More

    ಇದೇ ಮೊದಲ ಬಾರಿಗೆ ತಮ್ಮ ಲವ್​ ಸ್ಟೋರಿ ಹೇಳಿದ್ರು ಸಿಎಂ ಸಿದ್ದು: ಈ ಕಾರಣಕ್ಕೆ ಲವ್​ ಫೇಲ್ಯೂರ್​ ಆಯ್ತಂತೆ!

    ಬೆಂಗಳೂರು: ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ಲವ್​ ಸ್ಟೋರಿ ಇದ್ದೇ ಇರುತ್ತದೆ. ಕೆಲವರ ಲವ್​ ಸಕ್ಸಸ್​ ಆದರೆ ಕೆಲವರದ್ದು ಫೇಲ್ಯೂರ್​ ಆಗುತ್ತದೆ. ಇನ್ನು ಕೆಲವರದ್ದೂ ಒನ್​ ಸೈಡ್​ ಲವ್​ ಆಗಿರುತ್ತದೆ. ಕೆಲವು ವಿಶೇಷ ಸಂದರ್ಭಗಳು ಬಂದಾಗ ತಮ್ಮ ಜೀವನದ ಪ್ರೀತಿಯ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತೇವೆ. ಅದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ತಮ್ಮ ಲವ್​ ಸ್ಟೋರಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.

    ಮೈಸೂರಿನಲ್ಲಿ ಜನ ಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೆಬ್‌ಸೈಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡುವ ವೇಳೆ ಸಿಎಂ ಸಿದ್ದರಾಮಯ್ಯ ಅವರ ತಮ್ಮ ಲವ್​ ಸ್ಟೋರಿಯನ್ನು ಮೊದಲ ಬಾರಿಗೆ ಹೇಳಿದ್ದಾರೆ.

    ಅಂತರ್ಜಾತಿ ವಿವಾಹಗಳು ಹೆಚ್ಚೆಚ್ಚು ಆಗಲು ನಾವು ಪ್ರೋತ್ಸಾಹ ನೀಡಬೇಕು. ನಾನು ಕೂಡ ಅಂತರ್ಜಾತಿ ವಿವಾಹ ಮಾಡಿಕೊಳ್ಳಬೇಕೆಂದು ಅಂದುಕೊಂಡಿದ್ದೆ. ಆದರೆ, ಅದು ಆಗಲಿಲ್ಲ. ನನ್ನನ್ನು ಹುಡುಗಿಯೇ ಒಪ್ಪಲಿಲ್ಲ. ನಾನು ಕಾನೂನು ಪದವಿ ಮಾಡುವಾಗ ಒಂದು ಹುಡುಗಿಯ ಜತೆ ಸ್ನೇಹ ಮಾಡಿಕೊಂಡಿದ್ದೆ. ಸ್ನೇಹ ಅಂದ್ರೆ ಬೇರೆ ಯಾವುದೇ ಅರ್ಥ ತಿಳಿದುಕೊಳ್ಳಬೇಡಿ. ನಮ್ಮಿಬ್ಬರ ನಡುವೆ ಸ್ನೇಹ ಇತ್ತು ಮತ್ತು ಮದುವೆ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿದ್ದೆ. ಆದರೆ, ಹುಡುಗಿ ಮನೆಯವರು ಒಪ್ಪಲಿಲ್ಲ. ಅಷ್ಟೇ ಯಾಕೆ ಹುಡುಗಿಯೂ ಒಪ್ಪಲಿಲ್ಲ ಮತ್ತು ನಾನು ಕೂಡ ಮದುವೆ ಆಗಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ವೇಳೆ ಅಲ್ಲಿದ್ದವರೆಲ್ಲ ನಗೆಗಡಲಲ್ಲಿ ತೇಲಿದರು.

    ಕೊನೆಗೆ ನಮ್ಮ ಜಾತಿಯವರನ್ನೇ ಮದುವೆ ಆಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇದೀಗ ನಮ್ಮ ಜಾತಿಯವರನ್ನೇ ಮದುವೆಯಾಗಿದ್ದೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಎಷ್ಟರಮಟ್ಟಿಗೆ ನೈತಿಕತೆ ಇದೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ನನ್ನ ಸಂಪೂರ್ಣ ಬೆಂಬಲ ಅಂತರ್ಜಾತಿ ಮದುವೆಗಳಿಗೆ ಇದೆ. ಇದರ ಜತೆಗೆ ಅದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ಮತ್ತು ಸಹಾಯವನ್ನು ಮಾಡುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

    ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ ಇದೆ. ಅದು ಹೋಗಬೇಕಿದೆ. ನಮ್ಮ ಜಾತಿ ವ್ಯವಸ್ಥೆ ಹೇಗಿದೆ ಅಂದರೆ, ಗಟ್ಟಿಯಾಗಿ ಬೇರು ಬಿಟ್ಟಿದೆ. ಯಾವ ಸಮಾಜಕ್ಕೆ ಆರ್ಥಿಕ, ಸಾಮಾಜಿಕ ಚಟುವಟಿಕೆಗಳು ಇರುವುದಿಲ್ಲವೋ ಅಂತಹ ಸಮಾಜದಲ್ಲಿ ಚಲನೆ ಕಡಿಮೆ ಇರುತ್ತದೆ. ಹಾಗಾಗಿ ಅನೇಕ ಸುಧಾರಕರು ಸಮಸಮಾಜ ಮಾಡಬೇಕೆಂದು ಪ್ರಯತ್ನಪಟ್ಟರೂ ಕೂಡ ಅದು ಸಂಪೂರ್ಣ ಯಶಸ್ವಿಯಾಗಿಲ್ಲ ಎಂಬುದನ್ನು ನಾವಿಂದು ಸಮಾಜದಲ್ಲಿ ಗಮನಿಸಬಹುದು. ಬಸವಣ್ಣ ಹಾಗೂ ಬುದ್ಧನ ಕಾಲದಿಂದಲೂ ಇದೆಲ್ಲ ನಡೆಯುತ್ತಲೇ ಇದೆ. ಎಲ್ಲರಿಗೂ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಾಗಲೇ ಬದಲಾವಣೆಯಾಗಲು ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು.

    RCB ಫ್ಯಾನ್ಸ್​ ಅಹಂಕಾರವೇ ಸೋಲಿಗೆ ಕಾರಣ, ಬಾಯಿ ಮುಚ್ಕೊಂಡಿದ್ರೆ ಒಳ್ಳೆಯದು ಅಂದ್ರು ಮಾಜಿ ಸ್ಟಾರ್ ಕ್ರಿಕೆಟಿಗ!​

    ಒಂದಲ್ಲ ಎರಡಲ್ಲ 4 ಬಾರಿ… ಶಿಲ್ಪಾ ಶೆಟ್ಟಿ ಪತಿ ರಾಜ್​ಕುಂದ್ರಾ ವಿರುದ್ಧ ಗಂಭೀರ ಆರೋಪ ಮಾಡಿದ ರಾಸ್ ಟೇಲರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts