More

    ಸುಹಾನಾಳ ಜತೆ ಡೇಟಿಂಗ್​ ಮಾಡಲು 7 ಷರತ್ತುಗಳನ್ನಿಟ್ಟ ಎಸ್​ಆರ್​ಕೆ! ಬಾಯ್​ಫ್ರೆಂಡ್​ ಕತೆ ಅಷ್ಟೇ ಅಂದ್ರು ನೆಟ್ಟಿಗರು

    ಮುಂಬೈ: ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ಓರ್ವ ಉತ್ತಮ ನಟ ಮಾತ್ರವಲ್ಲ ಫ್ಯಾಮಿಲಿ ಮ್ಯಾನ್​ ಕೂಡ ಹೌದು. ಸಮಯ ಸಿಕ್ಕಾಗಲೆಲ್ಲ ಕುಟುಂಬದ ಜತೆ ಹೆಚ್ಚು ಸಮಯ ಕಳೆಯುವ ಶಾರುಖ್​, ಆದರ್ಶ ಗಂಡ ಮಾತ್ರವಲ್ಲದೆ ಒಳ್ಳೆಯ ತಂದೆಯೂ ಕೂಡ. ಮಕ್ಕಳೆಂದರೆ ಶಾರುಖ್​ಗೆ ತುಂಬಾ ಪ್ರೀತಿ. ಅದರಲ್ಲೂ ತಮ್ಮ ಮಗಳು ಸುಹಾನಾ ಖಾನ್ ಅಂದರೆ ಪಂಚ ಪ್ರಾಣ.

    ತಂದೆ-ಮಗಳು ಇಬ್ಬರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಮಗಳ ಬಗ್ಗೆ ತುಂಬಾ ಕಾಳಜಿ ವಹಿಸುವ ಶಾರುಖ್​, ತನ್ನ ಮಗಳನ್ನು ಡೇಟ್​ ಮಾಡುವ ಅಥವಾ ಪ್ರೀತಿಸುವ ವ್ಯಕ್ತಿಗೆ 7 ಷರತ್ತುಗಳನ್ನು ಹಾಕಿದ್ದಾರೆ. ಈ 7 ನಿಯಮಗಳನ್ನು ಪಾಲಿಸಿದ್ರೆ ಮಾತ್ರ ಸುಹಾನಾ ಜತೆ ಡೇಟಿಂಗ್​ ಮಾಡಬಹುದು ಎಂದು ಶಾರುಖ್​ ಹೇಳಿದ್ದಾರೆ.

    ಅಂದಹಾಗೆ ಸುಹಾನಾಗೆ ಈಗ 24 ವರ್ಷ. ಮೇ 22ರಂದು 24ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದರ ನಡುವೆ ಫೆಮಿನಾ ಮ್ಯಾಗಜಿನ್​ಗೆ ನೀಡಿದ್ದ ಹಳೆಯ ಸಂದರ್ಶನ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ಸಂದರ್ಶನದಲ್ಲಿ ಶಾರುಖ್​, ತಮ್ಮ ಮಗಳ ಭವಿಷ್ಯದ ಬಾಯ್​ಫ್ರೆಂಡ್​ಗೆ 7 ಷರತ್ತುಗಳನ್ನು ಹಾಕಿದ್ದರು.

    ಸುಹಾನಾ ಅವರ ಬಾಯ್​ಫ್ರೆಂಡ್​ ಆಗಲು ಶಾರುಖ್ ಹಾಕಿದ 7 ನಿಯಮಗಳು ಈ ಕೆಳಕಂಡಂತಿವೆ:
    1. ಉದ್ಯೋಗ: ಶಾರುಖ್​ ಅವರು ಮಹತ್ವಾಕಾಂಕ್ಷೆಯ ವ್ಯಕ್ತಿತ್ವವನ್ನು ಗೌರವಿಸುತ್ತಾರೆ. ಸುಹಾನಾಳ ಬಾಯ್​ಫ್ರೆಂಡ್​ ಸ್ಪಷ್ಟ ಗುರಿಗಳನ್ನು ಹೊಂದಲು ಮತ್ತು ಅವರ ವೈಯಕ್ತಿಕ ಬೆಳವಣಿಗೆಗೆ ಬದ್ಧರಾಗಿರುವುದನ್ನು ನಿರೀಕ್ಷಿಸುತ್ತಾರೆ. ಹೀಗಾಗಿ ಆಕೆಯ ಬಾಯ್​ಫ್ರೆಂಡ್​ ಒಳ್ಳೆಯ ಉದ್ಯೋಗದಲ್ಲಿ ಇರಬೇಕು.

    2. ನಾನು ನಿನ್ನನ್ನು ಇಷ್ಟಪಡುವುದಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು: ಕುಟುಂಬದಲ್ಲಿ ತನ್ನದೇ ಆದ ಸ್ಥಾನವನ್ನು ಕಲ್ಪಿಸುವುದು ಮತ್ತು ಕುಟುಂಬದ ಮಹತ್ವವನ್ನು ಸುಹಾನಾ ಬಾಯ್​ಫ್ರೆಂಡ್​ ಅರ್ಥಮಾಡಿಕೊಂಡಿರಬೇಕು.

    3. ನಾನು ಎಲ್ಲೆಡೆ ಇದ್ದೇನೆ: ಎಸ್‌ಆರ್‌ಕೆ ಧೈರ್ಯವನ್ನು ನಂಬುತ್ತಾರೆ ಮತ್ತು ಸುಹಾನಾಳ ಗೆಳೆಯನು ದಯೆ ಮತ್ತು ಸೌಜನ್ಯವನ್ನು ಪ್ರದರ್ಶಿಸುವ ಸಂಭಾವಿತ ವ್ಯಕ್ತಿಯಾಗಬೇಕೆಂದು ನಿರೀಕ್ಷಿಸುತ್ತಾರೆ.

    4. ಜತೆಯಲ್ಲಿ ವಕೀಲನಿರಬೇಕು: ತಿಳುವಳಿಕೆ ಮತ್ತು ಪರಸ್ಪರ ಗೌರವವು ಯಾವುದೇ ಸಂಬಂಧದ ತಿರುಳಾಗಿದೆ. ಇದಕ್ಕೆ ವಿರುದ್ಧವಾಗಿ ನಡೆದರೆ ಏನು ಬೇಕಾದರೂ ನಡೆಯಬಹುದು ಮತ್ತು ನ್ಯಾಯಾಲಯದ ಕಟಕಟೆಯನ್ನು ಸಹ ಏರಬೇಕಾಗುತ್ತದೆ ಎನ್ನುವ ಮೂಲಕ ಹಾಸ್ಯಚಟಾಕಿ ಹಾರಿಸಿದ್ದಾರೆ.

    5. ಆಕೆ ನನ್ನ ರಾಜಕುಮಾರಿ, ನಿನ್ನ ವಶವಲ್ಲ: ಸುಹಾನಾಳನ್ನು ಗೌರವಿಸುವ ಮತ್ತು ಎಲ್ಲಾ ಸಮಯದಲ್ಲೂ ಆಕೆಯನ್ನು ಅತ್ಯಂತ ಘನತೆಯಿಂದ ನಡೆಸಿಕೊಳ್ಳುವ ಮಹತ್ವವನ್ನು ಶಾರುಖ್​ ಒತ್ತಿ ಹೇಳಿದ್ದಾರೆ.

    6. ಜೈಲಿಗೆ ಹೋಗುವುದಕ್ಕೂ ಹಿಂಜರಿಯಲ್ಲ: ತನ್ನ ಮಗಳೊಂದಿಗಿನ ಎಲ್ಲ ವ್ಯವಹಾರಗಳಲ್ಲಿಯೂ ಆಕೆಯ ಬಾಯ್​ಫ್ರೆಂಡ್​ನಿಂದ ಪಾರದರ್ಶಕತೆಯನ್ನು ಶಾರುಖ್​ ನಿರೀಕ್ಷಿಸುತ್ತಾರೆ. ಸುಹಾನಾಗೆ ನೋವು ಮಾಡಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಮತ್ತು ಜೈಲಿಗೂ ಹೋಗಲು ಸಿದ್ಧ ಎಂದು ಶಾರುಖ್​ ಹೇಳಿದ್ದಾರೆ.

    7. ನೀನು ಅವಳಿಗೆ ಏನೇ ಮಾಡಿದರೂ ನಾನು ನಿನಗೆ ಅದನ್ನೇ ಮಾಡುತ್ತೇನೆ: ಇದರ ಅರ್ಥವೇನೆಂದರೆ, ಶಾರೀರಿಕ ಅಥವಾ ಭಾವನಾತ್ಮಕವಾಗಿ ಯಾವುದೇ ರೀತಿಯ ಹಾನಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂಬುದಾಗಿದೆ. ಮಗಳಿಗೆ ಏನೇ ತೊಂದರೆಯಾದರೂ ಅದು ನಿನಗೂ ಆಗುತ್ತದೆ ಎಂಬುದನ್ನು ಶಾರುಖ್​ ನಿಯಮವಾಗಿದೆ.

    ಈ ಎಲ್ಲ ನಿಯಮಗಳು ಸುಹಾನಾ ಕಡೆಗೆ ಶಾರುಖ್ ಅವರ ಕಾಳಜಿ ಮತ್ತು ರಕ್ಷಣಾತ್ಮಕ ಸ್ವಭಾವವನ್ನು ಪ್ರತಿಬಿಂಬಿಸುತ್ತವೆ. ಆಕೆ ಗೌರವ, ಪ್ರಾಮಾಣಿಕತೆ ಮತ್ತು ನಿಜವಾದ ಪ್ರೀತಿಯನ್ನು ಹೊಂದಬೇಕೆಂಬುದನ್ನು ಇದು ಖಚಿತಪಡಿಸುತ್ತದೆ. ಆದರೆ, ಇಷ್ಟೊಂದು ನಿಯಮಗಳನ್ನು ನೋಡಿ ಸುಹಾನಾಳ ಬಾಯ್​ಫ್ರೆಂಡ್​ ಕತೆ ಅಷ್ಟೇ ಎಂದು ಟ್ರೋಲ್​ ಮಾಡುತ್ತಿದ್ದಾರೆ.

    ಸಿನಿಮಾ ವಿಚಾರಕ್ಕೆ ಬಂದರೆ, ತಂದೆ-ಮಗಳ ಜೋಡಿಯು ಮುಂದಿನ ಆಕ್ಷನ್ ಥ್ರಿಲ್ಲರ್ ಚಲನಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಈ ಸಿನಿಮಾಗೆ ದಿ ಕಿಂಗ್ ಎಂದು ಹೆಸರಿಸಲಾಗಿದೆ. ಇದನ್ನು ಸುಜೋಯ್ ಘೋಷ್ ನಿರ್ದೇಶಿಸಲಿದ್ದಾರೆ. ವರದಿಗಳ ಪ್ರಕಾರ ಚಿತ್ರದ ಬಜೆಟ್ 200 ಕೋಟಿ. (ಏಜೆನ್ಸೀಸ್​)

    RCB ಫ್ಯಾನ್ಸ್​ ಅಹಂಕಾರವೇ ಸೋಲಿಗೆ ಕಾರಣ, ಬಾಯಿ ಮುಚ್ಕೊಂಡಿದ್ರೆ ಒಳ್ಳೆಯದು ಅಂದ್ರು ಮಾಜಿ ಸ್ಟಾರ್ ಕ್ರಿಕೆಟಿಗ!​

    ಇದೇ ಮೊದಲ ಬಾರಿಗೆ ತಮ್ಮ ಲವ್​ ಸ್ಟೋರಿ ಹೇಳಿದ್ರು ಸಿಎಂ ಸಿದ್ದು: ಈ ಕಾರಣಕ್ಕೆ ಲವ್​ ಫೇಲ್ಯೂರ್​ ಆಯ್ತಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts