ತೀರ್ಥಹಳ್ಳಿ: ರಕ್ತದಾನದಿಂದ ಒಮ್ಮೆ ಸಂಗ್ರಹಿಸುವ ಯೂನಿಟ್ ರಕ್ತದಲ್ಲಿ ನಾಲ್ವರ ಜೀವ ಉಳಿಸಲು ಸಾಧ್ಯವಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ಅರಳಸುರಳಿಯಲ್ಲಿ ಬಿಜೆಪಿ ಯುವ ಮೋರ್ಚಾ ಘಟಕದಿಂದ ರೋಟರಿ ಕ್ಲಬ್ ಸಹಯೋಗದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ದಾನಗಳಲ್ಲಿ ರಕ್ತದಾನ ಅತ್ಯಂತ ಶ್ರೇಷ್ಠವಾದುದು. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ರಕ್ತದಾನ ಮಾಡಬೇಕೆಂದು ತಿಳಿಸಿದರು.
ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಸಂತೋಷ್ ದೇವಾಡಿಗ, ಕುಕ್ಕೆ ಪ್ರಶಾಂತ್, ನಾರಾಯಣ ರಾವ್, ಶ್ರೀನಿಧಿ, ನಾಗೇಂದ್ರ, ಹರೀಶ್, ರಾಘು, ಸುದೀಪ್, ಪ್ರದೀಪ್ ಶೆಟ್ಟಿ ಇದ್ದರು.