲೀಕ ಗೋಯೆಂಕಾ ಮೇಲೆ ಕಿಡಿಕಾರಿದ್ದರು. ಈ ವಿವಾದದ ಹಿನ್ನಲೆಯಲ್ಲಿ ನ್ಯೂಜಿಲೆಂಡ್ ಲೆಜೆಂಡ್ ರಾಸ್ ಟೇಲರ್ ಇದೀಗ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಆ ಸಮಯದಲ್ಲಿ ಐಪಿಎಲ್ ತಂಡದ ಮಾಲೀಕರು ತನ್ನ ಮೇಲೆ ಹಲ್ಲೆ ಮಾಡಿದರು ಎಂದು ಟೇಲರ್ ಬಹಿರಂಗಪಡಿಸಿದ್ದಾರೆ. ಈ ಘಟನೆ ನಡೆದಿದ್ದು 2011ರ ಐಪಿಎಲ್​ ಸೀಸನ್​ನಲ್ಲಿ ಎಂದಿದ್ದಾರೆ. ಟೇಲರ್‌ ಮೇಲೆ ಕೈ ಮಾಡಿದ ಮಾಲೀಕರು ಬೇರೆ ಯಾರೂ ಅಲ್ಲ, ರಾಜಸ್ಥಾನ ರಾಯಲ್ಸ್‌ನ ಮಾಜಿ ಸಹ-ಮಾಲೀಕ ಹಾಗೂ ಬಾಲಿವುಡ್​ ಬ್ಯೂಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ.

    ಕೆಎಲ್ ರಾಹುಲ್ ಅವರನ್ನು ಅವರ ತಂಡದ ಮಾಲೀಕರು ನಿಂದಿಸಿದ್ದರು. ಇದು ಸರಿಯಲ್ಲ. ಇಂತಹ ವಿಷಯಗಳನ್ನು ಸಹಿಸಲು ಸಾಧ್ಯವಿಲ್ಲ. ಆದರೆ, ನನ್ನ ಮೇಲೆ ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕರು ಕೈ ಮಾಡಿದ್ದರು. ರಾಸ್.. ನಿಮಗೆ ಡಕ್ ಔಟ್ ಆಗಲು ಮಿಲಿಯನ್ ಡಾಲರ್ ನೀಡುತ್ತಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೆ, ಒಂದಲ್ಲ, ಎರಡಲ್ಲ, ನಾಲ್ಕೈದು ಬಾರಿ ಮುಖಕ್ಕೆ ಬಾರಿಸಿದರು ಎಂದು ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ರಾಸ್ ಟೇಲರ್ ಐಪಿಎಲ್​ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ.

    ಮೊಹಾಲಿಯಲ್ಲಿ ಕಿಂಗ್ಸ್ XI ಪಂಜಾಬ್ ವಿರುದ್ಧದ ಸೋತ ಬಳಿಕ ರಾಜ್​ ಕುಂದ್ರಾ ಕಪಾಳಮೋಕ್ಷ ಮಾಡಿದರು ಎಂದು ಹೆಸರೇಳದೆ ತನ್ನ ಆತ್ಮಚರಿತ್ರೆ, “ರಾಸ್ ಟೇಲರ್: ಬ್ಲ್ಯಾಕ್ & ವೈಟ್” ನಲ್ಲಿ ಟೇಲರ್​ ಬಹಿರಂಗಪಡಿಸಿದ್ದಾರೆ. ನನಗೆ ಹೊಡೆದಿದ್ದಲ್ಲದೆ, ಅಪಹಾಸ್ಯ ಮಾಡಿದರು ಎಂದು ರಾಸ್ ಟೇಲರ್ ಹೇಳಿದ್ದಾರೆ. ಇದೀಗ ರಾಸ್​ ಟೇಲರ್​ ಕಾಮೆಂಟ್‌ಗಳನ್ನು ಕೇಳಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು, ಇಂತಹ ವಿಷಯಗಳನ್ನು ನಿರ್ಲಕ್ಷಿಸಬಾರದು ಎಂದಿದ್ದಾರೆ.

    ಅಂದಹಾಗೆ 2013ರ ಐಪಿಎಲ್ ಸೀಸನ್‌ನಲ್ಲಿ ಅಕ್ರಮ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಸುಪ್ರೀಂ ಕೋರ್ಟ್ ನೇಮಿಸಿದ ಆರ್‌ಎಂ ಲೋಧಾ ಸಮಿತಿಯಿಂದ ಅಪರಾಧ ಸಾಬೀತಾಗಿದ್ದಕ್ಕೆ, 2015ರಲ್ಲಿ ರಾಜಸ್ಥಾನ ರಾಯಲ್ಸ್ ಸಹ-ಮಾಲೀಕ ರಾಜ್ ಕುಂದ್ರಾ ಅವರನ್ನು ಕ್ರಿಕೆಟ್ ಚಟುವಟಿಕೆಗಳಿಂದ ಆಜೀವ ನಿಷೇಧಕ್ಕೆ ಒಳಪಡಿಸಲಾಯಿತು. ಅಲ್ಲದೆ, ಈ ಸಮಿತಿಯು ರಾಯಲ್ಸ್ ತಂಡವನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಿತು. (ಏಜೆನ್ಸೀಸ್​)

    ಎಸ್​ಆರ್​ಎಚ್​ ವಿರುದ್ಧ ಹೀನಾಯ ಸೋಲು! ಸ್ಟೇಡಿಯಂನಲ್ಲೇ ರಾಹುಲ್​ ವಿರುದ್ಧ ಎಲ್​ಎಸ್​ಜಿ ಮಾಲೀಕ ಆಕ್ರೋಶ

    ನಿನಗೆ 400 ಕೋಟಿ ರೂ. ಸಾಕಲ್ಲವೇ? ರಾಹುಲ್​ರನ್ನು ಬೈದ LSG ಮಾಲೀಕನಿಗೆ ವೀರೂ ತರಾಟೆ!

    ಐಪಿಎಲ್​ನಿಂದ ಮೌಲ್ಯ ಕಳೆದುಕೊಳ್ಳುತ್ತಿರುವ ಕ್ರಿಕೆಟಿಗರು! ರಾಹುಲ್​ ಘಟನೆಗಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts