More

    ರೇವ್​ ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಎನ್ನುತ್ತಿರುವ ನಟಿ ಹೇಮಾಗೆ ಬಿಗ್​ ಶಾಕ್​! ಮತ್ತೊಂದು ಸಾಕ್ಷಿ ಬಹಿರಂಗ

    ಹೈದರಾಬಾದ್​: ಟಾಲಿವುಡ್​ ಅಂಗಳದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಬೆಂಗಳೂರು ರೇವ್ ಪಾರ್ಟಿ ಪ್ರಕರಣ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಬರ್ತಡೇ ಪಾರ್ಟಿ ಹೆಸರಿನಲ್ಲಿ ಆಯೋಜಿಸಿದ್ದ ರೇವ್ ಪಾರ್ಟಿಯಲ್ಲಿ ಟಾಲಿವುಡ್​ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಹೀಗಾಗಿ ತೆಲುಗು ರಾಜ್ಯಗಳಲ್ಲಿ ಈ ಸುದ್ದಿ ಸಖತ್​ ಸದ್ದು ಮಾಡುತ್ತಿದೆ.

    ರೇವ್ ಪಾರ್ಟಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಎಲೆಕ್ಟ್ರಾನಿಕ್​ ಸಿಟಿಯ ಬಳಿ ಇರುವ ಜಿಆರ್ ಫಾರ್ಮ್ ಹೌಸ್​ ಮೇಲೆ ಸಿಸಿಬಿ ಅಧಿಕಾರಿಗಳು ಮೇ 20ರ ಸೋಮವಾರದಂದು​ ದಾಳಿ ಮಾಡಿದ್ದರು. ಈ ಹಲವರನ್ನು ಬಂಧಿಸಿ, ಅವರಿಂದ ರಕ್ತದ ಸ್ಯಾಂಪಲ್​​ಗಳು ಕಲೆಹಾಕಿದ್ದರು. ಈ ದಾಳಿ ವೇಳೆ ತೆಲುಗು ಚಿತ್ರರಂಗದ ಸೆಲೆಬ್ರಿಟಿಗಳು ಸಿಕ್ಕಿಬಿದ್ದಿರುವುದು ಕಂಡುಬಂದ ನಂತರ ಈ ಸುದ್ದಿ ವೈರಲ್​ ಆಯಿತು. ಅದರಲ್ಲೂ ಈ ರೇವ್ ಪಾರ್ಟಿ ಕೇಸ್ ಲಿಸ್ಟ್​ನಲ್ಲಿ ಟಾಲಿವುಡ್​ ನಟಿ ಹೇಮಾ ಇದ್ದಾರೆ ಎಂದು ಪೊಲೀಸರು ಘೋಷಿಸಿದ ಬಳಿಕ ಇನ್ನು ಹೆಚ್ಚಿನ ಗಮನ ಸೆಳೆಯಿತು. ನಟಿ ಹೇಮಾ ಕನ್ನಡದ ಪವರ್​ ಸಿನಿಮಾದಲ್ಲಿ ನಾಯಕಿಯ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

    ರೇವ್​ ಪಾರ್ಟಿಯಲ್ಲಿ ಸಿಕ್ಕಿಹಾಕಿಕೊಂಡ ಬೆನ್ನಲ್ಲೇ ವಿಡಿಯೋ ಹರಿಬಿಟ್ಟಿದ್ದ ಹೇಮಾ, ನಾನು ರೇವ್ ಪಾರ್ಟಿಗೆ ಹೋಗಿಲ್ಲ, ಹೈದರಾಬಾದ್​ನಲ್ಲೇ ಫಾರ್ಮ್ ಹೌಸ್​ನಲ್ಲಿದ್ದೇನೆ ಎಂದಿದ್ದರು. ಇದಾದ ನಂತರ ಬಿರಿಯಾನಿ ಅಡುಗೆ ಮಾಡುತ್ತಿರುವ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದರು. ಈ ವಿಡಿಯೋಗಳಿಗೆ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸರು, ಇದು ಪೊಲೀಸರು ಹಾಗೂ ಮಾಧ್ಯಮದವರನ್ನು ದಾರಿ ತಪ್ಪಿಸಲು ಬಿಡುಗಡೆ ಮಾಡಿರುವ ವಿಡಿಯೋ ಎಂದಿದ್ದರು. ತಾನು ಪಾರ್ಟಿಯಲ್ಲೇ ಭಾಗವಹಿಸಿಲ್ಲ ಎಂದಿದ್ದ ಹೇಮಾ ರಕ್ತದಲ್ಲಿ ಡ್ರಗ್ಸ್​ ಇರುವುದು ಪತ್ತೆಯಾಗಿದೆ. ಇದಿಷ್ಟೇ ಅಲ್ಲದೆ, ಇದೀಗ ಪ್ರಮುಖ ಮಾಧ್ಯಮ ಸಂಸ್ಥೆಯೊಂದು ಹೇಮಾ ರೇವ್ ಪಾರ್ಟಿಗೆ ಹೋಗಿದ್ದು ನಿಜ ಎಂದು ಘೋಷಿಸಿದೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಹ ಬಹಿರಂಗಪಡಿಸಿದೆ.

    ಅಂದಹಾಗೆ ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ 101 ಮಂದಿ ಭಾಗವಹಿಸಿದ್ದರು. ಇಷ್ಟು ಮಂದಿಯಲ್ಲಿ 85 ಮಂದಿ ಡ್ರಗ್ಸ್​ ಸೇವಿಸಿರುವುದು ರಕ್ತ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಈ ಲೀಸ್ಟ್​ನಲ್ಲಿ ನಟಿ ಹೇಮಾ ಕೂಡ ಇದ್ದಾರೆ. ರೇವ್ ಪಾರ್ಟಿಯಲ್ಲಿ ತನ್ನ ಹೆಸರನ್ನು ಕೃಷ್ಣವೇಣಿ ಎಂದು ಇಟ್ಟಿರುವುದು ಇದೀಗ ಬಹಿರಂಗವಾಗಿದೆ. ಬೆಂಗಳೂರು ರೇವ್ ಪಾರ್ಟಿಯಲ್ಲಿ ಹೇಮಾ ಭಾಗವಹಿಸಿದ್ದರು ಎಂಬುದಕ್ಕೆ ಪ್ರಮುಖ ಮಾಧ್ಯಮ ಸಂಸ್ಥೆ ಮತ್ತೊಂದು ದೃಢವಾದ ಸಾಕ್ಷ್ಯವನ್ನು ಬಹಿರಂಗಪಡಿಸಿದೆ.

    ಮಾಧ್ಯಮ ಸಂಸ್ಥೆಯು ಬಹಿರಂಗಪಡಿಸಿದ ವಿವರಗಳ ಪ್ರಕಾರ, ನಟಿ ಹೇಮಾ ಅವರು ಮೇ 18 ರಂದು (ಶನಿವಾರ) ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳಿದ್ದಾರೆ. ಹೇಮಾ ಶಂಶಾಬಾದ್ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1.55ಕ್ಕೆ ಬೆಂಗಳೂರಿಗೆ ತೆರಳಿದ್ದಾರೆ. ಹೇಮಾ ಜೊತೆಗೆ ಕಾಂತಿ, ರಾಜಶೇಖರ್ ಮತ್ತಿತರರು ಇದ್ದರು ಎಂದು ಇಂಡಿಗೋ 6ಇ-6305 ಬಹಿರಂಗಪಡಿಸಿದೆ. ಹೇಮಾ ಅವರ ಫ್ಲೈಟ್ ಟಿಕೆಟ್‌ನ ಪ್ರತಿ ತಮ್ಮ ಬಳಿ ಇದೆ ಎಂದು ಮಾಧ್ಯಮ ಸಂಸ್ಥೆ ಪ್ರಕಟಿಸಿದೆ. ಹೇಮಾ ಶನಿವಾರ ಮಧ್ಯಾಹ್ನ 3.15ಕ್ಕೆ ಬೆಂಗಳೂರು ತಲುಪಿದ್ದಾರೆ. ಅಲ್ಲಿಂದ ಹೇಮಾ ಮತ್ತು ಆಕೆಯ ಫ್ರೆಂಡ್ಸ್​ ಪಾರ್ಟಿ ನಡೆಯುತ್ತಿದ್ದ ರೆಸಾರ್ಟ್‌ಗೆ ತೆರಳಿರುವುದು ಇದೀಗ ಬಯಲಾಗಿದೆ.

    Hema Kolla

    ಏನಿದು ಪ್ರಕರಣ?
    ಮೇ 20ರ ಸೋಮವಾರ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜಿಆರ್ ಫಾರ್ಮ್ ಹೌಸ್​​ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಸೋಮವಾರ ನಸುಕಿನ ಜಾವದವರೆಗೆ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಕೇಂದ್ರ ಅಪರಾಧ ವಿಭಾಗದ (CCB) ಪೊಲೀಸರು ದಾಳಿ ನಡೆಸಿದ್ದರು .ಜಿ.ಆರ್. ಫಾರ್ಮ್‌ಹೌಸ್‌ನಲ್ಲಿ ಆಯೋಜನೆ ಮಾಡಿದ್ದ ಬರ್ತಡೇ ಪಾರ್ಟಿಗೆ ‘ಸನ್ ಸೆಟ್ ಟು ಸನ್ ರೈಸ್’ (sun set to sun rise party) ಥೀಮ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಡರಾತ್ರಿಯಾದರೂ ಸುಮಾರು 100ಕ್ಕೂ ಅಧಿಕ ಜನರು ಜೋರಾಗಿ ಡಿಜೆ ಹಾಕಿಕೊಂಡು ಫಾರ್ಮ್‌ಹೌಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿಸಿದ ಸಿಸಿಬಿ ಪೊಲೀಸರು ರಾತ್ರೋ ರಾತ್ರಿ ಫಾರ್ಮ್‌ಹೌಸ್‌ ಮೇಲೆ ದಾಳಿ ಮಾಡಿದ್ದರು. ಬರ್ತಡೇ ಹೆಸರಲ್ಲಿ ನಡೆಯುತ್ತಿದ್ದ ಡ್ರಗ್ಸ್ ಗಾಂಜಾ ಪಾರ್ಟಿ ಇದಾಗಿತ್ತು. ಮಾದಕ ವಸ್ತುಗಳಾದ ಎಂಡಿಎಂಎ ಮಾತ್ರೆಗಳು ಮತ್ತು ಕೊಕೇನ್ ಪತ್ತೆಯಾಗಿವೆ. (ಏಜೆನ್ಸೀಸ್​)

    ಬೆಂಗಳೂರು ರೇವ್​ ಪಾರ್ಟಿ ಕೇಸ್​: ದಿನಕ್ಕೊಂದು ಹೈಡ್ರಾಮ ಮಾಡುತ್ತಿರುವ ನಟಿ ಹೇಮಾಗೆ ಬಿಗ್​ ಶಾಕ್​!

    ತಗ್ಲಾಕ್ಕೊಂಡಳು ನಟಿ ಹೇಮಾ; ಬೆಂಗಳೂರು ರೇವ್ ಪಾರ್ಟಿಗೆ ಬಂದಿಲ್ಲ ಎಂದವಳ ರಕ್ತದಲ್ಲಿ ಡ್ರಗ್ಸ್ ಪತ್ತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts