ಇದೆಂಥಾ ಚಟ: ಬಂಗಾಳದಲ್ಲಿ ಕಾಂಡೋಮ್​ ಖರೀದಿಸುವವರ ಸಂಖ್ಯೆ ದಿಢೀರ್​ ಏರಿಕೆ! ಕಾರಣ ಮಾತ್ರ ವಿಚಿತ್ರ

Condom
Published on

ಕೋಲ್ಕತ: ಪಶ್ಚಿಮ ಬಂಗಾಳದ ದುರ್ಗಾಪುರ ಯುವಕರು ವಿಚಿತ್ರ ಚಟವೊಂದಕ್ಕೆ ದಾಸರಾಗಿದ್ದಾರೆ. ದುರ್ಗಾಪುರದ ನಗರ ಕೇಂದ್ರ, ಬಿಧಾನ್​ನಗರ್​, ಬೆನಾಚಿಟಿ, ಮಚಿಪರಾ, ಸಿ ಝೋನ್​, ಎ ಝೋನ್​ ಸೇರಿದಂತೆ ಬಹುತೇಕ ಕಡೆಗಳಲ್ಲಿ ಇದ್ದಕ್ಕಿದ್ದಂತೆ ಕಾಂಡೋಮ್​ ಮಾರಾಟ ಅಧಿಕವಾಗಿರುವುದು ಎಲ್ಲರನ್ನು ಚಕಿತಗೊಳಿಸಿದ್ದು, ಎಲ್ಲರ ತಲೆಯಲ್ಲಿ ಪ್ರಶ್ನೆಯೊಂದನ್ನು ಹುಟ್ಟು ಹಾಕಿದೆ.

ಈ ಕುತೂಹಲಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಅಂಗಡಿ ಮಾಲೀಕನೊಬ್ಬ ತಮ್ಮ ಪ್ರತಿನಿತ್ಯದ ಗ್ರಾಹಕರೊಬ್ಬರನ್ನು ಈ ಬಗ್ಗೆ ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಗ್ರಾಹಕ ಅಮಲೇರಿಸಿಕೊಳ್ಳಲು ಕಾಂಡೋಮ್​ ಖರಿದೀಸುತ್ತಿರುವುದಾಗಿ ಹೇಳಿದ್ದಾರೆ. ಈ ಹೊಸ ರೀತಿಯ ಚಟವನ್ನು ಕೇಳಿದ ಬಳಿಕ ದುರ್ಗಾಪುರದ ಮಂದಿ ತಬ್ಬಿಬ್ಬಾಗಿದ್ದಾರೆ.

ದುರ್ಗಾಪುರ ವಿಭಾಗೀಯ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಧೀಮನ್ ಮಂಡಲ್ ಎಂಬುವರು ಈ ಬಗ್ಗೆ ಮಾತನಾಡಿದ್ದಾರೆ. ಕಾಂಡೋಮ್​ನಲ್ಲಿ ಆರೊಮ್ಯಾಟಿಕ್ ಸಂಯುಕ್ತಗಳು ಇರುತ್ತವೆ. ಮದ್ಯವನ್ನು ತಯಾರಿಸಲು ಬಳಸಲಾಗುತ್ತದೆ. ಇದು ತಂಬಾ ವ್ಯಸನಕಾರಿಯಾಗಿದೆ. ಈ ಆರೊಮ್ಯಾಟಿಕ್ ಸಂಯುಕ್ತವು ಡೆಂಡ್ರೈಟ್ ಅಂಟುಗಳಲ್ಲಿಯೂ ಕಂಡುಬರುತ್ತದೆ. ಅನೇಕ ಜನರು ವ್ಯಸನಕ್ಕಾಗಿ ಡೆಂಡ್ರೈಟ್ ಅನ್ನು ಸಹ ಬಳಸುತ್ತಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ದುರ್ಗಾಪುರದ ಆರ್​ಇ ಕಾಲೇಜು ಮಾಡೆಲ್​ ಸ್ಕೂಲ್​ ಕೆಮಿಸ್ಟ್ರಿ ಶಿಕ್ಷಕ ನೂರುಲ್ ಹಕ್ ಮತ್ತಷ್ಟು ಮಾಹಿತಿ ನೀಡಿದ್ದಾರೆ. ಬಿಸಿ ನೀರಿಯಲ್ಲಿ ಹೆಚ್ಚು ಸಮಯದವರೆಗೆ ಕಾಂಡೋಮ್​ ಅನ್ನು ನೆನೆಸಿದಾಗ, ತುಂಬಾ ಪ್ರಮಾಣದ ಸಾವಯವ ಅಣುಗಳನ್ನು ಆಲ್ಕೊಹಾಲ್​ಯುಕ್ತ ಸಂಯುಕ್ತಗಳಾಗಿ ವಿಭಜಿಸುವ ಕಾರಣದಿಂದಾಗಿ ಮಾದಕತೆಯನ್ನು ಉಂಟುಮಾಡುತ್ತದೆ ಎಂದಿದ್ದಾರೆ.

ಈ ಮುಂಚೆ 3 ರಿಂದ 4 ಪಾಕೆಟ್​ ಮಾರಾಟವಾಗುತ್ತಿತ್ತು. ಆದರೆ, ಈಗ ಯಾವುದೇ ಸ್ಟೋರ್​ ಹುಡುಕಿದರೂ ಕಾಂಡೋಮ್​ ಸಿಗುವುದು ಕಷ್ಟವಾಗಿದೆಯಂತೆ. 21 ನೇ ಶತಮಾನದ ಮಧ್ಯಭಾಗದಲ್ಲಿ ನೈಜೀರಿಯಾದಲ್ಲಿ ಕೇವಲ ಚಟದಿಂದಾಗಿ ಟೂತ್‌ಪೇಸ್ಟ್ ಮತ್ತು ಶೂ ಇಂಕ್ ಮಾರಾಟವು ಸಾಮಾನ್ಯಕ್ಕಿಂತ 6 ಪಟ್ಟು ಹೆಚ್ಚಾಗಿತ್ತು. ಇದೀಗ ಕಾಂಡೋಮ್​ ಆ ಪಟ್ಟಿಗೆ ಸೇರಿದೆ. ಆದರೆ, ಇದು ಗಂಭೀರ ಆರೋಗ್ಯ ಪರಿಣಾಮವನ್ನು ಬೀರಬಹುದು ಎಂಬ ಚಿಂತೆ ದುರ್ಗಾಪುರ ಆರೋಗ್ಯ ಇಲಾಖೆಗೆ ಕಾಡುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net