More

    ನೀವು ಸಹ ಹೀಗೇನಾ? ನಿಮ್ಮಿಬ್ಬರಿಂದ ಇದನ್ನು ನಿರೀಕ್ಷಿಸಿರಲಿಲ್ಲ! ಸಿಎಸ್​ಕೆ ಆಟಗಾರರ ವಿರುದ್ಧ ಆರ್​ಸಿಬಿ ಫ್ಯಾನ್ಸ್​ ಕಿಡಿ

    ಬೆಂಗಳೂರು: ಕಳೆದ ಐಪಿಎಲ್​ ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 4 ವಿಕೆಟ್​ಗಳ ಅಂತರದಿಂದ ಸೋಲು ಕಂಡು, ಈ ಬಾರಿಯೂ ಕಪ್ ಗೆಲ್ಲುವ ಕನಸನ್ನು ಕನಸಾಗಿಯೇ ಉಳಿಸಿಕೊಂಡಿತು. ಇನ್ನು ಇದು ಹೀನಾಯ ಸೋಲಲ್ಲದೇ ಇದ್ದರೂ ಹೌದು, ಇದು ಹೀನಾಯ ಸೋಲು ಎಂದು ವಾದಿಸಿದ್ದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕೆಲವು ಅಭಿಮಾನಿಗಳು, ಆರ್​ಸಿಬಿ ಆಟಗಾರರನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಟೀಕಿಸಿದರು. ಸದ್ಯ ಈ ಬೆಳವಣಿಗೆ ಬೆಂಗಳೂರು ಅಭಿಮಾನಿಗಳನ್ನು ಭಾರೀ ಕೆರಳಿಸಿದೆ.

    ಇದನ್ನೂ ಓದಿ: ಚೆನ್ನೈನಲ್ಲಿ ಸ್ಯಾಮ್ಸನ್​-ಕಮ್ಮಿನ್ಸ್​ ಪಡೆಗಳ ಮುಖಾಮುಖಿ: ಹೇಗಿದೆ ತಂಡಗಳ ಬಲಾಬಲ!

    ‘ಈ ಸಲ ಕಪ್​ ನಿಮ್ಮದಲ್ಲ’ ಎಂದು ವಿರಾಟ್ ಕೊಹ್ಲಿ ಫೋಟೋವಿರುವ ಬ್ಯಾನರ್​ ಹಿಡಿದು ಆರ್​ಸಿಬಿ ತಂಡವನ್ನು ಹಿಯಾಳಿಸಿರುವ ಸಿಎಸ್​ಕೆ ಅಭಿಮಾನಿಗಳು ವ್ಯಾಪಕವಾಗಿ ಟೀಕಿಸಿ, ವಿರಾಟ್​ ಕೊಹ್ಲಿ ಮತ್ತು ತಂಡದ ಸಹ ಆಟಗಾರರನ್ನು ಟ್ರೋಲ್ ಮಾಡಿದ್ದಾರೆ. ಇನ್ನು ಇದೆಲ್ಲದರ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್​ನ ಮಾಜಿ ಆಟಗಾರ ಅಂಬಟಿ ರಾಯಡು ಕಳೆದ ಎಲಿಮಿನೇಟರ್​ ಪಂದ್ಯಕ್ಕೂ ಮುನ್ನವೇ ಆರ್​ಸಿಬಿ ವಿರುದ್ಧ ತೀವ್ರ ಟೀಕಾ ಪ್ರಹಾರ ಮಾಡಿದ್ದರು.

    ಅದರಲ್ಲೂ ಆರ್​ಆರ್ ವಿರುದ್ಧ ಸೋಲುತ್ತಿದ್ದಂತೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುಮ್ಮನಾಗದ ರಾಯಡು, ತಮ್ಮ ಇನ್​​ಸ್ಟಾಗ್ರಾಂನಲ್ಲಿ ಸಿಎಸ್​ಕೆ ಚಾಂಪಿಯನ್ಸ್​ ಆಗಿ ಮೆರೆದ ವಿಡಿಯೋ ಹಂಚಿಕೊಳ್ಳುವ ಮೂಲಕ ಆರ್​ಸಿಬಿ ಫ್ಯಾನ್ಸ್​ಗಳ ಕೆಂಗಣ್ಣಿಗೆ ಮತ್ತೊಮ್ಮೆ ಗುರಿಯಾಗಿದ್ದಾರೆ. ಇದರಿಂದ ತೀವ್ರ ಕೆಂಡಾಮಂಡಲಗೊಂಡ ಆರ್​ಸಿಬಿ ಅಭಿಮಾನಿಗಳು ಅಂಬಟಿ ರಾಯಡುಗೆ ಸಾಮಾಜಿಕ ಜಾಲತಾಣದಲ್ಲೇ ತಿರುಗೇಟು ನೀಡಿದ್ದು, ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

    ಇದನ್ನೂ ಓದಿ: ಈ ರಾಶಿಯವರಿಗಿಂದು ಕೆಲಸ ಕಾರ್ಯಗಳಲ್ಲಿ ಅಡೆತಡೆ: ನಿತ್ಯಭವಿಷ್ಯ

    https://x.com/mufaddal_vohra/status/1793623669799014426?ref_src=twsrc%5Etfw%7Ctwcamp%5Etweetembed%7Ctwterm%5E1793623669799014426%7Ctwgr%5E1d8482a10e4061a9b74a2677e224e8264d9ae032%7Ctwcon%5Es1_&ref_url=https%3A%2F%2Fcrictoday.com%2Fcricket%2Fdaily-cricket-news%2Fdeepak-chahar-matheesha-pathirana-make-fun-of-rcb-after-their-elimination-from-ipl-2024%2F

    ಆದ್ರೆ, ಈ ಮಧ್ಯೆ ಶಾಕಿಂಗ್ ಅನಿಸಿದ್ದು, ಇದೇ ಸಿಎಸ್​ಕೆ ತಂಡದ ಇನ್ನಿಬ್ಬರು ಸ್ಟಾರ್​ ಆಟಗಾರರು ಕೂಡ ರಾಯಡು ಜತೆಗೆ ಸೇರಿ, ಆರ್​ಸಿಬಿ ತಂಡದವರನ್ನು ಟೀಕಿಸಿದ್ದು ಅತೀವ ಬೇಸರ ಮೂಡಿಸಿದ್ದಲ್ಲದೇ, ಇವರಿಬ್ಬರ ಮೇಲಿದ್ದ ಗೌರವವನ್ನು ಕಳೆದುಕೊಳ್ಳುವಂತೆ ಮಾಡಿದೆ. ಅಂಬಟಿ ಹಂಚಿಕೊಂಡಿದ್ದ 2023ರಲ್ಲಿ ಸಿಎಸ್​ಕೆ ಕಪ್ ಗೆದ್ದು, ಸಂಭ್ರಮಿಸಿದ ವಿಡಿಯೋಗೆ ಮತೀಶಾ ಪತಿರಾಣ ಮತ್ತು ದೀಪಕ್ ಚಹರ್​ ಎಮೋಜಿಗಳನ್ನು ವ್ಯಕ್ತಪಡಿಸುವ ಮುಖೇನ ರಾಯಡು ಲೇವಡಿಗೆ ಸಾಥ್ ನೀಡಿರುವುದು ಸ್ಪಷ್ಟವಾಗಿದೆ,(ಏಜೆನ್ಸೀಸ್).

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ಇವರಿಬ್ಬರಿಲ್ಲ ಅಂದ್ರೆ IPL​ಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts