More

    RCB ಫ್ಯಾನ್ಸ್​ ಅಹಂಕಾರವೇ ಸೋಲಿಗೆ ಕಾರಣ, ಬಾಯಿ ಮುಚ್ಕೊಂಡಿದ್ರೆ ಒಳ್ಳೆಯದು ಅಂದ್ರು ಮಾಜಿ ಸ್ಟಾರ್ ಕ್ರಿಕೆಟಿಗ!​

    ನವದೆಹಲಿ: ಪ್ರಸಕ್ತ ಐಪಿಎಲ್​ ಸೀಸನ್​ನಲ್ಲೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕಪ್​ ಗೆಲ್ಲುವ ಕನಸು ಭಗ್ನವಾಗಿದೆ. ಮೇ 22ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ರಾಜಸ್ಥಾನ ರಾಯಲ್ಸ್​ 4 ವಿಕೆಟ್‌ಗಳಿಂದ ಜಯಗಳಿಸಿತು. ಈ ಸೋಲಿನೊಂದಿಗೆ ಈ ಸೀಸನ್​ನಲ್ಲಿ ಆರ್​ಸಿಬಿ ಆಳ್ವಿಕೆ ಅಂತ್ಯಗೊಂಡಿದೆ.

    ಆರ್​ಸಿಬಿ ಸೋಲಿನ ಬೆನ್ನಲ್ಲೇ ಮಾಜಿ ಕ್ರಿಕೆಟಿಗರು ಸೇರಿದಂತೆ ಕೆಲವರು ಎಂದಿನಂತೆ ಆರ್​ಸಿಬಿ ವಿರುದ್ಧ ಟೀಕಾ ಪ್ರಹಾರಗಳನ್ನು ನಡೆಸುತ್ತಿದ್ದಾರೆ. ಇದೀಗ ಟೀಮ್​ ಇಂಡಿಯಾದ ಲೆಜೆಂಡರಿ ಕ್ರಿಕೆಟಿಗ ಕ್ರಿಶ್​ ಶ್ರೀಕಾಂತ್​ ಆಡಿರುವ ಮಾತುಗಳು ಆರ್​ಸಿಬಿ ಅಭಿಮಾನಿಗಳ ಅತೀವ ಕೋಪಕ್ಕೆ ಕಾರಣವಾಗಿದೆ.

    ಲೀಗ್​ ಹಂತದ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಮಣಿಸಿ ಆರ್​ಸಿಬಿ ಪ್ಲೇಆಫ್​ ಪ್ರವೇಶ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಪಂದ್ಯದಲ್ಲಿ ಗೆಲುವಿನ ಬೆನ್ನಲ್ಲೇ ಆರ್​ಸಿಬಿ ಸಂಭ್ರಮಾಚರಣೆ ಮಾಡಿತ್ತು. ಇದನ್ನೇ ಮುಂದಿಟ್ಟುಕೊಂಡು ತಮಿಳುನಾಡು ಮೂಲದ ಹಿರಿಯ ಕ್ರಿಕೆಟಿಗ ಶ್ರೀಕಾಂತ್​ ಆರ್​ಸಿಬಿ ಹಾಗೂ ಅಭಿಮಾನಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಸಿಎಸ್‌ಕೆಯನ್ನು ಸೋಲಿಸಿದ ನಂತರ ಆರ್‌ಸಿಬಿ ತುಂಬಾ ಸಂಭ್ರಮಿಸಿತು ಎಂದಿರುವ ಶ್ರೀಕಾಂತ್, ಯಶಸ್ಸನ್ನು ಆನಂದಿಸುತ್ತಿರುವಾಗ ಮೌನವಾಗಿರಲು ಸಲಹೆ ನೀಡಿದ್ದಾರೆ.

    ನೀವು ಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ ನಿಮ್ಮ ಬಾಯಿಯನ್ನು ಮುಚ್ಚಿಕೊಂಡು, ಸುಮ್ಮನೇ ಮುಂದುವರಿಯಬೇಕು. ನೀವು ಮಾಡುವ ಯಾವುದೇ ಕೆಲಸದಲ್ಲಿ ಅತಿಯಾಗಿ ವರ್ತಿಸಿದರೆ ಅಥವಾ ಶಬ್ಧ ಮಾಡಿದರೆ ಆ ಕೆಲಸವನ್ನು ನಿಮ್ಮಿಂದ ಮಾಡಲು ಸಾಧ್ಯವಿಲ್ಲ. ಸಿಎಸ್​ಕೆ ವಿರುದ್ಧದ ಗೆಲುವಿನ ಬಳಿಕ ಆರ್​ಸಿಬಿ ಅಭಿಮಾನಿಗಳು ಅನಗತ್ಯ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು ಮತ್ತು ಹೆಚ್ಚೆಚ್ಚು ಗರ್ವ ಪ್ರದರ್ಶಿಸುತ್ತಿದ್ದರು. ಹೀಗಾಗಿಯೇ ಪ್ಲೇಆಫ್​ನಲ್ಲಿ ಆರ್​ಸಿಬಿ ಹೊರಬಿದ್ದಿದೆ. ನೀವು ಕ್ರಿಕೆಟ್‌ ಆಡುವಾಗ ನಿಮ್ಮ ಬಾಯಿಯನ್ನು ಮುಚ್ಚಿಕೊಂಡು ಆಡಬೇಕು ಎಂದಿದ್ದಾರೆ.

    ನೀವು ಚೆನ್ನಾಗಿ ಆಡಿದ್ದರೆ, ಅಭಿನಂದನೆಗಳು ಮತ್ತು ನೀವು ಕಳಪೆಯಾಗಿ ಆಡಿದರೆ ಟೀಕೆಗಳನ್ನು ಸ್ವೀಕರಿಸಿ. ಆದರೆ, ನೀವು ಎಂದಿಗೂ ಬಾಯಿ ತೆರೆದು ಆಕ್ರಮಣವನ್ನು ತೋರಿಸಬಾರದು. ಪ್ಲೇಆಫ್​ಗೆ ಅರ್ಹತೆ ಪಡೆದಿದ್ದಕ್ಕಾಗಿ ಮತ್ತು ಸೋಲಿನಿಂದ ಪುಟಿದೆದ್ದರಿಂದ ತಮ್ಮನ್ನು ತಾವೇ ಅಭಿನಂದಿಸಿಕೊಂಡರು. ಸಿಎಸ್​ಕೆ ಮತ್ತು ಮುಂಬೈ ಎಂದಿಗೂ ಈ ರೀತಿ ಮಾಡಲಿಲ್ಲ. ಎರಡೂ ತಂಡಗಳು ಎಲ್ಲಿಂದಲೋ ಬಂದು ಪ್ರಶಸ್ತಿಗಳನ್ನು ಗೆದ್ದಿವೆ. ಈ ಹುಡುಗರು ಆರು ಪಂದ್ಯಗಳನ್ನು ಗೆದ್ದರು ಮತ್ತು ಅವರು ಅರ್ಹತೆ ಪಡೆದ ತಕ್ಷಣವೇ ನಾಕ್ಔಟ್ ಆದರು ಎಂದು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಶ್ರೀಕಾಂತ್ ಹೇಳಿದರು.

    ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ, ನಿರಂತರ ವಿಕೆಟ್ ಕಳೆದುಕೊಂಡರೂ ರಜತ್ ಪಾಟೀದಾರ್ (34 ರನ್, 22 ಎಸೆತ, 2 ಬೌಂಡರಿ, 2 ಸಿಕ್ಸರ್),ವಿರಾಟ್ ಕೊಹ್ಲಿ (33 ರನ್, 24 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ಮಹಿಪಾಲ್ ಲೊಮ್ರೊರ್ (32 ರನ್, 17 ಎಸೆತ, 2 ಬೌಂಡರಿ, 2 ಸಿಕ್ಸರ್) ಸಂಘಟಿತ ಬ್ಯಾಟಿಂಗ್​ನೊಂದಿಗೆ 8 ವಿಕೆಟ್​ಗೆ 172 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಯಶಸ್ವಿ ಜೈಸ್ವಾಲ್ (45 ರನ್, 30 ಎಸೆತ, 8 ಬೌಂಡರಿ) ಹಾಗೂ ರಿಯಾನ್ ಪರಾಗ್ (36 ರನ್, 26 ಎಸೆತ, 2 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 19 ಓವರ್​ಗಳಲ್ಲಿ 6 ವಿಕೆಟ್​ಗೆ 174 ರನ್​ಗಳಿಸಿ ರೋಚಕ ಗೆಲುವು ಕಂಡಿತು. ಸಂಜು ಸ್ಯಾಮ್ಸನ್ ಪಡೆ ಶುಕ್ರವಾರ ನಡೆಯಲಿರುವ ‘ಸೆಮಿಫೈನಲ್’ ಮಾದರಿಯ ಎರಡನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆದಿದ್ದು, ಪ್ರಶಸ್ತಿ ಸುತ್ತಿಗೇರಲು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ. (ಏಜೆನ್ಸೀಸ್​)

    ರೇವ್​ ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಎನ್ನುತ್ತಿರುವ ನಟಿ ಹೇಮಾಗೆ ಬಿಗ್​ ಶಾಕ್​! ಮತ್ತೊಂದು ಸಾಕ್ಷಿ ಬಹಿರಂಗ

    ನೀವು ಸಹ ಹೀಗೇನಾ? ನಿಮ್ಮಿಬ್ಬರಿಂದ ಇದನ್ನು ನಿರೀಕ್ಷಿಸಿರಲಿಲ್ಲ! ಸಿಎಸ್​ಕೆ ಆಟಗಾರರ ವಿರುದ್ಧ ಆರ್​ಸಿಬಿ ಫ್ಯಾನ್ಸ್​ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts