More

    ಚೆನ್ನೈನಲ್ಲಿ ಸ್ಯಾಮ್ಸನ್​-ಕಮ್ಮಿನ್ಸ್​ ಪಡೆಗಳ ಮುಖಾಮುಖಿ: ಹೇಗಿದೆ ತಂಡಗಳ ಬಲಾಬಲ!

    ಚೆನ್ನೈ: ಟೂರ್ನಿಯ ಚೊಚ್ಚಲ ಚಾಂಪಿಯನ್ಸ್​ ರಾಜಸ್ಥಾನ ರಾಯಲ್ಸ್​ ತಂಡ ಎಲಿಮಿನೇಟರ್​ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದು, ಐಪಿಎಲ್​-17ರಲ್ಲಿ ಶುಕ್ರವಾರ ನಡೆಯಲಿರುವ “ಸೆಮಿೈನಲ್​’ ಮಾದರಿಯ ಎರಡನೇ ಕ್ವಾಲಿೈಯರ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಎದುರು ಪ್ರಶಸ್ತಿ ಸುತ್ತಿಗೇರಲು ಸೆಣಸಲಿದೆ.

    ಸ್ಪಿನ್ನರ್​ಗಳೆ ಪ್ರಮುಖ ಅಸ್ತ್ರ: ಟೂರ್ನಿಯ ಮೊದಲ 9 ಪಂದ್ಯಗಳಲ್ಲಿ 8ರಲ್ಲಿ ಗೆದ್ದು, ಕೇವಲ 1ರಲ್ಲಿ ಸೋತಿದ್ದ ರಾಜಸ್ಥಾನ ತಂಡ,
    ನಂತರ ಸತತ 4 ಪಂದ್ಯಗಳಲ್ಲಿ ಸೋತಿತ್ತು. ಎಲಿಮಿನೇಟರ್​ನಲ್ಲಿ ಹಳಿಗೆ ಮರಳುವ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಜತೆಗೆ ಆರ್​. ಅಶ್ವಿನ್​ ಟೂರ್ನಿಯ ಮಹತ್ವದ ಟ್ಟದಲ್ಲಿ ಲಯಕ್ಕೆ ಮರಳಿರುವುದು ಪ್ಲಸ್​ ಪಾಯಿಂಟ್​. ರಾಜಸ್ಥಾನ ತಂಡ ಟೂರ್ನಿಯಲ್ಲಿ ಸಮರ್ಥ ಬೌಲಿಂಗ್​ ಕಾಂಬಿನೇಷನ್​ ಹೊಂದಿದ್ದು, ಸನ್​ರೈಸರ್ಸ್​ ಬ್ಯಾಟರ್​ಗಳಿಗೆ ಸವಾಲೊಡ್ಡಬಹುದು. ಜೋಸ್​ ಬಟ್ಲರ್​ ಸ್ಥಾನ ತುಂಬಬಲ್ಲ ಆಟಗಾರರ ಕೊರೆತೆ ರಾಜಸ್ಥಾನಕ್ಕಿದೆ. ಜತೆಗೆ ಯಶಸ್ವಿ ಜೈಸ್ವಾಲ್​ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಫಲರಾಗಿದ್ದು ಫಾಮ್​ರ್ಗೆ ಮರಳಬೇಕಿದೆ.

    ನಾಯಕ ಸಂಜು ಸ್ಯಾಮ್ಸನ್​ (521) , ರಿಯಾನ್​ ಪರಾಗ್​ ತಂಡದ ಪ್ರಮುಖ ಆಧಾರ ಸ್ತಂಭ ಎನಿಸಿದ್ದಾರೆ. ಆದರೆ ಹಿಂದಿನ 3 ಪಂದ್ಯಗಳಲ್ಲಿ ಸ್ಯಾಮ್ಸನ್​ 20ರ ಗಡಿ ದಾಟಿಲ್ಲ. ಹಿಂದಿನ ಪಂದ್ಯದಲ್ಲಿ ಶಿಮ್ರೊನ್​ ಹೆಟ್ಮೆಯರ್​, ರೋವ್ಮನ್​ ಪೊವೆಲ್​ ಆಟ ಆತ್ಮವಿಶ್ವಾಸ ವೃದ್ಧಿಸಿದೆ. ಯಜುವೇಂದ್ರ ಚಾಹಲ್​ ಹಾಗೂ ಆರ್​. ಅಶ್ವಿನ್​ ನಂಬಿಕೆ ಉಳಿಸಿಕೊಂಡಿದ್ದಾರೆ. ಆರ್​ಸಿಬಿಗೆ ಕಡಿವಾಣ ಹೇರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅಶ್ವಿನ್​ಗೆ ತವರಿನಲ್ಲಿ ಪ್ರಶಸ್ತಿ ಜಯಿಸುವ ಕನಸು ನನಸಾಗಿಸಿಕೊಳ್ಳುವ ಅವಕಾಶವಿದೆ. ಅಶ್ವಿನ್​ ತವರಿನ ಅಂಗಳದಲ್ಲಿ ಮ್ಯಾಜಿಕ್​ ಮಾಡುವ ನಿರೀೆ ರಾಜಸ್ಥಾನ ತಂಡಕ್ಕಿದೆ.

    ಬಿಗ್​ ಹಿಟ್ಟರ್​ಗಳ ಬಲ: ಟೂರ್ನಿಯಲ್ಲಿ ತಂಡವೊಂದರ ಗರಿಷ್ಠ ರನ್​ ಕಲೆಹಾಕಿರುವ ಸನ್​ರೈಸರ್ಸ್​ಗೆ “ಟ್ರಾವಿಷೇಕ್​’ ಪ್ರಮುಖ ಆಧಾರ. ಟ್ರಾವಿಸ್​ ಹೆಡ್​ (533), ಅಭಿಷೇಕ್​ ಶರ್ಮ (470) ಹಾಗೂ ಹೆನ್ರಿಕ್​ ಕ್ಲಾಸೆನ್​ (413) ಅವರಂತಹ ಸ್ಫೋಟಕ ಬ್ಯಾಟರ್​ಗಳ ಬಲವಿದೆ. ಆದರೆ ಸತತ 2 ಪಂದ್ಯಗಳಲ್ಲಿ ಟ್ರಾವಿಸ್​ ಹೆಡ್​ ಖಾತೆ ತೆರೆಯುವಲ್ಲಿ ವಿಲರಾಗಿದ್ದಾರೆ. ಅಭಿಷೇಕ್​ ಶರ್ಮ ಉಪಯುಕ್ತ ಕೊಡುಗೆ ನೀಡಿದ್ದಾರೆ. ಕ್ವಾಲಿೈಯರ್​ನಲ್ಲಿ ರಾಹುಲ್​ ತ್ರಿಪಾಠಿ ಅರ್ಧಶತಕದಾಟ ತಂಡದ ಬಲ ಹೆಚ್ಚಿಸಿದೆ.

    ಆಲ್ರೌಂಡರ್​ ನಿತೀಶ್​ ಕುಮಾರೆ ರೆಡ್ಡಿ, ಅಬ್ದುಲ್​ ಸಮದ್​, ಶಾಬಾಜ್​ ಅಹ್ಮದ್​ ಅಗತ್ಯ ಕೊಡುಗೆ ನೀಡುತ್ತ ಬಂದಿದ್ದಾರೆ. ಇನ್ನು ಬೌಲಿಂಗ್​ ವಿಭಾಗದಲ್ಲಿ ಟಿ. ನಟರಾಜನ್​ (18) ಪರ್ಪಲ್​ ಕ್ಯಾಪ್​ ರೇಸ್​ನಲ್ಲಿದ್ದು, ಸನ್​ರೈಸರ್ಸ್​ನ ಗರಿಷ್ಠ ವಿಕೆಟ್​ ಟೇಕರ್​ ಎನಿಸಿದ್ದಾರೆ. ಚೆಪಾಕ್​ ಅಂಗಣ ಇವರಿಗೆ ತವರಿನ ಅಂಗಣವಾಗಿದ್ದು, ದೇಶೀಯ ಟೂರ್ನಿ ಆಡಿರುವ ಅನುಭವ ಹೊಂದಿದ್ದಾರೆ. ನಾಯಕ ಪ್ಯಾಟ್​ ಕಮ್ಮಿನ್ಸ್​ (16) ನಿಂದ ಪರಿಣಾಮಕಾರಿ ಪ್ರದರ್ಶನ ಮೂಡಿಬಂದಿಲ್ಲ. ಭುವನೇಶ್ವರ್​ ಕುಮಾರ್​ (11) ಸಮರ್ಥ ಬೆಂಬಲ ನೀಡಬೇಕಿದೆ. ಆದರೆ ಅನುಭವಿ ಸ್ಪಿನ್ನರ್​ಗಳ ಕೊರತೆಯಿಂದಾಗಿ ರಾಜಸ್ಥಾನ ಎದುರು ಹಿನ್ನಡೆ ಎದುರಿಸುವ ಸಾಧ್ಯತೆಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts